ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಸ್ಥಿರತೆಗೆ ಹೆಚ್ಚುತ್ತಿದೆ ಉತ್ಪಾದನೆ, ಬೀಸುತ್ತಿದೆ ಬದಲಾವಣೆ ಗಾಳಿ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಜುಲೈ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪೆಕ್ ಗೆ ನೀಡಿದ ಕರೆಯನ್ನು ಸೌದಿ ಅರೇಬಿಯಾ ಗಂಭೀರವಾಗಿ ಪರಿಗಣಿಸಿರುವುದಕ್ಕೆ ಸಾಕ್ಷ್ಯಗಳು ಸಿಗುತ್ತಿವೆ. ತೈಲ ಮಾರುಕಟ್ಟೆಗೆ ಹೆಚ್ಚುವರಿ ತೈಲ ಪೂರೈಸಿ, ಬೆಲೆಯಲ್ಲಿ ಏರಿಕೆ ಆಗದಂತೆ ಸ್ಥಿರತೆ ಕಾಯ್ದುಕೊಳ್ಳಬೇಕು ಅನ್ನೋದು ಈ ಸೂಚನೆಯ ಉದ್ದೇಶ.

ಆ ಕಾರಣಕ್ಕೇ ಈಗಾಗಲೇ ಏಷ್ಯಾ ಖಂಡದಲ್ಲಿ ಒಪ್ಪಂದ ಮಾಡಿಕೊಂಡಿರುವ ಕೆಲವು ರಾಷ್ಟ್ರಗಳಿಗೆ ಮಧ್ಯಪ್ರಾಚ್ಯದಿಂದ ಹೆಚ್ಚಿನ ಪ್ರಮಾಣದ ತೈಲ ಪೂರೈಕೆಯಾಗುತ್ತಿದೆ. ಈ ವಿಚಾರದ ಬಗ್ಗೆ ತಿಳಿದಿರುವ ಜನರ ಪ್ರಕಾರ, ಒಪ್ಪಂದಗಳಿಂದ ಕಳಚಿಕೊಳ್ಳುವ ಮುನ್ನ ದಾಖಲೆ ಪ್ರಮಾಣದ ತೈಲ ಉತ್ಪಾದನೆಗೆ ಒಪೆಕ್ ನ ನಾಯಕತ್ವ ವಹಿಸಿರುವ ದೇಶಗಳು ಮುಂದಾಗಿವೆ.

ಇರಾನ್ನಿನ ಮೇಲೆ ಯುಎಸ್ ನಿರ್ಬಂಧ, ಭಾರತದಲ್ಲಿ ತೈಲ ಬೆಲೆ ಏರಿಕೆಇರಾನ್ನಿನ ಮೇಲೆ ಯುಎಸ್ ನಿರ್ಬಂಧ, ಭಾರತದಲ್ಲಿ ತೈಲ ಬೆಲೆ ಏರಿಕೆ

ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರಗಳು ಟ್ರಂಪ್ ನಿಂದ ಒತ್ತಡಕ್ಕೆ ಒಳಗಾಗಿವೆ. ಇನ್ನು ಸೌದಿ ರಾಷ್ಟ್ರಕ್ಕೆ ಪ್ರಮುಖ ಗ್ರಾಹಕರಾದ ಭಾರತದಂಥ ದೇಶಗಳು ಎಚ್ಚರಿಕೆ ನೀಡಿವೆ. ಬೆಲೆ ಏರಿಕೆಯಿಂದ ಬೇಡಿಕೆ ಕುಸಿಯುತ್ತದೆ. ಆದ್ದರಿಂದ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದಿದೆ. ಚೀನಾದಲ್ಲಿ, ಯುನಿಪೆಕ್- ದೇಶದ ಅತಿದೊಡ್ಡ ರಿಫೈನರಿ- ದುಬಾರಿ ಬೆಲೆ ಅಂತಲೇ ಖರೀದಿ ಕಡಿಮೆ ಮಾಡಿದೆ.

Saudi Arabia offer extra oil in Asia as OPEC leader pumps more

ಏಷ್ಯಾದ ಕನಿಷ್ಠ ಎರಡು ಖರೀದಿದಾರ ದೇಶಗಳಿಗೆ ಆಗಸ್ಟ್ ನಲ್ಲಿ ಸೌದಿ ಅರೇಬಿಯನ್ ತೈಲ ಕಂಪೆನಿಗಳು ಹೆಚ್ಚುವರಿ ತೈಲ ಪೂರೈಕೆ ಮಾಡಿವೆ. ಈ ಮಾಹಿತಿಯು ಖಾಸಗಿಯಾದ್ದರಿಂದ ಮೂಲವನ್ನು ಹೊರಗೆ ಬಿಟ್ಟುಕೊಟ್ಟಿಲ್ಲ. ಸೌದಿ ಅರ್ಮಾಕೋ ಎಂಬ ಸರಕಾರಿ ಕಂಪೆನಿ ಮಾಡಿಕೊಂಡಿರುವ ತಿಂಗಳ ಒಪ್ಪಂದಕ್ಕಿಂತ ಹೆಚ್ಚುವರಿ ಪ್ರಮಾಣದ ತೈಲ ಇದಾಗಿದೆ. ಆದರೆ ಆ ಕಂಪೆನಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ.

ಅರಬ್ ನ ಹಗುರ ಗ್ರೇಡ್ ಅನ್ನು ಏಷ್ಯಾದ ಪ್ರೊಸೆಸರ್ ಗೆ ಹೆಚ್ಚುವರಿಯಾಗಿ ಪೂರೈಸಲು ಕೇಳಿಕೊಂಡಿದ್ದಕ್ಕೆ, ಒಪ್ಪಿಕೊಳ್ಳಲಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಹೆಚ್ಚುವರಿ ಪೂರೈಕೆ ಪಡೆಯಲಾಗಿದೆ ಎಂಬುದರ ಗುಟ್ಟು ಬಿಟ್ಟುಕೊಟ್ಟಿಲ್ಲ.

ಸೌದಿಯ ಇಂಧನ ಸಚಿವ ಕಳೆದ ತಿಂಗಳು ನಡೆದ ಒಪೆಕ್ ಸಭೆಯಲ್ಲಿ, ಏನಾದರೂ ಮಾಡಿ. ಆದರೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಿ ಎಂದಿದ್ದಾರೆ. ಕಳೆದ ತಿಂಗಳು ಜಗತ್ತಿನ ಅತಿದೊಡ್ಡ ಕಚ್ಚಾ ತೈಲ ರಫ್ತುದಾರರಿಂದ ಆಗಸ್ಟ್ ತಿಂಗಳಿಗೆ ಏಷ್ಯಾದ ಕನಿಷ್ಠ ಆರು ದೇಶಗಳಿಗೆ ಒಪ್ಪಂದದಂತೆ ಪೂರ್ಣ ಪ್ರಮಾಣದಲ್ಲಿ ತೈಲ ಪೂರೈಕೆಯಾಗಿದೆ.

ಸೌದಿ ಅರೇಬಿಯಾದಿಂದ ಅಮೆರಿಕಕ್ಕೆ ಮಾಡಿಕೊಳ್ಳುವ ಆಮದು ಜುಲೈನಲ್ಲಿ ಶೇ ಐವತ್ತೊಂದರಷ್ಟು ಹೆಚ್ಚಿದೆ. ಇನ್ನು ಮಧ್ಯಪ್ರಾಚ್ಯ ದೇಶಗಳು ನಿತ್ಯದ ತೈಲ ಉತ್ಪಾದನೆಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಿವೆ.

English summary
Saudi Arabia considering America president Donald Trump warning. As an evidence offering extra crude volumes on top of it's contractual supplies to some buyers in Asia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X