ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಒಪ್ಪಂದದ ಪರಿಣಾಮ: ಭಾರತದ ತೈಲ ಪೂರೈಕೆಯಲ್ಲಿ ಮೊದಲ ಸ್ಥಾನಕ್ಕೆ ಮರಳಿದ ಸೌದಿ

|
Google Oneindia Kannada News

ನವದೆಹಲಿ, ಆಗಸ್ಟ್ 15: ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನವನ್ನು ಮರಳಿ ಪಡೆದುಕೊಳ್ಳಲಿದೆ.

ಸಾಂಪ್ರದಾಯಿಕವಾಗಿ ಭಾರತಕ್ಕೆ ಅತಿ ಹೆಚ್ಚು ತೈಲ ರಫ್ತು ಮಾಡುವುದು ಸೌದಿ ಅರೇಬಿಯಾ. ಆದರೆ, ಕಳೆದ ಎರಡು ಹಣಕಾಸು ವರ್ಷಗಳಿಂದ ಅದು ಈ ಸ್ಥಾನವನ್ನು ಕಳೆದುಕೊಂಡಿತ್ತು. ಇರಾಕ್, ಭಾರತಕ್ಕೆ ಅತಿ ಹೆಚ್ಚು ತೈಲ ರಫ್ತು ಮಾಡುತ್ತಿತ್ತು.

ತೈಲಕ್ಕಾಗಿ ಸೌದಿ ಅರೇಬಿಯಾ, ಅಮೆರಿಕ ಅವಲಂಬಿಸುವಂತಾದ ಭಾರತತೈಲಕ್ಕಾಗಿ ಸೌದಿ ಅರೇಬಿಯಾ, ಅಮೆರಿಕ ಅವಲಂಬಿಸುವಂತಾದ ಭಾರತ

ಸೌದಿ ಅರೇಬಿಯಾದ ತೈಲ ಕಂಪೆನಿ ಅರಾಮ್ಕೋ, ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಆಯಿಲ್-ಟು-ಕೆಮಿಕಲ್ ಉದ್ಯಮದ ಶೇ 20ರಷ್ಟು ಷೇರುಗಳನ್ನು ಖರೀದಿಸಿದೆ. ಇದರಿಂದ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತೈಲ ಮಾರುಕಟ್ಟೆ ಎಂದೇ ಪರಿಗಣಿಸಲಾಗಿರುವ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಮುಂಚೂಣಿಯ ಸ್ಥಾನವನ್ನು ಸೌದಿ ಅರೇಬಿಯಾ ಮರಳಿ ಪಡೆದುಕೊಳ್ಳಲಿದೆ.

Saudi Arabia Back To Indias Biggest Oil Supplier List Reliance Deal

ಅರಾಮ್ಕೋ ಕಂಪೆನಿಯು ರಿಲಯನ್ಸ್‌ನ ತೈಲದಿಂದ ರಾಸಾಯನಿಕದವರೆಗಿನ ವ್ಯವಹಾರದಲ್ಲಿ ಶೇ 20ರಷ್ಟು ಅಂದರೆ, ಸುಮಾರು 75 ಬಿಲಿಯನ್ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದೆ. ಜತೆಗೆ ದಿನಕ್ಕೆ 5,00,000 ಬ್ಯಾರಲ್‌ನಂತೆ ವರ್ಷಕ್ಕೆ 25 ಮಿಲಿಯನ್ ಟನ್ ಕಚ್ಚಾ ತೈಲ ಪೂರೈಕೆ ಮಾಡುವ ಒಪ್ಪಂದಕ್ಕೆ ಸಹಿಹಾಕಿದೆ.

ಪ್ರತಿ ದಿನ 5,00,000 ಬ್ಯಾರಲ್ ಕಚ್ಚಾತೈಲ ಪೂರೈಕೆ ಮಾಡುವುದು ರಿಲಯನ್ಸ್‌ನ ಒಟ್ಟಾರೆ ಕಚ್ಚಾತೈಲ ಖರೀದಿಯ ಶೇ 40ರಷ್ಟನ್ನು ಸರಿದೂಗಿಸುತ್ತದೆ. ಇದು ಅದು ಖರೀದಿ ಮಾಡಿದ ಷೇರುಗಳ ಮೌಲ್ಯಕ್ಕಿಂತಲೂ ಅಧಿಕ ಪ್ರಮಾಣದಲ್ಲಿದೆ. ರಿಲಯನ್ಸ್‌ಗೆ ಶೇ 20ರಷ್ಟು ಕಚ್ಚಾತೈಲದ ಅಗತ್ಯವನ್ನು ಈ ಮೊದಲು ಅದು ಪೂರೈಸುತ್ತಿತ್ತು.

"ಮೈಕ್ರೋಸಾಫ್ಟ್, ಸೌದಿ ಕಂಪನಿ ಜತೆ ರಿಲಯನ್ಸ್, 10 ಟ್ರಿಲಿಯನ್ ಗುರಿ"

2018-19ನೇ ಸಾಲಿನಲ್ಲಿ ಸೌದಿ ಅರೇಬಿಯಾ, ಭಾರತಕ್ಕೆ 40.33 ಮಿಲಿಯನ್ ಟನ್ ಕಚ್ಚಾತೈಲವನ್ನು ಪೂರೈಕೆ ಮಾಡಿತ್ತು. ಇರಾಕ್ 46.61 ಮಿಲಿಯನ್ ಟನ್ ಕಚ್ಚಾತೈಲ ಸರಬರಾಜು ಮಾಡಿತ್ತು.

English summary
Saudi Arabia to regian its spot of top oil supplier to India after Saudi Arabian Oil company Aramco made a deal with Reliance Industries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X