ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಗಿಂತಲೂ ಸಂದೇಸರಾ ಸೋದರರು ಬ್ಯಾಂಕುಗಳಿಗೆ ಹಾಕಿದ ನಾಮ ದೊಡ್ಡದು!

|
Google Oneindia Kannada News

ನವದೆಹಲಿ, ಜೂನ್ 29: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಸುಮಾರು 11,400 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ್ದರು. ಈಗ ಒಂದೊಂದಾಗಿ ಬೆಂಕಿಗೆ ಬರುತ್ತಿರುವ ಗುಜರಾತ್ ಮೂಲದ ಸ್ಟೆರ್ಲಿಂಗ್ ಬಯೋಟೆಕ್ ಲಿಮಿಟೆಡ್/ಸಂದೇಸರಾ ಸಮೂಹದ ಹಗರಣದ ಮಾಹಿತಿ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನೇ ಬೆಚ್ಚಿಬೀಳಿಸುವಂತಿವೆ.

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಮಾಹಿತಿ ಪ್ರಕಾರ ಸಂದೇಸರಾ ಸಹೋದರರು ಬ್ಯಾಂಕುಗಳಿಗೆ ವಂಚಿಸಿದ ಹಗರಣವು ಪಿಎನ್‌ಬಿ ವಂಚನೆ ಹಗರಣಕ್ಕಿಂತಲೂ ದೊಡ್ಡದು. ಸಂದೇಸರಾದ ಪ್ರಮುಖ ಮಾಲೀಕರಾದ ನಿತಿನ್ ಸಂದೇಸರಾ, ಚೇತನ್ ಸಂದೇಸರಾ ಮತ್ತು ದೀಪ್ತಿ ಸಂದೇಸರಾ ಭಾರತೀಯ ಬ್ಯಾಂಕುಗಳಿಗೆ ವಂಚಿಸಿರುವ ಮೊತ್ತ ಬರೋಬ್ಬರಿ 14,500 ಕೋಟಿ ರೂಪಾಯಿ. ನೀರವ್ ಮೋದಿ ಮತ್ತು ಅವರ ತಂಡ ಎಸಗಿದ್ದು 11,400 ಕೋಟಿ ರೂಪಾಯಿ ವಂಚನೆ.

2017ರ ಅಕ್ಟೋಬರ್‌ನಲ್ಲಿ ಸಿಬಿಐ, ಮೋಸ ಮತ್ತು ಬ್ಯಾಂಕ್‌ಗಳಿಗೆ 5,383 ಕೋಟಿ ರೂಪಾಯಿ ವಂಚನೆ ಎಸಗಿದ ಆರೋಪದಲ್ಲಿ ಸಂದೇಸರಾದ ಸಮೂಹದ ಕಂಪೆನಿ ಮತ್ತು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು. ಬಳಿಕ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

5,000 ಕೋಟಿ ವಂಚನೆ ಸಂದೇಸರ ಕುಟುಂಬಕ್ಕೆ ಸರಗಳ್ಳತನದಷ್ಟೇ ಸಲೀಸು !5,000 ಕೋಟಿ ವಂಚನೆ ಸಂದೇಸರ ಕುಟುಂಬಕ್ಕೆ ಸರಗಳ್ಳತನದಷ್ಟೇ ಸಲೀಸು !

ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜೂನ್ 27ರಂದು ಎಸ್‌ಬಿಎಲ್/ಸಂದೇಸರಾ ಸಮೂಹದ 9,778 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ.

ವಿದೇಶಿ ಶಾಖೆಗಳಿಂದ 9,000 ಕೋಟಿ ಸಾಲ

ವಿದೇಶಿ ಶಾಖೆಗಳಿಂದ 9,000 ಕೋಟಿ ಸಾಲ

ಮೂಲಗಳ ಪ್ರಕಾರ, ಸಂದೇಸರಾ ಸಮೂಹದ ವಿದೇಶಿ ಕಂಪೆನಿಗಳು ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಿಂದ ಸುಮಾರು 9,000 ಕೋಟಿ ಸಾಲ ಪಡೆದುಕೊಂಡಿವೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಜತೆಗೆ ಎಸ್‌ಬಿಎಲ್ ಸಮೂಹವು ಭಾರತೀಯ ಬ್ಯಾಂಕುಗಳಿಂದ ಭಾರತೀಯ ಮತ್ತು ವಿದೇಶಿ- ಎರಡೂ ಕರೆನ್ಸಿಗಳಲ್ಲಿ ಸಾಲವನ್ನು ಪಡೆದುಕೊಂಡಿತ್ತು.

ಸ್ಟರ್ಲಿಂಗ್ ಬಯೋಟೆಕ್ ಪ್ರಕರಣ: ಇ.ಡಿ.ಯಿಂದ 9778 ಕೋಟಿ ಮೌಲ್ಯದ ಆಸ್ತಿ ಜಪ್ತಿ ಸ್ಟರ್ಲಿಂಗ್ ಬಯೋಟೆಕ್ ಪ್ರಕರಣ: ಇ.ಡಿ.ಯಿಂದ 9778 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಸಾಲ ಕೊಟ್ಟ ಬ್ಯಾಂಕುಗಳು

ಸಾಲ ಕೊಟ್ಟ ಬ್ಯಾಂಕುಗಳು

ಆಂಧ್ರ ಬ್ಯಾಂಕ್, ಯುಸಿಒ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಸಂದೇಸರಾ ಸಮೂಹಕ್ಕೆ ಕೋಟಿಗಟ್ಟಲೆ ಸಾಲವನ್ನು ನೀಡಿವೆ ಎಂದು ಮೂಲಗಳು ತಿಳಿಸಿವೆ.

ಸಾಲದ ಹಣ ಬೇರೆ ಉದ್ದೇಶಕ್ಕೆ

ಸಾಲದ ಹಣ ಬೇರೆ ಉದ್ದೇಶಕ್ಕೆ

ಸಾಲದ ಮೂಲಕ ಪಡೆದ ಹಣವನ್ನು ಉದ್ದೇಶಿತವಲ್ಲದ ಕಾರ್ಯಗಳಿಗೆ ಬಳಸಲು ವಿನಿಯೋಗಿಸಲಾಗಿದೆ. ಅದನ್ನು ಅಕ್ರಮ ಹೂಡಿಕೆ, ವರ್ಗಾವಣೆಗಳಿಗೆ ವಿದೇಶಗಳಲ್ಲಿರುವ ಕಂಪೆನಿಗಳು ಮತ್ತು ವಿವಿಧ ದೇಶಿ ಜಾಲಗಳ ಮೂಲಕ ಬದಲಿಸಲಾಗಿದೆ. ಕಂಪೆನಿಗಳ ಮುಖ್ಯ ಮಾಲೀಕರು ಸಾಲದ ಹಣವನ್ನು ಅವರ ನೈಜೀರಿಯಾದ ತೈಲ ಉದ್ಯಮಕ್ಕೆ ವರ್ಗಾಯಿಸಿರುವುದು ಮಾತ್ರವಲ್ಲ, ತಮ್ಮ ವೈಯಕ್ತಿಕ ಉದ್ದೇಶಗಳಿಗೂ ಬಳಸಿಕೊಂಡಿದ್ದಾರೆ.

ಭಾರತದ ಪ್ರಯತ್ನಕ್ಕೆ ಜಯ: ಪಿಎನ್‌ಬಿ ವಂಚನೆ ಆರೋಪಿ ಗಡಿಪಾರಿಗೆ ಒಪ್ಪಿಗೆ ಭಾರತದ ಪ್ರಯತ್ನಕ್ಕೆ ಜಯ: ಪಿಎನ್‌ಬಿ ವಂಚನೆ ಆರೋಪಿ ಗಡಿಪಾರಿಗೆ ಒಪ್ಪಿಗೆ

ಸಂದೇಸರಾ ಆಸ್ತಿ ಮುಟ್ಟುಗೋಲು

ಸಂದೇಸರಾ ಆಸ್ತಿ ಮುಟ್ಟುಗೋಲು

ಸ್ಟೆರ್ಲಿಂಗ್ ಎನರ್ಜಿ ಎಕ್ಸ್‌ಪ್ಲೋರೇಷನ್ ಪ್ರೈ. ಕೋ. ಲಿಮಿಟೆಡ್‌ (ಸೀಪ್ಕೊ) ಅಧೀನದಲ್ಲಿರುವ ನೈಜೀರಿಯಾದಲ್ಲಿನ ಓಎಂಎಲ್ 143, ನಾಲ್ಕು ತೈಲ ಬಾವಿಗಳು ಮತ್ತು ಆಯಿಲ್ ಫೀಲ್ಡ್, ಪನಾಮಾದಲ್ಲಿ ನೋಂದಣಿಯಾಗಿರುವ ಹಾಗೂ ಅಟ್ಲಾಂಟಿಕ್ ಬ್ಲೂ ವಾಟರ್ ಸರ್ವೀಸಸ್‌ ಹೆಸರಿನಲ್ಲಿರುವ ತುಳಜಾ ಭವಾನಿ, ವರಿಂದಾ, ಭವ್ಯಾ ಮತ್ತು ಬ್ರಹ್ಮಣಿ ಎಂಬ ನಾಲ್ಕು ಹಡಗುಗಳು, ಎಸ್‌ಎಐಬಿ ಎಲ್‌ಎಲ್‌ಸಿ ಹೆಸರಿನಲ್ಲಿರುವ ಅಮೆರಿಕದಲ್ಲಿ ನೋಂದಣಿಯಾಗಿರುವ ಏರ್‌ಕ್ರಾಫ್ಟ್ 200 ಗಲ್ಫ್‌ಸ್ಟ್ರೀಮ್ ಮತ್ತು ಲಂಡನ್‌ನಲ್ಲಿ ಒಂದು ಫ್ಲ್ಯಾಟ್ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

English summary
Enforcement Directorate has claimed that, Sandesara brothers scam is bigger than the fraud committed by businessman and accused of PNB scam Nirav Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X