ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

600 ಮೆಗಾಪಿಕ್ಸೆಲ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಅಭಿವೃದ್ಧಿ ಪಡಿಸುತ್ತಿರುವ ಸ್ಯಾಮ್‌ಸಂಗ್

|
Google Oneindia Kannada News

ನವದೆಹಲಿ, ಡಿಸೆಂಬರ್ 07: ವಿಶ್ವದ ಖ್ಯಾತ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಕ ಸ್ಯಾಮ್‌ಸಂಗ್‌ ಹೊಸ ದಾಖಲೆ ಮಾಡಲು ಹೊರಟಿದೆ. ಇತ್ತೀಚೆಗಷ್ಟೇ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಸ್ಯಾಮ್‌ಸಂಗ್ ಇದೀಗ 600 ಎಂಪಿ ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಅಭಿವೃದ್ಧಿಪಡಿಸುತ್ತಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್‌ಸಂಗ್ 600 ಎಂಪಿ ಕ್ಯಾಮೆರಾ ಸೆನ್ಸಾರ್‌ ಅಭಿವೃದ್ಧಿಗೆ ಮುಂದಾಗಿದೆ. ಇದು ಸಾಧ್ಯವಾದಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಸ್ಮಾರ್ಟ್‌ಫೋನ್ ಸೆನ್ಸಾರ್ ಇದಾಗಲಿದೆ.

ಗೂಗಲ್ ಪಿಕ್ಸೆಲ್ 4 ಎ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿಗೂಗಲ್ ಪಿಕ್ಸೆಲ್ 4 ಎ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

ವರದಿ ಪ್ರಕಾರ ಸ್ಯಾಮ್‌ಸಂಗ್ 4k ಹಾಗೂ 8k ವೀಡಿಯೋಗಳು ಹೆಚ್ಚು ಮುಖ್ಯವಾಹಿನಿಗೆ ಬರುತ್ತಿರುವುದರಿಂದ, ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾವನ್ನು ನೀಡಲು ಯೋಜಿಸಿದೆ.

 Samsung Working On a 600 MP Mobile Camera Sensor:Report

ಕ್ಯಾಮೆರಾ ಅಭಿವೃದ್ಧಿಯ ಜೊತೆಗೆ ಸ್ಯಾಮ್‌ಸಂಗ್ ತನ್ನ ಮೊಬೈಲ್ ಗಾತ್ರವನ್ನು ಕಡಿತಗೊಳಿಸಲು ಮುಂದಾಗಿದೆ. ಗಾತ್ರದ ಸಮಸ್ಯೆಗೆ ಒಂದು ಪರಿಹಾರವೆಂದರೆ ಸ್ಯಾಮ್‌ಸಂಗ್ ಇದನ್ನು ಡಿಟ್ಯಾಚೇಬಲ್ ಕ್ಯಾಮೆರಾ ಮಾಡ್ಯೂಲ್ ಮಾಡುತ್ತದೆ. ಮೊಟೊರೊಲಾ ತನ್ನ ಮೋಟೋ Zನೊಂದಿಗೆ ವರ್ಷಗಳ ಹಿಂದೆ ಇದೇ ರೀತಿ ಮಾಡಿದೆ.

ಇನ್ನು 600 ಎಂಪಿ ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಅಭಿವೃದ್ಧಿಸುತ್ತಿರುವ ಸ್ಯಾಮ್‌ಸಂಗ್ ಕಂಪನಿಯು ಯಾವ ಮೊಬೈಲ್‌ನೊಂದಿಗೆ ಅಳವಡಿಸುತ್ತಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಸದ್ಯ ಅನೇಕ ಮೊಬೈಲ್ ಕಂಪನಿಗಳಲ್ಲಿ 48 ಮತ್ತು 64 ಮೆಗಾಪಿಕ್ಸೆಲ್ ಕ್ಯಾಮೆರಾಗಳು ತುಂಬಾ ಸಾಮಾನ್ಯವಾಗಿದೆ. ಆದರೆ ಸ್ಯಾಮ್‌ಸಂಗ್ ಭವಿಷ್ಯದ ಯೋಜನೆಯನ್ನು ಸಿದ್ಧಪಡಿಸಿದೆ.

English summary
Samsung earlier this year had revealed its plans to offer 600-megapixel camera sensors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X