ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಯ್ಡಾದಲ್ಲಿನ ಉತ್ಪಾದನಾ ಕೇಂದ್ರದಲ್ಲಿ 5,000 ಕೋಟಿ ರೂ. ಹೂಡಿಕೆ ಮಾಡಲಿದೆ ಸ್ಯಾಮ್‌ಸಂಗ್

|
Google Oneindia Kannada News

ಲಕ್ನೋ, ನವೆಂಬರ್ 24: ದಕ್ಷಿಣ ಆಫ್ರಿಕಾ ಮೂಲದ ಖ್ಯಾತ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್ ಉತ್ತರ ಪ್ರದೇಶದ ನೋಯ್ದಾದಲ್ಲಿರುವ ತನ್ನ ಉತ್ಪಾದನಾ ಕೇಂದ್ರದಲ್ಲಿ ಸುಮಾರು 5,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.

Recommended Video

Samsung ಭಾರತದಲ್ಲಿ ನೂತನವಾಗಿ 5 ಸಾವಿರ ಕೋಟಿ ಹೂಡಿಕೆ | Oneindia Kannada

ಕಂಪನಿಯ ತನ್ನ ಸ್ಮಾರ್ಟ್ ಫೋನ್ ಡಿಸ್ ಪ್ಲೇ ಉತ್ಪಾದನಾ ಕೇಂದ್ರದಲ್ಲಿ ರಫ್ತು ಆಧಾರಿತ ಘಟಕ (ಇಒಯು) ಜನವರಿ-ಫೆಬ್ರವರಿ 2021 ರ ವೇಳೆಗೆ ಸಿದ್ಧವಾಗಲಿದೆ ಮತ್ತು ಏಪ್ರಿಲ್ 2021 ರ ವೇಳೆಗೆ ವಾಣಿಜ್ಯ ಉತ್ಪಾದನೆಯನ್ನು ಸಾಧಿಸುವ ನಿರೀಕ್ಷೆಯಿದೆ.

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಚೇರ್ಮನ್ ಲೀ ಕುನ್ ಹೀ ಇನ್ನಿಲ್ಲಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಚೇರ್ಮನ್ ಲೀ ಕುನ್ ಹೀ ಇನ್ನಿಲ್ಲ

'' ಇಲ್ಲಿಯವರೆಗೆ ಕಂಪನಿಯು ಸ್ಯಾಮ್ ಸಂಗ್ ಕಂಪನಿ ಗ್ರೀನ್ ಫೀಲ್ಡ್ ಸ್ಥಾವರದಲ್ಲಿ ಸುಮಾರು 1,500 ಕೋಟಿ ರೂ ಹೂಡಿಕೆ ಮಾಡಿದೆ. ಒಮ್ಮೆ ಘಟಕವು ಕಾರ್ಯರೂಪಕ್ಕೆ ಬಂದರೆ, ಭಾರತ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಮೂರನೇ ರಾಷ್ಟ್ರವಾಗಲಿದೆ " ಎಂದು ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ಸತೀಶ್ ಮಹಾನ ಹೇಳಿದ್ದಾರೆ.

Samsung To Invest Rs 5000 Crore To Expand Noida Manfacturing Plant

ಕೊರೊನಾವೈರಸ್ ಕೇಂದ್ರಸ್ಥಾನವಾಗಿದ್ದ ಚೀನಾದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹೆಚ್ಚಿದ ಬಳಿಕ ಅನೇಕ ಕಂಪನಿಗಳು ಭಾರತ ಸೇರಿದಂತೆ ಬೇರೆ ರಾಷ್ಟ್ರಗಳಿಗೆ ತನ್ನ ಉತ್ಪಾದನಾ ಘಟಕಗಳನ್ನು ಸ್ಥಳಾಂತರಗೊಳಿಸಲು ಮುಂದಾಗಿವೆ. ಇದರಲ್ಲಿ ಸ್ಯಾಮ್‌ಸಂಗ್‌ನ ಈ ಯೋಜನೆಯು ಸೇರಿದೆ. ಈ ದೊಡ್ಡ ಮಟ್ಟಿನ ಹೂಡಿಕೆಯಿಂದಾಗಿ ಸುಮಾರು 1,500 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಎಲ್ಲಾ ರೀತಿಯ ಮತ್ತು ಗಾತ್ರದ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆ , ಜೋಡಣೆ, ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಸ್ಯಾಮ್‌ಸಂಗ್ ನೊಯ್ದಾದಲ್ಲಿ ಡಿಸ್ ಪ್ಲೇ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದೆ.

English summary
South Korea Company Electronics major Samsung will invest nearly Rs 5000 Crore In smartphone display manufacturing In noida
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X