ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ: 7000mAh ಬ್ಯಾಟರಿ

|
Google Oneindia Kannada News

ನವದೆಹಲಿ, ಜನವರಿ 03: ದಕ್ಷಿಣ ಕೊರಿಯಾದ ಖ್ಯಾತ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಕ ಸ್ಯಾಮ್‌ಸಂಗ್ ಸದ್ಯದಲ್ಲೇ ಭಾರತದಲ್ಲಿ ತನ್ನ ಗ್ಯಾಲಕ್ಸಿ ಎಂ12 ಅನ್ನು ಬಿಡುಗಡೆ ಮಾಡಬಹುದು. ಈ ಹೊಸ ಸ್ಮಾರ್ಟ್‌ಫೋನ್‌ 7000 mAh ಬ್ಯಾಟರಿಯೊಂದಿಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಎಕ್ಸಿನೋಸ್ 850 ಪ್ರೊಸೆಸರ್ ಹೊಂದಿರಬಹುದು. ಇದರ ಫೋನ್ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಫೋನ್‌ನಲ್ಲಿ 3 ಜಿಬಿ RAM ಇರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 12 ಹೆಸರಿನಲ್ಲಿ ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. 7000 mAh ದೊಡ್ಡ ಬ್ಯಾಟರಿಯೊಂದಿಗೆ ಫೋನ್ ಅನ್ನು ಬಿಡುಗಡೆ ಮಾಡಲಾಗುವುದು, ಇದು ವೇಗದ ಚಾರ್ಜಿಂಗ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ.

ಶಿಯೊಮಿ Mi 11 ಬಿಡುಗಡೆ: ಹೊಸ ಮೊಬೈಲ್ ಫೀಚರ್ಸ್ ತಿಳಿದುಕೊಳ್ಳಿಶಿಯೊಮಿ Mi 11 ಬಿಡುಗಡೆ: ಹೊಸ ಮೊಬೈಲ್ ಫೀಚರ್ಸ್ ತಿಳಿದುಕೊಳ್ಳಿ

ಆನ್‌ಲೀಕ್ಸ್‌ನ ವರದಿಯ ಪ್ರಕಾರ, ಗ್ಯಾಲಕ್ಸಿ ಎಂ 12 ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿರಲಿದೆ. ಫೋನ್‌ನ ಕ್ಯಾಮೆರಾ ಚದರ ಆಕಾರದಲ್ಲಿದೆ ಎಂದು ಹೇಳಲಾಗಿದೆ. ಇದಲ್ಲದೆ, ಇದು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರುತ್ತದೆ. ಸ್ಯಾಮ್‌ಸಂಗ್‌ನ ಮುಂಬರುವ ಫೋನ್ ಮಧ್ಯಮ ಬಜೆಟ್ ಫೋನ್ ಆಗಿದ್ದು, ಇದು ರಿಯಲ್ಮೆ ನಾರ್ಜೊ, ರೆಡ್‌ಮಿ ನೋಟ್ ಸರಣಿಯೊಂದಿಗೆ ಸ್ಪರ್ಧಿಸಲಿದೆ ಎಂದು ಕೆಲವು ವರದಿಗಳು ತಿಳಿಸಿವೆ.

Samsung Galaxy M12 Smartphone: Expected To Launch In India Next Week

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಫೀಚರ್ಸ್‌:

ಪರ್ಫಾಮೆನ್ಸ್ : Exynos 7904 -14nm

ಡಿಸ್‌ಪ್ಲೇ : 6.7 ಇಂಚ್ (17.01cm)

ಸ್ಟೋರೇಜ್: 64 ಜಿಬಿ

ಕ್ಯಾಮೆರಾ: 25MP+8MP+5MP

ಬೆಲೆ: 15,200 ರೂ.

RAM: 4 ಜಿಬಿ

English summary
Samsung might launch the Galaxy M12 Smartphone In India Next week
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X