• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಮಾರ್ಟ್ ಫೋನ್ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಸಲ್ಲು !!!

|

ಮುಂಬೈ, ಮಾರ್ಚ್ 9: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು, ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಯೊಂದನ್ನು ಶೀಘ್ರವೇ ಆರಂಭಿಸಲಿದ್ದಾರೆ. ಕಂಪನಿಯ ಹೆಸರನ್ನೂ ಈಗಾಗಲೇ ರಿಜಿಸ್ಟರ್ ಮಾಡಿಸಲಾಗಿದ್ದು ಅದರ ಹೆಸರು 'ಬೀಯಿಂಗ್ ಸ್ಟಾರ್ಟ್' ಎಂದು ಇರಲಿದೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಬೀಯಿಂಗ್ ಹ್ಯೂಮನ್ ಎಂಬ ವಸ್ತ್ರ ತಯಾರಿಕಾ ಸಂಸ್ಥೆಯನ್ನೂ ಹೊಂದಿರುವ ಸಲ್ಮಾನ್ ಖಾನ್ ಇದೀಗ ಬೀಯಿಂಗ್ ಪದವನ್ನೇ ಇಟ್ಟುಕೊಂಡು ಸ್ಮಾರ್ಟ್ ಫೋನ್ ಕಂಪನಿ ಹುಟ್ಟುಹಾಕಲು ನಿರ್ಧರಿಸಿದ್ದಾರೆ.[ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಖಾನ್ ನಿರ್ದೋಷಿ]

ಈಗಾಗಲೇ ಕಂಪನಿ ಸ್ಥಾಪನೆಗೆ ಅಗತ್ಯವಾಗಿ ಬೇಕಿರುವ ಬಂಡವಾಳ ಹೂಡಿಕೆ ಪ್ರಕ್ರಿಯೆಯನ್ನು ಸಲ್ಮಾನ್ ಖಾನ್ ಆರಂಭಿಸಿದ್ದು, ಕಂಪನಿಯ ಬಹುತೇಕ ಷೇರುಗಳನ್ನು ತಮ್ಮ ಹೆಸರಿನಲ್ಲೇ ಸಲ್ಲು ಹೊಂದಿರಲಿದ್ದಾರೆಂದು ಮೂಲಗಳು ಹೇಳಿವೆ. ಇನ್ನುಳಿದಂತೆ, ಭಾಗಶಃ ಷೇರುಗಳು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಇರಲಿವೆ.

ಖುದ್ದು ರಾಯಭಾರಿ ಆಗಲಿರುವ ಸಲ್ಲು

ಖುದ್ದು ರಾಯಭಾರಿ ಆಗಲಿರುವ ಸಲ್ಲು

ಮತ್ತೊಂದೆಡೆ, ಕಂಪನಿಯ ಬ್ರಾಂಡ್ ಅಂಬಾಸಡರ್ ಗಳ ನೇಮಕಕ್ಕೂ ಚಾಲನೆ ನೀಡಲಾಗಿದ್ದು, ಜನಪ್ರಿಯ ಮಾಡೆಲ್ ಗಳು ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಗಳನ್ನು ಬ್ರಾಂಡ್ ರಾಯಭಾರಿಗಳನ್ನಾಗಿ ಬಳಸಲು ನಿರ್ಧರಿಸಲಾಗಿದೆ. ಅಲ್ಲದೆ, ಖುದ್ದು ಸಲ್ಮಾನ್ ಖಾನ್ ಕೂಡ ಕಂಪನಿಯ ಪ್ರಚಾರ ರಾಯಭಾರಿಯಾಗಲಿದ್ದಾರೆ ಎಂದು ಹೇಳಲಾಗಿದೆ.[ಜಿಯೊ ಎಫೆಕ್ಟ್ ನಿಂದಾಗಿ ಏರ್ ಟೆಲ್ ಲಾಭದಲ್ಲಿ ಶೇ. 54ರಷ್ಟು ನಷ್ಟ!]

ಪ್ರತಿಷ್ಠಿತ ಕಂಪನಿಗಳ ಸಹಯೋಗ

ಪ್ರತಿಷ್ಠಿತ ಕಂಪನಿಗಳ ಸಹಯೋಗ

ಆರಂಭದಲ್ಲಿ, ಸ್ಯಾಮ್ ಸಂಗ್ ಹಾಗೂ ಮೈಕ್ರೋ ಮ್ಯಾಕ್ಸ್ ಸಂಸ್ಥೆಗಳ ಸಹಯೋಗದೊಂದಿಗೆ ಸ್ಮಾರ್ಟ್ ಫೋನ್ ತಯಾರಿಕೆಗೆ ಕೈ ಹಾಕಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ. ಈಗಾಗಲೇ ಆ ಕಂಪನಿಗಳೊಂದಿಗೆ ಮಾತುಕತೆಯೂ ಆರಂಭವಾಗಿದೆ.[ಮಾರ್ಚ್ ನಂತರ ತಣ್ಣಗಾಗುತ್ತಾ ಜಿಯೊ ಬಿರುಗಾಳಿ?]

ಚೀನಾಕ್ಕೆ ಸಡ್ಡು ಹೊಡೆಯಲು ನಿರ್ಧಾರ

ಚೀನಾಕ್ಕೆ ಸಡ್ಡು ಹೊಡೆಯಲು ನಿರ್ಧಾರ

ಚೀನಾದ ಮೊಬೈಲ್ ಕಂಪನಿಗಳಾದ ಒಪ್ಪೊ, ವಿವೋ, ಕ್ಸಿಯೋಮಿ, ಲೆನೊವೊ ಮುಂತಾದ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದು ಇವಕ್ಕೆ ಪ್ರಬಲ ಸ್ಪರ್ಧೆಯೊಡ್ಡಲು ಭಾರತದಲ್ಲಿ ಸ್ವದೇಶಿಯೆಂದು ಹೇಳಲು ಕೇವಲ ಎರಡೇ ಕಂಪನಿಗಳು (ಇಂಟೆಕ್ಸ್ ಹಾಗೂ ಮೈಕ್ರೋ ಮ್ಯಾಕ್ಸ್) ಇದ್ದು, ಈ ನಿಟ್ಟಿನಲ್ಲಿ ಭಾರತೀಯರ ಸವಾಲನ್ನು ಚೀನಾದ ಮೊಬೈಲ್ ಸಂಸ್ಥೆಗಳಿಗೆ ಮನದಟ್ಟು ಮಾಡಲು ತಾವೂ ಒಂದು ಕಂಪನಿ ಸ್ಥಾಪಿಸಲು ಸಲ್ಲು ಮೀಯಾ ನಿರ್ಧರಿಸಿದ್ದಾರೆಂದು ಹೇಳಲಾಗಿದೆ.[ಇನ್ನು 'ಜಿಯೊ' ಮೂಲಕ ಕಾರು ನಿಯಂತ್ರಿಸಿ, ಮೆಟ್ರೊ ಟಿಕೆಟ್ ಬುಕ್ ಮಾಡಿ!]

ಆನಂತರವಷ್ಟೇ ಶೋ ರೂಂಗಳ ಸ್ಥಾಪನೆ

ಆನಂತರವಷ್ಟೇ ಶೋ ರೂಂಗಳ ಸ್ಥಾಪನೆ

ಬೀಯಿಂಗ್ ಸ್ಮಾರ್ಟ್ ಫೋನುಗಳು ಆರಂಭದಲ್ಲಿ ಆನ್ ಲೈನ್ ಮೂಲಕವೇ ಮಾರಾಟವಾಗಲಿವೆ. ಆನಂತರ, ಅವುಗಳ ಮಾರುಕಟ್ಟೆ ಅಭಿವೃದ್ಧಿಯಾದಲ್ಲಿ ಅಧಿಕೃತ ಶೋ ರೂಂಗಳ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ, ಬೀಯಿಂಗ್ ಹ್ಯೂಮನ್ ಬ್ರಾಂಡ್ ನ ಬಟ್ಟೆ ಶೋ ರೂಂಗಳಲ್ಲಿಯೂ ಬೀಯಿಂಗ್ ಸ್ಮಾರ್ಟ್ ಫೋನುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಈಗ ಸಾಕಾರಕ್ಕೆ ಬಂದ ಐಡಿಯಾ

ಈಗ ಸಾಕಾರಕ್ಕೆ ಬಂದ ಐಡಿಯಾ

ಸಲ್ಮಾನ್ ಖಾನ್ ಅವರ ಆಪ್ತ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ಸ್ಮಾರ್ಟ್ ಫೋನ್ ಕಂಪನಿಯೊಂದನ್ನು ಹುಟ್ಟುಹಾಕುವ ಐಡಿಯಾ ಎರಡು ವರ್ಷಗಳ ಮೊದಲೇ ಹೊಳೆದಿತ್ತಂತೆ. ಹಾಗಾಗಿ, ಅವರು ಆಗಿನಿಂದಲೇ ಆ ಬಗ್ಗೆ ಆಸಕ್ತಿ ತಳೆದಿದ್ದರು ಎಂದು ಹೇಳಲಾಗಿದೆ.

English summary
Salman Khan is dialing a raft of investors for his smartphone venture and names his new company 'beingsmart', says Economic times report. He’s currently building an operational management team to be headed by a professional with leadership stints at Samsung and Micromax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X