ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಸಿಇಒ ಆಗಿ ಸಲೀಲ್ ಪರೇಖ್ ಮರು ನೇಮಕ

|
Google Oneindia Kannada News

ಬೆಂಗಳೂರು, ಮೇ 22: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲಿಲ್ ಎಸ್ ಪರೇಖ್ ಮರು ನೇಮಕವಾಗಿದ್ದಾರೆ

ಇನ್ಫೋಸಿಸ್ ಸಿಇಒ ಹಾಗೂ ಎಂಡಿಯಾಗಿ ಸಲೀಲ್ ಪರೇಖ್ ಅವರನ್ನು ಮುಂದಿನ ಐದು ವರ್ಷಗಳಿಗೆ ನೇಮಿಸಲಾಗಿದೆ ಎಂದು ಇನ್ಫೋಸಿಸ್ ಬೋರ್ಡ್ ಮೇ 22ರಂದು ಪ್ರಕಟಿಸಿದೆ. ಪರೇಖ್ ಜುಲೈ 1, 2022 ರಿಂದ ಮಾರ್ಚ್ 31, 2027 ರ ತನಕ ಸಿಇಒ ಆಗಿರಲಿದ್ದಾರೆ.

ಇನ್ಫೋಸಿಸ್ ಸಂಸ್ಥೆ ಸಿಇಒ ಆಗುವುದಕ್ಕೂ ಮುನ್ನ ಕ್ಯಾಪ್ಜೆಮಿನಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಪರೇಖ್ 25 ವರ್ಷಗಳ ದೀರ್ಘ ಅವಧಿಗೆ ಇದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇನ್ಫೋಸಿಸ್ ಸಂಸ್ಥೆಯಲ್ಲಿ 5 ವರ್ಷದಿಂದ ಹಲವು ಏಳು ಬೀಳು ಕಂಡಿದ್ದಾರೆ. ಕಂಪನಿಯ ಉತ್ತರ ಅಮೆರಿಕ ವಿಭಾಗದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿದ್ದರು.

Salil Parekh reappointed as Infosys CEO & MD for another five years

ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಇಂಜಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದಲ್ಲದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲೂ ಪದವಿ ಗಳಿಸಿದ್ದಾರೆ.

ಬೆಂಗಳೂರು ಮೂಲದ ಪ್ರಮುಖ ಐಟಿ ರಫ್ತು ಕಂಪನಿ ಇನ್ಫೋಸಿಸ್ ಏಪ್ರಿಲ್ 13ರಂದು ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ 12ರಷ್ಟು ಲಾಭ ಕಂಡು ಬಂದಿದ್ದರೂ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2ರಷ್ಟು ಲಾಭ ಇಳಿಕೆಯಾಗಿದೆ.

ಈ ತ್ರೈಮಾಸಿಕದಲ್ಲಿ 5,686 ಕೋಟಿ ರು ನಿವ್ವಳ ಲಾಭ ದಾಖಲಿಸಿದೆ. FY22 ರ ಕೊನೆಯಲ್ಲಿ ಕಂಪನಿಯು 3,14,015 ಉದ್ಯೋಗಿಗಳನ್ನು ಹೊಂದಿತ್ತು. Q3FY22 ರ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ 2,92,067 ರಷ್ಟಿದೆ. ಮಹಿಳಾ ಉದ್ಯೋಗಿಗಳು ಒಟ್ಟು ಉದ್ಯೋಗಿ ಸಾಮರ್ಥ್ಯದ ಶೇ 39.6 ರಷ್ಟು ಹೊಂದಿದ್ದಾರೆ. Q3FY22 ರ ಅವಧಿಯಲ್ಲಿ 25.5 ಶೇಕಡಾಕ್ಕೆ ಹೋಲಿಸಿದರೆ ತ್ರೈಮಾಸಿಕದಲ್ಲಿ ಕಂಪನಿಯ ಕ್ಷೀಣತೆ(attrition)ಯು 27.7 ಶೇಕಡಾಕ್ಕೆ ಏರಿದೆ.

English summary
Infosys' Board of Directors reappointed Salil Parekh as CEO and MD for another five years, the IT major announced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X