ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲಾಕ್ ಟೆಕ್ನಾಲಜೀಸ್ ಅನ್ನು 2.03 ಲಕ್ಷ ಕೋಟಿಗೆ ಖರೀದಿಸಲು ಸೇಲ್ಸ್‌ಫೋರ್ಸ್‌ ಒಪ್ಪಂದ

|
Google Oneindia Kannada News

ವಾಷಿಂಗ್ಟನ್‌, ಡಿಸೆಂಬರ್ 02: ಅಮೆರಿಕಾ ಮೂಲದ ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ಕಂಪನಿ ಸೇಲ್ಸ್‌ಫೋರ್ಸ್‌, ಕೆಲಸದ ಆಧಾರಿತ ಮೆಸೇಜಿಂಗ್ ಅಪ್ಲಿಕೇಶನ್ ಸ್ಲಾಕ್ ಟೆಕ್ನಾಲಜೀಸ್ ಅನ್ನು 27.7 ಬಿಲಿಯನ್ ಡಾಲರ್ (ಸುಮಾರು 2.03 ಲಕ್ಷ ಕೋಟಿ ರೂ.) ಒಪ್ಪಂದದಲ್ಲಿ ಖರೀದಿಸಲು ಮುಂದಾಗಿದೆ.

ಬಿಸಿನೆಸ್ ಸಾಫ್ಟ್‌ವೇರ್ ಪ್ರವರ್ತಕ ಸೇಲ್ಸ್‌ಫೋರ್ಸ್.ಕಾಮ್ ತನ್ನ ದೀರ್ಘಾವಧಿಯ ಉದ್ಯಮ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್ ವಿರುದ್ಧ ಸ್ಪರ್ಧಿಸಲು ವರ್ಕ್‌ಪ್ಲೇಸ್‌ ಅಪ್ಲಿಕೇಶನ್ ಸ್ಲಾಕ್ ಅನ್ನು 27.7 ಬಿಲಿಯನ್‌ ಡಾಲರ್‌ಗೆ ಖರೀದಿಸುತ್ತಿದೆ.

ಬಾಟಾ ಕಂಪನಿಯ ಜಾಗತಿಕ ಸಿಇಒ ಆಗಿ ಸಂದೀಪ್ ಕಠಾರಿಯಾ ನೇಮಕ: ಮೊದಲ ಭಾರತೀಯ ಎಂಬ ಹೆಗ್ಗಳಿಕೆಬಾಟಾ ಕಂಪನಿಯ ಜಾಗತಿಕ ಸಿಇಒ ಆಗಿ ಸಂದೀಪ್ ಕಠಾರಿಯಾ ನೇಮಕ: ಮೊದಲ ಭಾರತೀಯ ಎಂಬ ಹೆಗ್ಗಳಿಕೆ

ಸೇಲ್ಸ್‌ಫೋರ್ಸ್‌ನ 21 ವರ್ಷಗಳ ಇತಿಹಾಸದಲ್ಲಿ ಈ ಸ್ವಾಧೀನವು ಅತ್ಯಂತ ದೊಡ್ಡ ಪ್ರಮಾಣದ್ದಾಗಿದೆ. ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಪ್ರೋಗ್ರಾಮ್‌ಗಳನ್ನು ಸ್ಥಾಪಿಸುವ ಮತ್ತು ಯಾವುದೇ ಇಂಟರ್ನೆಟ್ ಸಂಪರ್ಕಿತ ಸಾಧನದಲ್ಲಿ ಬಳಸಬಹುದಾದ ಚಂದಾದಾರಿಕೆ ಸೇವೆಯಾಗಿ ಸಾಫ್ಟ್‌ವೇರ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಿದವರಲ್ಲಿ ಸೇಲ್ಸ್‌ಫೋರ್ಸ್ ಮೊದಲ ಕಂಪನಿಯಾಗಿದೆ.

Salesforce is buying workplace messaging app Slack for $27.7 billion

ಸೇಲ್ಸ್‌ಫೋರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಬೆನಿಯೋಫ್ ಅವರು "ಕ್ಲೌಡ್ ಕಂಪ್ಯೂಟಿಂಗ್" ಪರಿಕಲ್ಪನೆಯನ್ನು ಭವಿಷ್ಯದ ಅಲೆಯೆಂದು ಶ್ಲಾಘಿಸಿದ್ದಾರೆ. ಇದು ಸಾಫ್ಟ್‌ವೇರ್ ತಯಾರಕರಿಗೆ ಚಿನ್ನದ ಗಣಿಯಾಗಿ ಮಾರ್ಪಟ್ಟಿದೆ.

ಮೈಕ್ರೋಸಾಫ್ಟ್ ತನ್ನದೇ ಆದ ಅಭಿವೃದ್ಧಿ ಹೊಂದುತ್ತಿರುವ ಆನ್‌ಲೈನ್ ಸೂಟ್ ಸೇವೆಗಳನ್ನು ಅಭಿವೃದ್ಧಿಪಡಿಸಿದೆ, ಇದನ್ನು ಆಫೀಸ್ 365 ಎಂದು ಕರೆಯಲಾಗುತ್ತದೆ. ಇದು ಗ್ರೂಪ್ ಚಾಟಿಂಗ್ ಸೇವೆಯನ್ನು ಒಳಗೊಂಡಿದ್ದು, ಸ್ಲಾಕ್‌ನ 6 ವರ್ಷದ ಅಪ್ಲಿಕೇಶನ್‌ನಂತೆಯೇ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೀಗಾಗಿ ಸೇಲ್ಸ್‌ಫೋರ್ಸ್‌ ಕಂಪನಿಯ ಸ್ಲಾಕ್ ಟೆಕ್ನಾಲಜೀಸ್ ಸ್ವಾಧೀನವು ಕಂಪನಿಯ ಬಲವನ್ನು, ಜಾಲವನ್ನು ಮತ್ತಷ್ಟು ವಿಸ್ತರಿಸಿದೆ. ಜೊತೆಗೆ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್‌ಗೆ ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ.

English summary
American cloud-based software company Salesforce has agreed to buy workplace messaging app Slack Technologies in a $27.7 billion (roughly Rs 2.03 lakh crores) deal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X