India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವೇತನ ಸಂಹಿತೆ: ಕೆಲಸ, ಸಂಬಳ, ಪಿಎಫ್‌ನಲ್ಲಿ ಆಗುವ ಬದಲಾವಣೆಗಳು

|
Google Oneindia Kannada News

ಬೆಂಗಳೂರು, ಜುಲೈ 1: ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಯಾವಾಗ ಬೇಕಾದರೂ ಅನುಷ್ಠಾನಕ್ಕೆ ಸಿದ್ಧವಾಗಿವೆ. ಜುಲೈ 1, ಇಂದಿನಿಂದ ವೇತನ ಸಂಹಿತೆ ಜಾರಿಗೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಸರಕಾರದಿಂದ ಇನ್ನೂ ಅಧಿಸೂಚನೆ ಬಂದಿಲ್ಲ. ಇತರ ಕಾರ್ಮಿಕ ಸಂಹಿತೆಗಳೂ ಇನ್ನೂ ಜಾರಿಯಾಗಿಲ್ಲ.

ವೇತನ ಸಂಹಿತೆ (Wage Code), ಕೈಗಾರಿಕಾ ಬಾಂಧವ್ಯ ಸಂಹಿತೆ (Industrial Relations Code), ಸಾಮಾಜಿಕ ಭದ್ರತೆಯ ಸಂಹಿತೆ (Social Security Code), ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ (Industrial Safety, Health and Work Conditions Code) ಇವು ಕೇಂದ್ರ ಸರಕಾರ ರಚಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳಾಗಿವೆ. ಇದರ ಜೊತಗೆ ಕರ್ನಾಟಕದ ರಾಜ್ಯ ನಾಗರಿಕ ಸೇವೆ ನಿಯಮವೂ ಇದೆ.

 ಗಮನಿಸಿ: ಪಿಎಫ್‌ಗೆ ಖಾತೆಗೆ ನಾಮಿನಿ ಸೇರ್ಪಡೆಗೆ ಮಾರ್ಚ್ 31 ಕೊನೆಯ ದಿನ ಗಮನಿಸಿ: ಪಿಎಫ್‌ಗೆ ಖಾತೆಗೆ ನಾಮಿನಿ ಸೇರ್ಪಡೆಗೆ ಮಾರ್ಚ್ 31 ಕೊನೆಯ ದಿನ

ಈಗ ವೇತನ ಸಂಹಿತೆಯ ಮೇಲೆ ಹಲವರ ಕುತೂಹಲದ ಕಣ್ಣಿದೆ. ಸಂಬಳದಾರರಿಗೆ ಸಂಬಂಧಿಸಿದ ವಿಷಯ ಇದಾಗಿದೆ. ಭಾರತದಲ್ಲಿ ಸಂಬಳದಾರರ ವರ್ಗ ಬಹುದೊಡ್ಡದು. ಹೀಗಾಗಿ, ವೇತನ ಸಂಹಿತೆಯ ಅಂಶಗಳನ್ನು ತಿಳಿದುಕೊಂಡಿರಬೇಕಾದದ್ದು ಅಗತ್ಯ. ಸರಕಾರ ಅಧಿಕೃತವಾಗಿ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. 23 ರಾಜ್ಯಗಳು ಈ ಕಾನೂನುಗಳ ಕರಡು ನಿಯಮಗಳನ್ನು ಪ್ರಕಟಿಸಿವೆ.

ಸಂಬಳದ ಬೇಸಿಕ್ ಇತ್ಯಾದಿ ಅಂಶಗಳ ಪುನಾರಚನೆ, ರಿಸೈನ್ ಮಾಡಿದಾಗ ಕೊಡಲಾಗುವ ಸೆಟಲ್ಮೆಂಟ್, ಪಿಎಫ್, ಗ್ರಾಚುಟಿ, ಕೆಲಸದ ಅವಧಿ, ಕೆಲಸದ ದಿನಗಳು ಇತ್ಯಾದಿ ಅನೇಕ ಅಂಶಗಳನ್ನು ವೇತನ ಸಂಹಿತೆಯಲ್ಲಿ ಒಳಗೊಳ್ಳಲಾಗಿದೆ. ಇಂಥ ಕೆಲ ಪ್ರಮುಖ ಅಂಶಗಳನ್ನು ಇಲ್ಲಿ ಓದಬಹುದು.

ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಸರಕಾರದಿಂದ ಶೇ. 1 ಟಿಡಿಎಸ್; ಜುಲೈ 1ರಿಂದ ಕ್ರಮ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಸರಕಾರದಿಂದ ಶೇ. 1 ಟಿಡಿಎಸ್; ಜುಲೈ 1ರಿಂದ ಕ್ರಮ

ಮೂಲ ಸಂಬಳ ಹೆಚ್ಚಳ

ಮೂಲ ಸಂಬಳ ಹೆಚ್ಚಳ

ಉದ್ಯೋಗಿಗೆ ನೀಡಲಾಗುವ ಒಟ್ಟು ಸಿಟಿಸಿಯಲ್ಲಿ ಕನಿಷ್ಠ ಶೇ. 50ರಷ್ಟು ಹಣವು ಬೇಸಿಕ್ ಸ್ಯಾಲರಿಯಾಗಿರಬೇಕು ಎಂಬುದು ಹೊಸ ನಿಯಮ. ಈವರೆಗೆ ಸಾಮಾನ್ಯವಾಗಿ ಕಂಪನಿಗಳು ಒಟ್ಟಾರೆ ಸಂಬಳಧ ಶೇ. 25-40ರಷ್ಟನ್ನು ಮಾತ್ರ ಮೂಲ ವೇತನವಾಗಿ ನಿಗದಿ ಮಾಡುತ್ತಿವೆ. ಈಗ ಬೇಸಿಕ್ ಸ್ಯಾಲರಿ ಹೆಚ್ಚಾಗುವುದರಿಂದ ಪಿಎಫ್, ಗ್ರಾಚುಟಿ ಇತ್ಯಾದಿ ಉಳಿತಾಯ ಯೋಜನೆಗಳಿಗೆ ಸಂಬಳದ ಹೆಚ್ಚು ಹಣ ಕಡಿತಗೊಳ್ಳಬಹುದು. ಉದ್ಯೋಗಿಯ ಕೈಗೆ ಸಿಗುವ ಸಂಬಳದಲ್ಲಿ ತುಸು ಕಡಿಮೆ ಆಗಬಹುದು. ಕೈಗೆ ಸಿಗುವ ಸಂಬಳ ಕಡಿಮೆ ಆದರೂ ಒಂದಷ್ಟು ಹಣವನ್ನು ಪಿಎಫ್ ಮತ್ತು ಗ್ರಾಚುಟಿಗೆ ಹೂಡಿಕೆ ಮಾಡಿದಂತಾಗುತ್ತದೆ.

ಗ್ರಾಚುಟಿ ಹೆಚ್ಚಳ

ಗ್ರಾಚುಟಿ ಹೆಚ್ಚಳ

ನಿವೃತ್ತಿ ಹೊಂದಿದ ಉದ್ಯೋಗಿ ಅಥವಾ ಒಂದೇ ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಉದ್ಯೋಗಿ ಕೆಲಸ ಬಿಡುವಾಗ ಗ್ರಾಚುಟಿ ಹಣ ನೀಡಲಾಗುತ್ತದೆ. ಕೊನೆಯ ಬಾರಿ ಪಡೆದಿರುವ ಸಂಬಳದ ಮೊತ್ತ ಮತ್ತು ಕೆಲಸ ಮಾಡಿದ ವರ್ಷಗಳನ್ನು ಇಟ್ಟುಕೊಂಡು ಗ್ರಾಚುಟಿ ಹಣ ನಿರ್ಧರಿಸಲಾಗುತ್ತದೆ. ಒಬ್ಬ ಉದ್ಯೋಗಿ 20 ಲಕ್ಷದವರೆಗೆ ಗ್ರಾಚುಟಿ ಪಡೆಯಲು ಅವಕಾಶ ಇದೆ.

ಈಗ ಹೊಸ ಸಂಹಿತೆ ಪ್ರಕಾರ ಮೂಲ ವೇತನ ಹೆಚ್ಚಾಗುವದರಿಂದ ಗ್ರಾಜುಟಿಯ ಮೊತ್ತವೂ ಹೆಚ್ಚುತ್ತದೆ. ಕೆಲಸ ಇಲ್ಲದ ಸಂದರ್ಭದಲ್ಲಿ ಉದ್ಯೋಗಿಗೆ ಗ್ರಾಚುಟಿ ಹಣ ಆಪದ್ಬಾಂಧವ ಎನಿಸಬಹುದು.

ಕೆಲಸ ಬಿಟ್ಟಾಗ

ಕೆಲಸ ಬಿಟ್ಟಾಗ

ಒಬ್ಬ ಉದ್ಯೋಗಿ ತನ್ನ ಕಂಪನಿಯಿಂದ ರಿಸೈನ್ ಮಾಡಿದಾಗ ಸಾಮಾನ್ಯವಾಗಿ ಕಂಪನಿಯ ನಿಯಮದ ಪ್ರಕಾರ 15 ದಿನದಿಂದ ಹಿಡಿದು ಎರಡು ತಿಂಗಳವರೆಗೆ ಫೈನಲ್ ಸೆಟಲ್ಮೆಂಟ್ ಮಾಡಲಾಗುತ್ತದೆ. ಆದರೆ, ಹೊಸ ವೇತನ ಸಂಹಿತೆಯ ಪ್ರಕಾರ ಉದ್ಯೋಗಿಯ ಸೇವೆ ಮುಗಿದ ಎರಡು ದಿನದೊಳಗೆ ಎಲ್ಲಾ ಬಾಕಿ ಸಂಬಳವನ್ನು ಕೊಡಬೇಕೆಂದಿದೆ.

ಇದು ಸ್ವತಃ ಉದ್ಯೋಗಿಯೇ ರಾಜೀನಾಮೆ ನೀಡಿದಾಗ, ಅಥವಾ ಕಂಪನಿಯೇ ಆ ಉದ್ಯೋಗಿಯನ್ನು ವಜಾಗೊಳಿಸಿದಾಗ ಹೊಸ ಸಂಹಿತೆಯ ನಿಯಮವೇ ಜಾರಿಗೆ ಬರುತ್ತದೆ. ಏನೇ ಆದರೂ ಉದ್ಯೋಗಿ ಕೆಲಸ ಬಿಟ್ಟಾಗ ಎರಡು ದಿನದೊಳಗೆ ಕಂಪನಿಯು ಬಾಕಿ ಸಂಬಳವನ್ನು ಕೊಟ್ಟು ಕಳುಹಿಸಬೇಕಾಗುತ್ತದೆ.

ಕೆಲಸದ ಅವಧಿ

ಕೆಲಸದ ಅವಧಿ

ಹೊಸ ಸಂಹಿತೆ ಪ್ರಕಾರ ಕಂಪನಿಗಳು ವಾರದಲ್ಲಿ ನಾಲ್ಕು ದಿನದ ಕೆಲಸವಾದರೂ ಮಾಡಬಹುದು, ಐದು ಅಥವಾ ಆರು ದಿನದ ಕೆಲಸವಾದರೂ ಮಾಡುವ ಅವಕಾಶ ಇದೆ. ನೀವು ವಾರದಲ್ಲಿ ಎಷ್ಟೇ ದಿನ ಕೆಲಸ ಮಾಡಿ, ಆದರೆ ವಾರದಲ್ಲಿ ಕನಿಷ್ಠ 48 ಗಂಟೆ ಕೆಲಸ ಮಾಡಬೇಕೆನ್ನುತ್ತದೆ ಹೊಸ ಸಂಹಿತೆ. ನೀವು ವಾರಕ್ಕೆ ೪ ದಿನ ಕೆಲಸ ಮಾಡುತ್ತೀರೆಂದರೆ ದಿನಕ್ಕೆ ಕನಿಷ್ಠ 12 ಗಂಟೆಯಾದರೂ ಕೆಲಸ ಮಾಡಬೇಕಾಗುತ್ತದೆ.

(ಒನ್ಇಂಡಿಯಾ ಸುದ್ದಿ)

   HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada
   English summary
   Central government has made four labour codes including wage code, that can be implemented soon. Wage code has many aspects that affect salaried employees.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X