ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟ್ಯಂತರ ಬೆಲೆ ಸ್ಥಿರಾಸ್ತಿ ಮಾರಾಟಕ್ಕಿಳಿದ ಸಹಾರಾ

By Mahesh
|
Google Oneindia Kannada News

ನವದೆಹಲಿ, ಡಿ.7: ಹೂಡಿಕೆ­ದಾರ­ರಿಂದ ಸಂಗ್ರಹಿಸಿದ ಮೊತ್ತವನ್ನು ಹಿಂದುರಿಗಿಸುವ ಭರವಸೆ ನೀಡಿ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರು ತಮ್ಮ ಸ್ಥಿರಾಸ್ತಿ ಮಾರಾಟ ಪ್ರಕ್ರಿಯೆ ಮುಂದುವರೆಸಿದ್ದಾರೆ.

ಗುರ್ ಗಾಂವ್ ನ ಭೂಮಿಯನ್ನು 1,211 ಕೋಟಿ ರುಗೆ ಮಾರಾಟ ಮಾಡಿದ ನಂತರ ಮುಂಬೈ ಹಾಗೂ ಜೋಧಪುರದ ಜಮೀನು ಮಾರಾಟಕ್ಕೆ ಸಹಾರಾ ಸಂಸ್ಥೆ ಮುಂದಾಗಿದೆ. ತಲಾ 1,250 ಕೋಟಿ ರು ಮೌಲ್ಯಕ್ಕೆ ಭೂಮಿ ಮಾರಾಟ ನಂತರ ಪುಣೆಯಲ್ಲಿರುವ ಆಸ್ತಿ ಮಾರಾಟವಾಗಲಿದೆ. ಎನ್ ಸಿಆರ್ ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿಗಳು ಸಹಾರಾ ಸಂಸ್ಥೆಯಿಂದ ಭೂಮಿ ಕೊಳ್ಳಲು ಮುಗಿ ಬೀಳುತ್ತಿದ್ದಾರೆ.

Subrata Roy and Sons

ಸಹಾರಾ ಮಾರಾಟದ ಅಂಕಿ ಅಂಶ:
* ಗುರ್ ಗಾಂವ್ ನ 185 ಎಕರೆ ಭೂಮಿ ಎಂ3ಎಂ ಇಂಡಿಯಾ ಲಿಗೆ ಮಾರಾಟ
* ಮುಂದಿನ ದಿನಗಳಲ್ಲಿ ನಾಲ್ಕು ಕಡೆಗಳಲ್ಲಿರುವ ಭೂಮಿ ಮಾರಾಟದಿಂದ 2,710 ಕೋಟಿ ರು ಸಹಾರಾ ಕೈ ಸೇರಲಿದೆ.
* ಗುರ್ ಗಾವ್ ನ ಚೌಮಾ, ಜೋಧಪುರ, ಪುಣೆ, ಮುಂಬೈನ ವಾಸೈ ಪ್ರದೇಶ ಭೂಮಿಗಳನ್ನು ಸಹಾರಾ ಮಾರಾಟಕ್ಕಿಟ್ಟಿದೆ.
* ಮುಂಬೈನ ಭೂಮಿಯಿಂದಲೇ ಸುಮಾರು 1,111 ಕೋಟಿ ರು ಪಡೆಯುವ ನಿರೀಕ್ಷೆಯಲ್ಲಿದೆ.
* ಅಹಮದಾಬಾದಿನ ಆಸ್ತಿ ಮಾರಾಟದಿಂದ 411.82 ಕೋಟಿ ರು ಸಿಕ್ಕಿದೆ.
* ಸೆಬಿಗೆ ಈಗಾಗಲೇ 3,117 ಕೋಟಿ ರು ಜಮೆ ಮಾಡಲಾಗಿದೆ.[ಸಹಾರಾ ಮುಖ್ಯಸ್ಥನಿಗೆ ರಿಲೀಫ್]

ಕಳೆದ ಮಾರ್ಚ್ ತಿಂಗಳಿನಲ್ಲಿ ತಿಹಾರ್ ಜೈಲಿನಲ್ಲಿದ್ದ ಸಹಾರಾ ಸಂಸ್ಥೆ ಮುಖ್ಯಸ್ಥ ಸುಬ್ರತಾ ರಾಯ್ ಬಿಡುಗಡೆಯಾಗಿ ಮಾರುಕಟ್ಟೆ ನಿಯಂತ್ರಕ ಸೆಬಿಯಲ್ಲಿ ಸುಮಾರು 10.000 ಸಾವಿರ ಕೋಟಿ ರುಪಾಯಿಗಳನ್ನು ಠೇವಣಿ ಇಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Sahara to sell Mumbai, Jodhpur land parcels for Rs 1,251 crore

ಸಹಾರಾ ಗೋಲ್ ಮಾಲ್ : ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕಾಗಿದೆ.

2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ.

ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ.

English summary
After selling land in Gurgaon for Rs 1,211 crore recently, Sahara group is believed to have finalised two more land parcels deals - one in Mumbai and another in Jodhpur - for over Rs 1,250 crore. Besides, talks are in final stages for sale of another land parcel by Sahara group in Pune, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X