ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೇ ಎಕೆ 47 ತಯಾರಿಸಲಾಗುತ್ತದೆ, ಏಕೆ?

By Mahesh
|
Google Oneindia Kannada News

ನವದೆಹಲಿ, ನ.09: ರಕ್ಷಣಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬೇಕೇ? ಬೇಡವೇ? ಎಂಬ ಚರ್ಚೆ ಮುಂದುವರೆದಿರುವ ಸಮಯದಲ್ಲೇ ರಷ್ಯಾದ ಹಗುರ ರೈಫಲ್ ನಿರ್ಮಾಣ ಸಂಸ್ಥೆ ಜನಪ್ರಿಯ ಎಕೆ 47 ರೈಫಲ್ ಗಳನ್ನು ಭಾರತದಲ್ಲೇ ಜಂಟಿಯಾಗಿ ತಯಾರಿಸಲಿ ಮುಂದಾಗಿರುವ ಸುದ್ದಿ ಬಂದಿದೆ.

ರಷ್ಯಾ ಕಲಾಶ್ನಿಕೋವ್ ತಯಾರಿಕಾ ಸಂಸ್ಥೆಗಳು ತಮ್ಮ ತಂತ್ರಜ್ಞಾನವನ್ನು ಇಲ್ಲಿನ ಸಂಸ್ಥೆಗಳಿಗೆ ನೀಡುವ ಮೂಲಕ ಅತ್ಯಂತ ಜನಪ್ರಿಯ ಆಯುಧ ನಿರ್ಮಾಣಕ್ಕೆ ಮುಂದಾಗಿದೆ.

20ನೇ ಶತಮಾನದ ಆವಿಷ್ಕಾರಗಳಲ್ಲಿ ಒಂದೆನಿಸಿರುವ ಎಕೆ 47 ಆಯುಧ ರಫ್ತು ಮಾಡುವುದನ್ನು ರಷ್ಯಾ ಎಂದೋ ನಿಲ್ಲಿಸಿಬಿಟ್ಟಿದೆ. ಹಲವು ದೇಶಗಳ ಅಧಿಕೃತ ಸುರಕ್ಷತಾ ಪಡೆಗಳ ಕೈಗಳಲ್ಲಿ ಇರಬೇಕಾದ ಎಕೆ 47, ವಿಧ್ವಂಸಕ ಕೃತ್ಯ ಎಸಗುವವರ ಕೈಸೇರುತ್ತಿದೆ ಎಂಬುದು ಸರ್ವವಿದಿತ.

Russia's AK-47 maker in talks for JV in India to manufacture weapons

ಭಾರತದಲ್ಲಿ ಹೆಚ್ಚಿನ ಬೇಡಿಕೆ: 2015ರ ಆರಂಭದಲ್ಲೇ ಅಲೆಕ್ಸಿ ಕ್ರಿವೋರುಚಾಕೋ ಅವರು ಕಲಷ್ನಿಕೋವ್ ರೈಫಲ್ ಅನ್ನು ಇಲ್ಲಿಗೆ ತರಲು ಯತ್ನಿಸಲಾಗಿದೆ. ಅದರೆ, ಭಾರತದಲ್ಲಿ ಯಾವ ಸಂಸ್ಥೆ ಈ ಬಗ್ಗೆ ಆಸಕ್ತಿ ತೋರುತ್ತಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಒಮ್ಮೆ ಎಕೆ 47 ತಯಾರಿಕೆ ಶುರುವಾದರೆ, 650 ಕೋಟಿ ರು (100 ಮಿಲಿಯನ್ ಡಾಲರ್) ಹೂಡಿಕೆ ಮಾಡಬೇಕಾಗುತ್ತದೆ. ವರ್ಷಕ್ಕೆ 50,000 ಆಯುಧ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಎಕೆ 47 ಸಂಸ್ಥೆ ವಕ್ತಾರರು ಹೇಳಿದ್ದಾರೆ.

5.56 ಎಂಎಂ ಹಾಗೂ 7.62 ಎಂಎಂ ಸ್ವಯಂಚಾಲಿತ ರೈಫಲ್ ಗೆ ಭಾರತದಲ್ಲಿ ಬೇಡಿಕೆ ಇದೆ. ಸುಮಾರು 2.5 ಬಿಲಿಯನ್ ರೊಬೆಲ್ಸ್ ಗಳಿಕೆಯ ಗುರಿ ಹೊಂದಲಾಗಿದೆ ಎಂದಿದ್ದಾರೆ. 1946-47ರಲ್ಲಿ ಮಿಕೈಲ್ ಕಲಷ್ನಿಕೋವ್ ವಿನ್ಯಾಸಗೊಳಿಸಿದ ಎಕೆ 47 ರೈಫಲ್ ಗಳು ವಿಶ್ವದ ಅತ್ಯಂತ ಜನಪ್ರಿಯ ಆಯುಧಗಳಲ್ಲಿ ಒಂದಾಗಿದೆ. (ಪಿಟಿಐ)

English summary
Known as one of the best assault rifles of the 20th century, AK-47s are now being reportedly used more by non- state agents than national defence personnel.Russia's Kalashnikov Concern, makers of AK-47 assault rifles, is in advanced discussions with Indian companies to manufacture certain weapons here and is open to sharing technology with local partners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X