ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ- ಉಕ್ರೇನ್ ಯುದ್ಧ; 2000 ಸೆನ್ಸೆಕ್ಸ್ ಪಾಯಿಂಟ್ಸ್ ಕುಸಿತ ಕಂಡ ಷೇರು ಮಾರುಕಟ್ಟೆ

|
Google Oneindia Kannada News

ಮುಂಬೈ, ಫೆಬ್ರವರಿ 24: ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ಗುರುವಾರ (ಫೆಬ್ರವರಿ 24)ದಂದು ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಭಾರೀ ಕುಸಿತ ಆಗಿದೆ.

2000 ಸೆನ್ಸೆಕ್ಸ್ ಪಾಯಿಂಟ್ಸ್ ಅಂದರೆ ಶೇ.3.07ರಷ್ಟು​ ನೆಲ ಕಚ್ಚಿದರೆ, ನಿಫ್ಟಿ 600 ಪಾಯಿಂಟ್ಸ್ ಅಂದರೆ ಶೇ.3.03ರಷ್ಟು ಕುಸಿತವಾಗಿದ್ದು, ಇನ್ನು ರಷ್ಯಾವು ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಬೆಲೆಯು 100 ಯುಎಸ್​ಡಿ ದಾಟಿದ್ದು, ಅದೇ ವೇಳೆ ಚಿನ್ನದ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

Recommended Video

ರಷ್ಯಾ- ಉಕ್ರೇನ್ ಬಿಕ್ಕಟ್ಟು:ಕೇವಲ ಒಂದು ಗಂಟೆಯಲ್ಲೇ 8 ಲಕ್ಷ ಕೋಟಿ ರೂ.ಅಧಿಕ ಕುಸಿತ | Oneindia Kannada

ಬಿಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಮೇಲಿನ ಟಾಪ್‌ಲೈನ್ ಇಕ್ವಿಟಿ ಸೂಚ್ಯಂಕಗಳು ಏಳನೇ ನೇರ ಸೆಷನ್‌ಗೆ ಅದರ ಕರಡಿ ಕುಣಿತ ಮುಂದುವರೆಸಿದೆ. ಗುರುವಾರ ಮುಂಜಾನೆಯ ವಹಿವಾಟಿನಲ್ಲಿ ಶೇಕಡಾ 3.5ಕ್ಕಿಂತ ಹೆಚ್ಚು ಕುಸಿದಿದೆ.

Russia Declares War on Ukraine; 2000 Sensex Points Downed in Mumbai Share Market

ಗುರುವಾರ ಬೆಳಿಗ್ಗೆ 9:48ಕ್ಕೆ, ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 2,051.45 ಪಾಯಿಂಟ್‌ಗಳು (ಶೇ 3.58) ಕುಸಿತು ಕಂಡು 55,180.61ಕ್ಕೆ ಇಳಿದಿದ್ದರೆ, ನಿಫ್ಟಿ 600.00 ಪಾಯಿಂಟ್‌ಗಳು ಕುಸಿದು (ಶೇ 3.52) 16,463.25ಕ್ಕೆ ತಲುಪಿದೆ. ಎರಡೂ ಸೂಚ್ಯಂಕಗಳು ಸುಮಾರು ಶೇ.3ರಷ್ಟು ಕಡಿಮೆ ತೆರೆಯಲ್ಪಟ್ಟವು ಮತ್ತು ಆರಂಭಿಕ ಗಂಟೆಯ ಕೆಲವೇ ನಿಮಿಷಗಳಲ್ಲಿ ಮತ್ತಷ್ಟು ಜಾರಿಕೊಂಡವು.

ಚಿನ್ನದ ಬೆಲೆಯು ಗುರುವಾರದಂದು ಶೇ.2ರಷ್ಟು ಮೇಲೇರಿತು. ಆ ಮೂಲಕ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿನ ಗರಿಷ್ಠ ಮಟ್ಟವನ್ನು ಮುಟ್ಟಿದೆ. ರಷ್ಯಾವು ಉಕ್ರೇನ್​ ಮೇಲೆ ದಾಳಿ ಆರಂಭಿಸಿದ್ದು, ಇದು ಯುರೋಪ್​ನಲ್ಲಿ ಯುದ್ಧಾರಂಭ ಮಾಡಿದೆ.

ಸ್ಪಾಟ್​ ಗೋಲ್ಡ್ ಶೇ.1.9ರಷ್ಟು ಮೇಲೇರಿ ಪ್ರತಿ ಔನ್ಸ್​ಗೆ (28.3495 ಗ್ರಾಮ್) 1943.86 ಯುಎಸ್​ಡಿಗೆ ಜಿಗಿದಿದೆ. 2021ರ ಜನವರಿಯಿಂದ ಈಚೆಗೆ ಇದು ಗರಿಷ್ಠ ಮಟ್ಟವಾಗಿದೆ. ಯು.ಎಸ್​. ಗೋಲ್ಡ್ ಫ್ಯೂಚರ್ಸ್ ಶೇ 2ರಷ್ಟು ಜಾಸ್ತಿ ಆಗಿ, 1949.20 ಡಾಲರ್ ಮುಟ್ಟಿದೆ.

ರಷ್ಯಾದ ಸೇನಾ ಪಡೆ ಉಕ್ರೇನ್​ನ ಹಲವು ನಗರಗಳಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ದಕ್ಷಿಣದ ಕಡಲ ತೀರದಲ್ಲಿ ತುಕಡಿಯನ್ನು ಇಳಿಸಿದೆ ಎಂದು ಅಧಿಕಾರಿಗಳು ಹಾಗೂ ಮಾಧ್ಯಮಗಳು ತಿಳಿಸಿವೆ. ಇದಕ್ಕೂ ಮುನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ಕಾರ್ಯಾಚರಣೆಗೆ ಅನುಮತಿ ನೀಡಿದರು.

ಇನ್ನು ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ವಿರುದ್ಧ ಭಾರೀ ಇಳಿಕೆ ದಾಖಲಿಸಿದೆ. ಆರಂಭದ ವಹಿವಾಟಿನಲ್ಲಿ 55 ಪೈಸೆ ಕುಸಿತವನ್ನು ಕಂಡ, ಪ್ರತಿ ಡಾಲರ್​ಗೆ 75.16ರಂತೆ ವ್ಯವಹಾರ ಮಾಡಿದೆ.

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟಾಟಾ ಮೋಟಾರ್ಸ್- ಶೇ.6.01

ಇಂಡಸ್​ಇಂಡ್ ಬ್ಯಾಂಕ್- ಶೇ.4.75

ಮಹೀಂದ್ರಾ ಅಂಡ್ ಮಹೀಂದ್ರಾ- ಶೇ.4.27

ಟೆಕ್ ಮಹೀಂದ್ರಾ- ಶೇ.4.02

ಅದಾನಿ ಪೋರ್ಟ್ಸ್- ಶೇ.4.13

English summary
Indian stock market indices fell sharply on Thursday (February 24) as Russia declared war on Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X