ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು ರೂಪಾಯಿ ದುರ್ಬಲ: 9 ಪೈಸೆ ಇಳಿಕೆ

|
Google Oneindia Kannada News

ನವದೆಹಲಿ, ಜನವರಿ 12: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ 9 ಪೈಸೆ ಇಳಿಕೆಯಾಗಿ 73.48 ಕ್ಕೆ ತಲುಪಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, 2021 ರ ಜನವರಿ 12 ರ ಮಂಗಳವಾರದಂದು ರೂಪಾಯಿ ಮೌಲ್ಯವು ದುರ್ಬಲಗೊಂಡು ಪ್ರಾರಂಭವಾಯಿತು.

ಡಾಲರ್ ಎದುರು ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಐದು ಪೈಸೆ ಇಳಿಕೆಯಾಗಿ 73.43 ರೂ.ಗೆ ತೆರೆಯಿತು. ಸೋಮವಾರ, ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆಯಾಗಿ 73.38 ರೂಪಾಯಿಗೆ ತಲುಪಿತ್ತು.

ಆದಾಗ್ಯೂ ರೂಪಾಯಿ ಆರಂಭಿಕ ನಷ್ಟವನ್ನು ಕಳೆದುಕೊಂಡಿತು ಮತ್ತು ಯುಎಸ್‌ಡಿ ವಿರುದ್ಧ 73.41 ಕ್ಕೆ ವಹಿವಾಟು ನಡೆಸಿತು. ಆರು ಕರೆನ್ಸಿಗಳ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.15ರಷ್ಟು ಏರಿಕೆ ಕಂಡು 90.57 ಕ್ಕೆ ತಲುಪಿದೆ.

Rupee Slides 9 Paise To 73.38 Against The US Dollar

ಕಳೆದ 5 ದಿನಗಳ ರೂಪಾಯಿ ಮುಕ್ತಾಯದ ಮಟ್ಟ:

ಸೋಮವಾರ, ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ 73.38 ರೂ.

ಶುಕ್ರವಾರ, ರುಪಾಯಿ 9 ಪೈಸೆ ಗಳಿಸಿ ಡಾಲರ್ ಎದುರು 73.24 ರೂ.

ಗುರುವಾರ, ಡಾಲರ್ ಎದುರು ರೂಪಾಯಿ ಮೌಲ್ಯ 73.33 ರೂ.ಗೆ ಮುಚ್ಚಿದ್ದು, 23 ಪೈಸೆ ನಷ್ಟವಾಗಿದೆ.

ಬುಧವಾರ ರೂಪಾಯಿ ಮೌಲ್ಯ 8 ಪೈಸೆ ಗಳಿಸಿ ಡಾಲರ್ ಎದುರು 73.10 ರೂ.

ಮಂಗಳವಾರ, ಡಾಲರ್ ಎದುರು ರೂಪಾಯಿ ಮೌಲ್ಯ 73.18 ರೂ.ಗೆ ಡಾಲರ್ ಎದುರು 16 ಪೈಸೆ ಏರಿಕೆಯಾಗಿದೆ.

English summary
The Indian rupee depreciated 9 paise to 73.48 against the US dollar, tracking a rebound in the American currency and muted domestic equities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X