ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚ್ಚಾ ತೈಲ ದರ ಕುಸಿತ: ಡಾಲರ್ ಎದುರು ರೂಪಾಯಿ ಮೌಲ್ಯ ಅಲ್ಪ ಚೇತರಿಕೆ

|
Google Oneindia Kannada News

ಮುಂಬೈ, ಅಕ್ಟೋಬರ್ 11: ಡಾಲರ್ ಎದುರು ರೂಪಾಯಿ ಮೌಲ್ಯ ಕೊಂಚ ಚೇತರಿಕೆ ಕಂಡಿದೆ. ಗುರುವಾರ ಆರಂಭದಲ್ಲಿ ರೂಪಾಯಿ ಮೌಲ್ಯ ಡಾಲರ್‌ ಎದುರು 74.46 ರೂಪಾಯಿಯ ಸಾರ್ವಕಾಲಿಕ ಕುಸಿತ ಕಂಡಿತ್ತು.

ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?

ಆದರೆ, ಮಧ್ಯಾಹ್ನದ ಬಳಿಕ ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿನ ಕುಸಿತ ಹಾಗೂ ಅಮೆರಿಕ ಡಾಲರ್ ಮೌಲ್ಯ ಕುಸಿತದಿಂದಾಗಿ ಏಕಾಏಕಿ 74.16 ರೂ.ಗೆ ಮೌಲ್ಯ ವೃದ್ಧಿಯಾಯಿತು.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಾಮೂಲೆಂದ ಅರುಣ್ ಜೇಟ್ಲಿಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಾಮೂಲೆಂದ ಅರುಣ್ ಜೇಟ್ಲಿ

ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರಿಂದ ಮತ್ತು ಡಾಲರ್ ಮೌಲ್ಯ ದುರ್ಬಲವಾಗಿದ್ದರಿಂದ ಮಂಗಳವಾರ ರೂಪಾಯಿ ಮೌಲ್ಯ 18 ಪೈಸೆಯಷ್ಟು ಏರಿಕೆಯಾಗಿತ್ತು. ಇದರಿಂದ ದೇಶಿ ಮಾರುಕಟ್ಟೆಯಲ್ಲಿನ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿತ್ತು. ಆದರೆ, ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ.

rupee rebounds against dollar to 74.16 rupees on october 11

ಬುಧವಾರ ಸಂಜೆ 74.22 ರೂ. ನೊಂದಿಗೆ ಮಾರುಕಟ್ಟೆ ವಹಿವಾಟು ಅಂತ್ಯಗೊಂಡಿತ್ತು. ಗುರುವಾರ ಬೆಳಿಗ್ಗೆ ಡಾಲರ್‌ಗೆ 74.31 ರೂ. ಬೆಲೆಯೊಂದಿಗೆ ಮಾರುಕಟ್ಟೆ ಆರಂಭವಾಯಿತು. ಕೆಲ ಹೊತ್ತಿನಲ್ಲೇ 74.46 ರೂಪಾಯಿಗೆ ಮುಟ್ಟಿ ವಹಿವಾಟು ನಡೆಸಿತು. ಇದರಿಂದ ದಲ್ಲಾಳಿಗಳು ತೀವ್ರ ಆತಂಕಗೊಂಡಿದ್ದರು. ಮಧ್ಯಾಹ್ನದ ವೇಳೆಗೆ 30 ಪೈಸೆಯಷ್ಟು ಮೌಲ್ಯ ಹೆಚ್ಚಳವಾಗಿದ್ದು, ಕೊಂಚ ನೆಮ್ಮದಿ ಮೂಡಿಸಿತು.

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

ಹತ್ತು ವರ್ಷದ ಗಿಲ್ಟ್ ಯೀಲ್ಡ್‌ಗಳು ಹಿಂದಿನ ದಿನ ಶೇ 8.031ಕ್ಕೆ ಕೊನೆಗೊಂಡಿದ್ದವು. ಗುರುವಾರ ಶೇ 8.01ರಲ್ಲಿ ಸ್ಥಿರವಾಗಿತ್ತು. ಆದರೆ, ಬಾಂಡ್ ಯೀಲ್ಡ್‌ ಹಾಗೂ ಬೆಲೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿದವು.

ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?

ಚಿಲ್ಲರೆ ವಹಿವಾಟಿನ ಹಣದುಬ್ಬರ ಮತ್ತು ಶುಕ್ರವಾರದ ಕೈಗಾರಿಕಾ ಉತ್ಪಾದನೆಯ ದತ್ತಾಂಶ ಸೂಚ್ಯಂಕ ಬಾಕಿ ಇರುವುದರಿಂದ ವ್ಯಾಪಾರಿಗಳು ಹೆಚ್ಚು ಎಚ್ಚರಿಕೆಯಿಂದ ವಹಿವಾಟು ನಡೆಸಿದರು.

English summary
Indian Rupee has rebound to Rs 74.16 against US Dollar after its all time low to Rs 74.46 on October 11 Morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X