ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

|
Google Oneindia Kannada News

Recommended Video

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ | Oneindia Kannada

ನವದೆಹಲಿ, ಅಕ್ಟೋಬರ್ 3: ಡಾಲರ್ ಎದುರು ರೂಪಾಯಿಗೆ ಸತತ ಸೋಲಿನ ಹೊಡೆತ ಮುಂದುವರಿದಿದೆ. ಬುಧವಾರವೂ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದ್ದು, ಇದೇ ಮೊದಲ ಬಾರಿಗೆ 73ರ ಗಡಿ ದಾಟಿದೆ.

ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 73.34ಕ್ಕೆ ತಲುಪಿದೆ. ತೈಲ ಆಮದುದಾರರು ಅಮೆರಿಕದ ಕರೆನ್ಸಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿರುವ ಮತ್ತು ಬಂಡವಾಳದ ಹೊರಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೂಪಾಯಿ ಅಪಮೌಲ್ಯ ಮತ್ತಷ್ಟು ವೃದ್ಧಿಸಿದೆ.

ಬುಧವಾರ ಆರಂಭದ ವ್ಯಾಪಾರ ವಹಿವಾಟಿನಲ್ಲಿ ರೂಪಾಯಿ ಏಕಾಏಕಿ 43 ಪೈಸೆ ಕುಸಿತ ಕಂಡಿತು. ಸೋಮವಾರ ವಹಿವಾಟು ಅಂತ್ಯಕ್ಕೆ ರೂಪಾಯಿ ಮೌಲ್ಯ 72.91ರಷ್ಟಿತ್ತು.

ಡಾಲರ್ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ, 73.33ಕ್ಕೆ ಏರಿಕೆಡಾಲರ್ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ, 73.33ಕ್ಕೆ ಏರಿಕೆ

ಬುಧವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 85 ಡಾಲರ್‌ಗೆ ತಲುಪಿದೆ. ಇದು ಭವಿಷ್ಯದಲ್ಲಿ 100 ಡಾಲರ್‌ಗೆ ಮುಟ್ಟುವ ನಿರೀಕ್ಷೆಯಿದೆ.

ಸೆನ್ಸೆಕ್ಸ್ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಕುಸಿತ ಉಂಟಾಯಿತು. ಬೆಳಿಗ್ಗೆ ಸೆನ್ಸೆಕ್ಸ್ 217.96 ಅಂಕಗಳ ನಷ್ಟ ಕಂಡು, 36,308.18 ಅಂಕಗಳೊಂದಿಗೆ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 77.80 ಅಂಕ ಕುಸಿತ ಕಂಡು, 10,930.50 ಅಂಕಗಳಲ್ಲಿ ವಹಿವಾಟು ಮುಂದುವರಿಸಿತು.

ರೂಪಾಯಿ ಮೌಲ್ಯ ಕುಸಿತದ ಕುರಿತ ಕೆಲವು ಮಹತ್ವದ ಸಂಗತಿಗಳು ಇಲ್ಲಿವೆ.

ಒತ್ತಡ ಮುಂದುವರಿಯಲಿದೆ

ಒತ್ತಡ ಮುಂದುವರಿಯಲಿದೆ

ಬುಧವಾರ ರೂಪಾಯಿ ಮೌಲ್ಯವು ಡಾಲರ್‌ಗೆ 73.26 ರಂತೆ ಆರಂಭವಾಯಿತು. ಸೋಮವಾರದ ವಹಿವಾಟು ಅಂತ್ಯಕ್ಕೆ 72.91ರಷ್ಟಿತ್ತು. ಮಂಗಳವಾರ ರಜಾ ದಿನವಾಗಿದ್ದರಿಂದ ವಹಿವಾಟು ನಡೆದಿರಲಿಲ್ಲ. ಕಚ್ಚಾ ತೈಲದ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳ ಉಂಟಾಗುವ ನಿರೀಕ್ಷೆ ಇರುವುದರಿಂದ ರೂಪಾಯಿ ಮೇಲಿನ ಒತ್ತಡ ಮುಂದುವರಿಯಲಿದೆ.

ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ

ಪ್ರಾಬಲ್ಯ ಮುಂದುವರಿಯಲಿದೆ

ಪ್ರಾಬಲ್ಯ ಮುಂದುವರಿಯಲಿದೆ

ಆಂತರಿಕ ಬಾಂಡ್‌ಗಳು ಮತ್ತು ರೂಪಾಯಿ ಮೇಲಿನ ಅಧಿಕ ಕಚ್ಚಾ ತೈಲ ಬೆಲೆಗಳ ಪ್ರಾಬಲ್ಯ ಮುಂದುವರಿಯಲಿದೆ ಎಂದು ಐಎಫ್ಎ ಗ್ಲೋಬಲ್ ಸಂಸ್ಥೆ ತಿಳಿಸಿದೆ. ಆರ್‌ಬಿಐ ಪ್ರಕಟಿಸಿರುವ ನಿಯಂತ್ರಣ ಕ್ರಮಗಳನ್ನೂ ಮೀರಿ ತೈಲ ಬೆಲೆ ಹೆಚ್ಚುವ ಸಾಧ್ಯತೆ ಇದೆ.

ಅಮೆರಿಕ- ಚೀನಾ ಜಗಳದಲ್ಲಿ ಸೆನ್ಸೆಕ್ಸ್ 500 ಅಂಶ, ನಿಫ್ಟಿ 137 ಅಂಶ ಕುಸಿತಅಮೆರಿಕ- ಚೀನಾ ಜಗಳದಲ್ಲಿ ಸೆನ್ಸೆಕ್ಸ್ 500 ಅಂಶ, ನಿಫ್ಟಿ 137 ಅಂಶ ಕುಸಿತ

ತೈಲ ಪೂರೈಕೆ ಕಠಿಣ

ತೈಲ ಪೂರೈಕೆ ಕಠಿಣ

ಮುಂದಿನ ತಿಂಗಳಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಕಂಪೆನಿಗಳು ಪೂರೈಕೆಯನ್ನು ಕಠಿಣಗೊಳಿಸುವ ಸಾಧ್ಯತೆ ಇದೆ. ಆದರೆ, ಡಾಲರ್‌ನ ಬಲ ಮತ್ತು ಅಮೆರಿಕದಲ್ಲಿನ ಉತ್ಪಾದನೆ ಹೆಚ್ಚಳ ಅದನ್ನು ಹತ್ತಿಕ್ಕುತ್ತದೆ. ಕಚ್ಚಾ ತೈಲದ ಜಾಗತಿಕ ಮಾನದಂಡ 'ಬ್ರೆಂಟ್' ಬುಧವಾರ ಬ್ಯಾರೆಲ್‌ಗೆ ಸುಮಾರು $85 ನಂತೆ ಮಾರಾಟ ಮಾಡಿದೆ. 2014ರಲ್ಲಿ 85.45 ಡಾಲರ್‌ನಂತೆ ಮಾರಾಟವಾಗಿತ್ತು. ಏಪ್ರಿಲ್ ಆರಂಭದಿಂದ ಬ್ರೆಂಟ್ ದರ ಶೇ 20ಕ್ಕಿಂತಲೂ ಹೆಚ್ಚಳವಾಗಿದೆ.

ವಿದೇಶಿ ಷೇರು ಮಾರಾಟ

ವಿದೇಶಿ ಷೇರು ಮಾರಾಟ

ಆಂತರಿಕ ಷೇರುಗಳ ತೀಕ್ಷ್ಣವಾದ ಚಂಚಲತೆ ಮತ್ತು ತೀವ್ರವಾದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೊರಹರಿವು ಹಾಗೂ ಸಾಲದ ಹೊರೆಗಳು ರೂಪಾಯಿ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 1,842 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ರೆಪೋ ದರ ಹೆಚ್ಚಳ ನಿರೀಕ್ಷೆ

ರೆಪೋ ದರ ಹೆಚ್ಚಳ ನಿರೀಕ್ಷೆ

ಶುಕ್ರವಾರದ ಆರ್‌ಬಿಐ ನೀತಿಗಳ ಮೇಲೆ ದೇಶಿ ಮಟ್ಟದಲ್ಲಿ ಸಂಚಲನ ಉಂಟಾಗಲಿದೆ. ಕೇಂದ್ರ ಬ್ಯಾಂಕು ರೆಪೋ ದರವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈಗಿನ ಗಮನ ಆರ್‌ಬಿಐನ ಹಣಕಾಸು ನೀತಿ ಸಭೆಯತ್ತ ವರ್ಗಾವಣೆಯಾಗಿದೆ. ರೆಪೋ ದರದಲ್ಲಿ 25 ಬಿಪಿಎಸ್‌ನಷ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ. ಆರ್‌ಬಿಐನ ಹಣಕಾಸು ನೀತಿಯ ನಿಲುವಿನಲ್ಲಿ ಬದಲಾವಣೆಗಳಾಗುವ ನಿರೀಕ್ಷೆಯಿದೆ. ಮುಖ್ಯವಾಗಿ ಅದರ ಮಾರ್ಗದರ್ಶಿಗಳು ನಿರ್ಣಾಯಕವಾಗಲಿವೆ. ರೂಪಾಯಿಯನ್ನು ಸ್ಥಿರವಾಗಿರಿಸಲು ಯಾವುದೇ ಮಹತ್ವದ ಕ್ರಮಗಳನ್ನು ಆರ್‌ಬಿಐ ಪ್ರಕಟಿಸಲಿದೆಯೇ ಎಂಬುದನ್ನು ಮಾರುಕಟ್ಟೆ ಎಚ್ಚರಿಕೆಯಿಂದ ಗಮನಿಸಲಿದೆ.

ಸರ್ಕಾರಿ ಬಾಂಡ್ ಖರೀದಿ

ಸರ್ಕಾರಿ ಬಾಂಡ್ ಖರೀದಿ

ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ 36 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಆರ್‌ಬಿಐ ಸೋಮವಾರ ಹೇಳಿತ್ತು. ಆರ್ಥಿಕತೆಯಲ್ಲಿ ಉಂಟಾಗಿರುವ ಕಳವಳವನ್ನು ತಗ್ಗಿಸಲು ಸರ್ಕಾರಿ ಬಾಂಡ್‌ಗಳನ್ನು ಮರಳಿ ಖರೀದಿಸುವುದಾಗಿ ಅದು ತಿಳಿಸಿತ್ತು.

English summary
Rupee rigistered all time low against US dollar on Wednesday. Here is some important things you should know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X