ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತತ್ತರಿಸಿದ ರೂಪಾಯಿ ಮೌಲ್ಯ: ಟ್ವಿಟ್ಟರ್‌ನಲ್ಲಿ #RupeeAt71 ಟ್ರೆಂಡಿಂಗ್

|
Google Oneindia Kannada News

ನವದೆಹಲಿ, ಆಗಸ್ಟ್ 31: ಶುಕ್ರವಾರದ ಬೆಳಿಗ್ಗೆ ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆಯಷ್ಟು ಏಕಾಏಕಿ ಕುಸಿತ ಕಂಡಿದ್ದು 71 ರೂಪಾಯಿಗೆ ತಲುಪಿದೆ.

ಡಾಲರ್‌ಗೆ ರೂಪಾಯಿ ವಿನಿಮಯವು 70.93/94 ರೂ.ನಷ್ಟಿದೆ. ಗುರುವಾರ ದಿನದ ಅಂತ್ಯಕ್ಕೆ ಇದು 70.74 ರೂ. ನಷ್ಟಿತ್ತು.

ಆಗಸ್ಟ್‌ ಆರಂಭದಿಂದ ಇದುವರೆಗೂ ರೂಪಾಯಿ ಮೌಲ್ಯ ಶೇ 3.30ರಷ್ಟು ಕುಸಿತ ಕಂಡಿದೆ. ಇದು ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ಮೌಲ್ಯವಾಗಿದೆ.

ಡಾಲರ್ ಎದುರು 70.82 ರೂ.ಗೆ ಕುಸಿದ ರೂಪಾಯಿ ಮೌಲ್ಯ ಡಾಲರ್ ಎದುರು 70.82 ರೂ.ಗೆ ಕುಸಿದ ರೂಪಾಯಿ ಮೌಲ್ಯ

ವಿದೇಶಿ ಬಂಡವಾಳ ಹೊರಹರಿವಿನ ಹೆಚ್ಚಳದ ಕಾರಣ ರೂಪಾಯಿ ದರ ದಾಖಲೆಯ ಮಟ್ಟಕ್ಕೆ ಕುಸಿದಿದೆ ಎನ್ನಲಾಗಿದೆ. ಆಮದುದಾರರ ಖರೀದಿ, ಕಚ್ಚಾ ತೈಲದ ಬೆಲೆ, ಬಂಡವಾಳದ ಹೊರಹರಿವು ಮತ್ತು ವಿದೇಶಿ ವಿನಿಮಯ ಡೀಲರ್‌ಗಳ ಕಾರಣದಿಂದ ಮಾರುಕಟ್ಟೆ ವಹಿವಾಟಿನಲ್ಲಿ ಏರಿಳಿತ ಉಂಟಾಗಿದೆ.

ಇದರಿಂದ ರಫ್ತುದಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್

ರೂಪಾಯಿ ಮೌಲ್ಯ ಡಾಲರ್ ಎದುರು 71 ರೂ.ಗೆ ತಲುಪಿರುವುದಕ್ಕೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ #RupeeAt71 ಎಂಬ ಹ್ಯಾಷ್‌ಟ್ಯಾಗ್ ಬಳಸಿಕೊಂಡು ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಟೀಕಾಪ್ರಹಾರ ನಡೆಸಲಾಗಿದೆ.

Array

ಮೋದಿಗೆ ತೊಂದರೆಯಿಲ್ಲ

ರೂಪಾಯಿ ಮೌಲ್ಯ 71ಕ್ಕೆ ತಲುಪಿದೆ. ಮಧ್ಯಮವರ್ಗ ಮತ್ತು ಬಡವರಿಗೆ ವಸ್ತುಗಳು ತುಟ್ಟಿಯಾಗಲಿವೆ. ದುಬಾರಿ ಸೂಟ್‌ಗಳನ್ನು ಹೊಲಿಸುವ ಶ್ರೀಮಂತರು ಮತ್ತು ಮೋದಿಯವರಿಗೆ ಇದರಿಂದ ತೊಂದರೆಯಾಗುವುದಿಲ್ಲ ಎಂದು ಜೇಸನ್ ಬಾರ್ನ್ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಕುಸಿಯಲು ಕಾರಣಗಳೇನು?ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಕುಸಿಯಲು ಕಾರಣಗಳೇನು?

ಮೋದಿ ಮಂಥನ

ರೂಪಾಯಿ ನಕ್ಸಲ್ ಕಾರ್ಯಕರ್ತನಂತೆ ವರ್ತಿಸುತ್ತಿದೆ. ಮೋದಿಜಿ ಅದನ್ನು ಈಗಲೇ ಬಂಧಿಸಬೇಕು ಎಂದು ಯೂಸುಫ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಹೋರಾಟಗಾರನಂತೆ ರೂಪಾಯಿ ಮೌಲ್ಯ ಕುಸಿದಿರುವುದಕ್ಕೆ ನೆಹರೂ ಅವರ ಮೇಲೆ ಹೇಗೆ ಆರೋಪಿಸುವುದು ಎಂಬ ಬಗ್ಗೆ ಮೋದಿ ಅವರು ಮಂಥನ ನಡೆಸುತ್ತಿದ್ದಾರೆ ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ದುರ್ಬಲ ಆರ್ಥಕತೆಯ ಸೂಚಕ

ದುರ್ಬಲ ಕರೆನ್ಸಿಯು ದುರ್ಬಲ ಆರ್ಥಿಕತೆಯ ಸೂಚಕ. ಮತ್ತು ದರ್ಬಲ ಆರ್ಥಕತೆಯು ದುರ್ಬಲ ರಾಷ್ಟ್ರ ಸೃಷ್ಟಿಯತ್ತ ಕೊಂಡೊಯ್ಯುತ್ತದೆ. ಸ್ಥಿರ ಕರೆನ್ಸಿಯು ಆರ್ಥಿಕತೆಗೆ ಒಳಿತು ಎಂದು ಪ್ರಿಯಾಂಕಾ ಕುಮಾರಿ ಟ್ವೀಟ್ ಮಾಡಿದ್ದಾರೆ.

ಚೇತನ್ ಭಗತ್ ವಿರುದ್ಧ ಟೀಕೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೂಪಾಯಿ ಮೌಲ್ಯವು 60 ರೂ.ಗೆ ತಲುಪಿದ್ದಾಗ ಲೇಖಕ ಚೇತನ್ ಭಗತ್ ಮಾಡಿದ್ದ ಟ್ವೀಟ್‌ಅನ್ನು ಅನೇಕರು ಹಂಚಿಕೊಂಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಸಮೀಪವಿದ್ದೇವೆ. ಆದರೆ ಸರ್ಕಾರ ಮೌನವಾಗಿದೆ ಎಂದು ಚೇತನ್ ಭಗತ್ 2013ರಲ್ಲಿ ಟೀಕಿಸಿದ್ದರು. ಆದರೆ, ಈಗ ಅದೇ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಮತ್ತು ಚೇತನ್ ಭಗತ್ ಇಬ್ಬರೂ ಮೌನವಾಗಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.

ರೂಪಾಯಿಯೇ ಶಕ್ತಿಯುತ

ಅಂತಾರಾಷ್ಟ್ರೀಯ ಮಾರುಕಟ್ಟೆ ಗಮನಿಸಿದಾಗ ಡಾಲರ್ ಎದುರು ರೂಪಾಯಿ ಮಾತ್ರವೇ ಹೆಚ್ಚು ಬಲವಾಗಿದೆ. ಅದಕ್ಕೆ ಸಂಬಂಧಿಸಿದ ಉಳಿದ ಎಲ್ಲ ಕರೆನ್ಸಿಗಳೂ ಇನ್ನೂ ಕುಸಿತ ಕಂಡಿವೆ. ಉಳಿದ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಹೆಚ್ಚಳವಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಸರ್ಕಾರ ಬಿದ್ದಂತೆ

ಡಾಲರ್ ಎದುರು ರೂಪಾಯಿ ಮೌಲ್ಯ ಸತತವಾಗಿ ಕುಸಿಯುತ್ತಿದೆ. ಅದನ್ನು ತಡೆಯಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. 56 ಇಂಚಿನ ಎದೆಯ ಪ್ರಧಾನಿ ಒಮ್ಮೆ ಹೇಳಿದ್ದರು, ರೂಪಾಯಿಯ ಕುಸಿತವು ಸಾಮಾನ್ಯ ಮನುಷ್ಯನ ಕಣ್ಣಿನಲ್ಲಿ ಸರ್ಕಾರದ ಪತನಕ್ಕೆ ಸಮ ಎಂದು. 2018ರ ಜನವರಿಯಲ್ಲಿ ಡಾಲರ್‌ಗೆ 63 ರೂ. ಇತ್ತು. ಈಗ ಅದು 71ಕ್ಕೆ ತಲುಪಿದೆ. ಮೋದಿ ಅವರು ಬಿದ್ದಿದ್ದಾರೆ ಅಲ್ಲವೇ ಎಂದು ಆದರ್ಶ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಜಿಡಿಪಿ ಬೆಳವಣಿಗೆ ಕುಸಿತ

ಬೆಳವಣಿಗೆಯ ನಿಟ್ಟಿನಲ್ಲಿ ಜಿಡಿಪಿಯ ಶೇ 1.5ರಷ್ಟು ಆರ್ಥಿಕತೆ ಕುಸಿತ ಕಂಡಿದೆ. ಇದೊಂದರಿಂದಲೇ ವರ್ಷಕ್ಕೆ 2.25 ಲಕ್ಷ ಕೋಟಿ ನಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಪಿ. ಚಿದಂಬರಂ ಸರಣಿ ಟ್ವೀಟ್ ಮಾಡಿದ್ದಾರೆ.

ನೂರಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. 15 ಕೋಟಿ ದಿನಗೂಲಿಗಳು ಹಲವು ವಾರಗಳಿಂದ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಎಸ್‌ಎಂಇ ಘಟಕಗಳು ಮುಚ್ಚಿಹೋಗಿವೆ. ಲಕ್ಷಾಂತರ ಉದ್ಯೋಗಗಳು ನಾಶವಾಗಿವೆ ಎಂದು ಚಿದಂಬರಂ ಹೇಳಿದ್ದಾರೆ.

English summary
Indian Rupee falls to Rs. 71 against Dollar on Friday. Outrage against BJP government for doing nothing to handle rupee fall. #RupeeAt71 campaign is trending in Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X