ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ವಿರುದ್ಧ ಮುಂದುವರಿದ ರುಪಾಯಿ ಮೌಲ್ಯ ಕುಸಿತ, ಇದು ನಿಲ್ಲೋದೆಲ್ಲಿ?

|
Google Oneindia Kannada News

ಇದು ಪ್ರತಿ ದಿನದ ವಿದ್ಯಮಾನವಾಗಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿತು ಎಂಬುದನ್ನು ತಿಂಗಳುಗಳಿಂದ ನೋಡುತ್ತಲೇ ಇದ್ದೇವೆ. ಕರೆನ್ಸಿ ಮಾರುಕಟ್ಟೆಯ ಮಾಹಿತಿ ಪ್ರಕಾರ ಬುಧವಾರ ಬೆಳಗ್ಗೆ ಪತನದ ದಾಖಲೆಯನ್ನು ರುಪಾಯಿ ಮುಂದುವರಿಸಿದೆ.

ಮಂಗಳವಾರ ದಿನದ ಕೊನೆಗೆ ಅಮೆರಿಕ ಡಾಲರ್ ವಿರುದ್ಧ ರುಪಾಯಿ 71.58 ಇತ್ತು. ಬುಧವಾರ ಬೆಳಗ್ಗೆ 71.43ಕ್ಕೆ ಆರಂಭವಾದ ವ್ಯವಹಾರವು 71.40 ಹಾಗೂ 71.80ರ ಮಧ್ಯೆ ಬೆಳಗ್ಗೆ ವಹಿವಾಟು ನಡೆಸಿದೆ. ಅಮೆರಿಕದ ಆರ್ಥಿಕತೆ ಮತ್ತಷ್ಟು ಬಲಿಷ್ಠ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಮೆರಿಕ ಮತ್ತು ಚೀನಾದ ಮಧ್ಯೆ ವ್ಯಾಪಾರದ ಬಿಕ್ಕಟ್ಟು ಹಿನ್ನೆಲೆಯಲ್ಲಿ ಇಂಥ ಸನ್ನಿವೇಶ ಸೃಷ್ಟಿಯಾಗಿದೆ.

ಬಿತ್ತು ಬಿತ್ತು ಬಿತ್ತು...ಒಂದು ಡಾಲರ್ ಗೆ 71.21 ರುಪಾಯಿಬಿತ್ತು ಬಿತ್ತು ಬಿತ್ತು...ಒಂದು ಡಾಲರ್ ಗೆ 71.21 ರುಪಾಯಿ

ಮೂಲಗಳ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರುಪಾಯಿ ಮೌಲ್ಯ ಕುಸಿತವನ್ನು ತಡೆಯುವ ಪ್ರಯತ್ನ ಮಾಡಲಾಗುತ್ತದೆ. ಸ್ಥಳೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಆರ್ ಬಿಐನಿಂದ 71.80ಕ್ಕೆ ಡಾಲರ್ ಮಾರಾಟ ಮಾಡಲಾಗಿದೆ. ಬುಧವಾರದಂದು ಏಷ್ಯಾದ ಬಹುತೇಕ ಕರೆನ್ಸಿಗಳು ಕುಸಿತದ ಹಾದಿಯಲ್ಲಿವೆ.

Rupee continued to fall against America dollar, where it will stop?

ಡಾಲರ್ ವಿರುದ್ಧ ರುಪಾಯಿಯು ಮಂಗಳವಾರದಂದು 37 ಪೈಸೆ ಕುಸಿದು, ಸಾರ್ವಕಾಲಿಕ ಕುಸಿತ 71.58ಕ್ಕೆ ಇಳಿದಿತ್ತು. ಫೆಡರಲ್ ರಿಸರ್ವ್ ಬಡ್ಡಿದರವು ಏರಿಸಲಾಗುವುದು ಎಂಬ ಸುದ್ದಿ ಅಮೆರಿಕ ಪಾಲಿಗೆ ಶುಭ ಸುದ್ದಿಯಾಗಿ ಪರಿಣಮಿಸಿತು. ಈ ವರ್ಷದಲ್ಲಿ ಇಲ್ಲಿಯವರೆಗೆ ಏಷ್ಯಾದ ಕರೆನ್ಸಿಗಳ ಪೈಕಿಯೇ ಭಾರತದ ರುಪಾಯಿ ಸ್ಥಿತಿ ಹೀನಾಯವಾಗಿದೆ.

ತತ್ತರಿಸಿದ ರೂಪಾಯಿ ಮೌಲ್ಯ: ಟ್ವಿಟ್ಟರ್‌ನಲ್ಲಿ #RupeeAt71 ಟ್ರೆಂಡಿಂಗ್ತತ್ತರಿಸಿದ ರೂಪಾಯಿ ಮೌಲ್ಯ: ಟ್ವಿಟ್ಟರ್‌ನಲ್ಲಿ #RupeeAt71 ಟ್ರೆಂಡಿಂಗ್

ಏರುತ್ತಿರುವ ತೈಲ ಬೆಲೆ, ಜಾಗತಿಕ ವ್ಯಾಪಾರ ತಲ್ಲಣಗಳು ಇತ್ಯಾದಿ ವಿಚಾರಗಳು ಭಾರತದ ಮೇಲೆ ಪರಿಣಾಮ ಬೀರಿವೆ. ತಾತ್ಕಾಲಿಕವಾಗಿ ದೊರೆತಿರುವ ಮಾಹಿತಿ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರದಂದು 32.64 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

English summary
The Indian rupee pared initial gains to drop to a new all-time low of 71.80 against the US dollar in late morning deals on Wednesday. According to dealers, the fresh fall in rupee is due to sudden bouts of dollar-buying by banks and importers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X