ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಡಾಲರ್ ವಿರುದ್ಧ ಪಾತಾಳ ಸೇರಿದ ಭಾರತದ ರುಪಾಯಿ

|
Google Oneindia Kannada News

ಮುಂಬೈ, ಜುಲೈ 19: ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಗುರುವಾರ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಇದೇ ಮೊದಲ ಬಾರಿಗೆ ಡಾಲರ್ ವಿರುದ್ಧ 69 ರುಪಾಯಿ ದಾಟಿ, ರು.69.05 ದಾಖಲಿಸಿದೆ.

ಅಮೆರಿಕ ಆರ್ಥಿಕತೆ ಮೇಲ್ಮುಖವಾಗಿದೆ ಎಂಬ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೊಮ್ ಪೊವೆಲ್ ಹೇಳಿಕೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಎಲ್ಲ ಕರೆನ್ಸಿಗಳ ವಿರುದ್ಧ ಅಮೆರಿಕ ಡಾಲರ್ ಒಂದು ವರ್ಷದ ಗರಿಷ್ಠ ಮಟ್ಟ ತಲುಪಿದೆ.

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ದಾಖಲೆ ಕುಸಿತ ಕಂಡ ರುಪಾಯಿಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ದಾಖಲೆ ಕುಸಿತ ಕಂಡ ರುಪಾಯಿ

ಇದೇ ವರ್ಷದ ಮೇ 29ರ ನಂತರ ಒಂದೇ ದಿನದಲ್ಲಿ ರುಪಾಯಿ ವಿರುದ್ಧ ದಾಖಲಾದ ಅತಿ ದೊಡ್ಡ ಏರಿಕೆ ಇಂದಿನದಾಗಿದೆ. ವಿದೇಶಿ ಕರೆನ್ಸಿಗಳ ಬಗ್ಗೆ ಇದ್ದ ಭಾವನೆಗೆ ಬಿದ್ದ ಹೊಡೆತ ಹಾಗೂ ದೇಶೀಯ ಸಮಸ್ಯೆಯ ಕಾರಣಗಳಿಗೆ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿದೆ.

Rupee and US Dollar

ನರೇಂದ್ರ ಮೋದಿ ನೇತೃತ್ವದ ಸರಕಾರ ವಿರುದ್ಧ ಶುಕ್ರವಾರ ಸಂಸತ್ ನಲ್ಲಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದು, ವಿದೇಶಿ ಕರೆನ್ಸಿ ಮಾರುಕಟ್ಟೆಯ ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ದಿನ ಅಂದರೆ ಗುರುವಾರ ಡಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 69.07 ತಲುಪಿತ್ತು.

ಜುಲೈ 19ರ ಕೊನೆಗೆ ಇತರ ಪ್ರಮುಖ ಕರೆನ್ಸಿಗಳ ವಿರುದ್ಧ ರುಪಾಯಿ ಮೌಲ್ಯ ಇಂತಿದೆ:
ಸ್ಟರ್ಲಿಂಗ್ ಪೌಂಡ್ ವಿರುದ್ಧ (ಒಂದು ಪೌಂಡ್ ಗೆ) ರು. 89.69
ಯುರೋ (ಒಂದು ಯುರೋಗೆ) ರು.80.05
ಜಪಾನ್ ಯೆನ್ (ಪ್ರತಿ ನೂರು ಯೆನ್ ಗೆ) ರು.61.12

English summary
The rupee today weakened by 43 paise to close at a historic low of 69.05 against the US currency on Thursday. This is the first time the rupee has ended below the 69 level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X