• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನದ 24‍X7 RTGS ಸೌಲಭ್ಯ ಇನ್ಮುಂದೆ ಲಭ್ಯ: ಆರ್‌ಬಿಐ

|

ನವದೆಹಲಿ, ಅ. 9: ಬ್ಯಾಂಕ್ ಖಾತೆಗಳಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮೇಲಿದ್ದ ಶುಲ್ಕವನ್ನು ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇಂದು ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ದಿನದ 24‍X7 ಅವಧಿಗೂ RTGS ಸೌಲಭ್ಯ ಡಿಸೆಂಬರ್ 01ರಿಂದ ಲಭ್ಯವಾಗಲಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಿ, ಡಿಜಿಟಲ್ ಹಣಕಾಸಿನ ವ್ಯವಹಾರ ಸಲೀಸಾಗಿ ಆಗಲಿ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಬದಲಾವಣೆ ಇಲ್ಲ

ಪ್ರಧಾನಿ ಮೋದಿ ಅವರ ಆರ್ಥಿಕ ಸಲಹಾ ಸಮಿತಿ ಸದಸ್ಯರಾದ ಆಶಿಮಾ ಗೋಯೆಲ್, ಆರ್ಥಿಕ ಸಂಶೋಧನಾ ರಾಷ್ಟ್ರೀಯ ಕೌನ್ಸಿಲ್ ಹಿರಿಯ ಸಲಹೆಗಾರರಾದ ಶಶಂಕಾ ಭಿಡೆ, ಐಐಎಂ ಪ್ರೊಫೆಸರ್ ಜಯಂತ್ ವರ್ಮ, ಆರ್ ಬಿಐ ಉಪಾಧ್ಯಕ್ಷ ಜಯಂತ್ ಪಾತ್ರ ಹಾಗೂ ಆರ್ ಬಿಐ ಕಾರ್ಯಕಾರಿ ನಿರ್ದೇಶಕರಾದ ಮೃದುಲ್ ಸಗ್ಗಾರ್ ಅವರ ಜೊತೆ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಸಭೆ ನಡೆಸಿದ ಬಳಿಕ ಈ ಘೋಷಣೆ ಮಾಡಿದರು.

National Electronic funds transfer(NEFT) ಸೌಲಭ್ಯ ಬಳಸಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಮೂಲಕ 2 ಲಕ್ಷ ರೂ.ಗಳ ವರೆಗೆ ಹಾಗೂ real time gross settlement (RTGS) ಮೂಲಕ 2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ವರ್ಗಾಯಿಸಬಹುದಾಗಿದೆ. ಇಲ್ಲಿ ತನಕ ಬ್ಯಾಂಕ್ ಕಾರ್ಯ ನಿರ್ವಹಿಸುವ ಸಮಯದಲ್ಲಿ ಮಾತ್ರ RTGS ಬಳಸಬಹುದಾಗಿತ್ತು. ಕಳೆದ ಡಿಸೆಂಬರ್ ತಿಂಗಳಿನಿಂದ NEFT ಕೂಡಾ ದಿನದ 24 ಗಂಟೆಗಳ ಕಾಲ ಬಳಕೆಗೆ ಲಭ್ಯವಾಗಿದೆ. ಇದಕ್ಕೂ ಮುನ್ನ NEFT ಬೆಳಗ್ಗೆ 8 ರಿಂದ ರಾತ್ರಿ 7ರ ತನಕ ಮಾತ್ರ ಲಭ್ಯವಿತ್ತು. ಅಲ್ಲದೆ ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಬಳಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

English summary
Real Time Gross Settlement(RTGS) to be available 24x7 from December 2020 said RBI Governor Shaktikanta Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X