ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ. 1ರಿಂದ 24‍X7 ಅವಧಿಗೆ RTGS ಸೌಲಭ್ಯಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ನ. 1: ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ನೀಡಿ, ಡಿಜಿಟಲ್ ಹಣಕಾಸಿನ ವ್ಯವಹಾರ ಸಲೀಸಾಗಿ ಆಗಲಿ ಎಂಬ ಕಾರಣದಿಂದ ದಿನದ 24‍X7 ಅವಧಿಗೂ RTGS ಸೌಲಭ್ಯವನ್ನು ವಿಸ್ತರಿಸಲಾಗಿದೆ. ಈ ಮೂಲಕ 24x7x365 RTGS ಸೌಲಭ್ಯ ಹೊಂದಿರುವ ಕೆಲವೇ ದೇಶಗಳ ಪೈಕಿ ಭಾರತವೂ ಸೇರ್ಪಡೆಯಾಗಿದೆ.

ಬ್ಯಾಂಕ್ ಖಾತೆಗಳಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮೇಲಿದ್ದ ಶುಲ್ಕವನ್ನು ಕಡಿತಗೊಳಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗ್ರಾಹಕರಿಗೆ ಈ ಮೂಲಕ ಮತ್ತೊಂದು ಶುಭ ಸುದ್ದಿ ನೀಡಿದೆ. ದಿನದ 24‍X7 ಅವಧಿಗೂ RTGS ಸೌಲಭ್ಯ ಡಿಸೆಂಬರ್ 01ರಿಂದ ವಾರದ ಎಲ್ಲಾ ದಿನಗಳು ಲಭ್ಯವಾಗಲಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

National Electronic funds transfer(NEFT) ಸೌಲಭ್ಯ ಬಳಸಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಮೂಲಕ 2 ಲಕ್ಷ ರೂ.ಗಳ ವರೆಗೆ ಹಾಗೂ real time gross settlement (RTGS) ಮೂಲಕ 2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ವರ್ಗಾಯಿಸಬಹುದಾಗಿದೆ. ಇಲ್ಲಿ ತನಕ ಬ್ಯಾಂಕ್ ಕಾರ್ಯ ನಿರ್ವಹಿಸುವ ಸಮಯದಲ್ಲಿ ಮಾತ್ರ RTGS ಬಳಸಬಹುದಾಗಿತ್ತು.

RTGS money transfer time: Timings change from today, All new details here in Kannada

Recommended Video

ಭಾರತಕ್ಕೇ ಗಡಿಪಾರು ಮಾಡ್ತಾರಾ!! | Oneindia Kannada

ಕಳೆದ ಡಿಸೆಂಬರ್ ತಿಂಗಳಿನಿಂದ NEFT ಕೂಡಾ ದಿನದ 24 ಗಂಟೆಗಳ ಕಾಲ ಬಳಕೆಗೆ ಲಭ್ಯವಾಗಿದೆ. ಇದಕ್ಕೂ ಮುನ್ನ NEFT ಬೆಳಗ್ಗೆ 8 ರಿಂದ ರಾತ್ರಿ 7ರ ತನಕ ಮಾತ್ರ ಲಭ್ಯವಿತ್ತು. ಅಲ್ಲದೆ ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಬಳಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

English summary
RTGS money transfer time: Timings change from today, send over rs 2 lakh 24×7. Read all new details here in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X