ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೀಘ್ರದಲ್ಲೇ 200 ರು. ಮುಖಬೆಲೆ ನೋಟುಗಳು ಬಿಡುಗಡೆ
ಶೀಘ್ರದಲ್ಲೇ 200 ರು. ಮುಖಬೆಲೆಯ ಕರೆನ್ಸಿ ಬಿಡುಗಡೆ. ಹೊಸ ಕರೆನ್ಸಿ ಮುದ್ರಣಕ್ಕೆ ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಹೊಸ 200 ರು. ಮುಖಬೆಲೆಯ ಕರೆನ್ಸಿ ಮುದ್ರಣಕ್ಕೆ ಆದೇಶ.
ನವದೆಹಲಿ, ಜುಲೈ 4: ಕೆಲ ದಿನಗಳ ಹಿಂದೆ ಹರಿದಾಡಿದ ಸುದ್ದಿಯಂತೆ, 200 ರು. ಮುಖಬೆಲೆಯ ನೋಟುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.
ಸದ್ಯದಲ್ಲೇ ಬರಲಿದೆ 200 ರೂಪಾಯಿಯ ಹೊಸ ನೋಟು
ಈ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲು ಕೇಂದ್ರ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದೆ.
ಅದರ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್, ನೋಟು ಮುದ್ರಣಕ್ಕೆ ಆದೇಶ ನೀಡಿದ್ದು, ಶೀಘ್ರದಲ್ಲೇ ನೋಟುಗಳ ಮುದ್ರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಹಳೇ 500, 1,000 ನೋಟು ಇಟ್ಟುಕೊಂಡವರಿಗೆ ಆಶಾಕಿರಣ !
ಮೈಸೂರು ಸೇರಿದಂತೆ ಮಹಾರಾಷ್ಟ್ರದ ನಾಸಿಕ್, ಮಧ್ಯ ಪ್ರದೇಶದ ದೇವಾಸ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣಾಲಯಗಳನ್ನು ಹೊಂದಿದ್ದು, ಇವುಗಳಲ್ಲಿ ಯಾವುದಾದರೊಂದಕ್ಕೆ 200 ರು. ಮುದ್ರಿಸುವ ಅವಕಾಶ ದೊರೆಯಲಿದೆ.
Comments
English summary
Note with the face value of 200, will be printed and released soon. Finance department has issued green signal to print the currency and after that, reserve bank already placed order, says the sources.