ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ್ಡಿ ಮನ್ನಾ ಆದರೆ ಬ್ಯಾಂಕುಗಳಿಗೆ 2 ಲಕ್ಷ ಕೋಟಿ ರುಪಾಯಿ ನಷ್ಟ: ಆರ್‌ಬಿಐ

|
Google Oneindia Kannada News

ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಕಾರಣ, ನಿಷೇಧದ ಅವಧಿಗೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೊರೊನಾವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಆರ್‌ಬಿಐ ಬ್ಯಾಂಕುಗಳ ಎಲ್ಲಾ ರೀತಿಯ ಸಾಲಗಳ ಮೇಲಿನ ಇಎಂಐ ಮುಂದೂಡಿಕೆ ಮಾಡಿವೆ, ಆದರೆ ಬಡ್ಡಿ ಮನ್ನಾ ಮಾಡಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಕುರಿತು ದೇಶದ ಆರ್‌ಬಿಐ, ಸರ್ವೋಚ್ಚ ನ್ಯಾಯಾಲಯಕ್ಕೆ ಮಹತ್ವದ ಪ್ರಮಾಣಪತ್ರ ಸಲ್ಲಿಸಿದೆ.

 2020-21 ರಲ್ಲಿ ಭಾರತದ ಜಿಡಿಪಿ ಶೇ. 1.5 ಕ್ಕೆ ಇಳಿಕೆ: ಸಮೀಕ್ಷೆ 2020-21 ರಲ್ಲಿ ಭಾರತದ ಜಿಡಿಪಿ ಶೇ. 1.5 ಕ್ಕೆ ಇಳಿಕೆ: ಸಮೀಕ್ಷೆ

ಕೋವಿಡ್ ಕಾರಣ ಸಾಲದ ಕಂತು ಪಾವತಿ ಮುಂದೂಡಲು ಅದು ಬ್ಯಾಂಕ್‌ಗಳ ಗ್ರಾಹಕರಿಗೆ ಅವಕಾಶ ನೀಡಿತ್ತು.ಆದರೆ ಈ ವೇಳೆಯ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.ಒಂದು ವೇಳೆ ಹಾಗೆ ಮಾಡಿದರೆ, ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ತುಂಬಾ ಕೆಳ ಮಟ್ಟಕ್ಕೆ ಇಳಿಯಲಿದೆ . ಅವುಗಳು ಒಟ್ಟಾರೆ 2.01 ಲಕ್ಷ ಕೋಟಿ ರುಪಾಯಿ ಅಥವಾ 1% ಭಾರತದ ಜಿಡಿಪಿಯಷ್ಟು ಕಳೆದುಕೊಳ್ಳಲಿವೆ ಎಂದು ತಿಳಿಸಿದೆ.

Rs 2 Lakh Crore Will Be Lost If Interest Is Waived Off:RBI Tells SC

ಹೀಗಾಗಿ ತಾನು ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ತನ್ನ ಪ್ರಮಾಣ ಪತ್ರದಲ್ಲಿ ಬುಧವಾರ ತಿಳಿಸಿದೆ. ಅಷ್ಟಲ್ಲದೆ ತಾನು ಕೇವಲ ಕಂತು ಪಾವತಿಯನ್ನು ಮುಂದೂಡಲು ಅವಕಾಶ ನೀಡಿದ್ದೇವೆ, ಸಾಲಮನ್ನಾ ಅಲ್ಲ ಎಂದು ಸ್ಪಷ್ಟಪಡಿಸಿದೆ.

English summary
The RBI told the Supreme Court that it cannot waive interest on loans for the moratorium period, as it would affect the financial stability of the banking sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X