ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ತಿಂಗಳಿನಲ್ಲಿ 1,04,963 ಕೋಟಿ ರೂಪಾಯಿ GST ಸಂಗ್ರಹ

|
Google Oneindia Kannada News

ನವದೆಹಲಿ, ಡಿಸೆಂಬರ್ 01: ದೇಶಾದ್ಯಂತ ಸಾಂಕ್ರಾಮಿಕ ರೋಗದ ನಡುವೆ ಲಾಕ್‌ಡೌನ್ ಸಡಿಲಿಕೆಯ ಬಳಿಕ ನವೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ಏರಿಕೆಗೊಂಡಿದ್ದು, 1.05 ಲಕ್ಷ ಕೋಟಿ ರೂಪಾಯಿ ಸಂಗ್ರಹಗೊಂಡಿದೆ. ಈ ಮೂಲಕ ಕಳೆದ ಒಂಭತ್ತು ತಿಂಗಳಲ್ಲಿ ಎರಡನೇ ಬಾರಿಗೆ ಜಿಎಸ್‌ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟಿದೆ.

ತಿಂಗಳಿಂದ ತಿಂಗಳಿಗೆ ಜಿಎಸ್‌ಟಿ ಹೆಚ್ಚಿನ ಏರಿಕೆ ದಾಖಲಾಗದಿದ್ದರೂ, ವಾರ್ಷಿಕವಾಗಿ ಶೇಕಡಾ 1.4ರಷ್ಟು ಏರಿಕೆ ಕಂಡು ಬಂದಿದ್ದು, ನವೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,04,963 ಕೋಟಿ ರೂಪಾಯಿ ಆಗಿದೆ. 2019ರ ನವೆಂಬರ್‌ನಲ್ಲಿ 1,03,491 ಕೋಟಿ ರೂಪಾಯಿ ಜಿಎಸ್‌ಟಿ ಆದಾಯವು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತಲುಪಿತ್ತು. ಇನ್ನು ಅಕ್ಟೋಬರ್‌ನಲ್ಲಿ 1,05,155 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು.

ಜಿಎಸ್‌ಟಿ ಲಾಭದ ವಂಚನೆ: ಜಿಲೆಟ್ ಇಂಡಿಯಾ ಹಾಗೂ P&Gಗೆ 241 ಕೋಟಿ ರೂ. ದಂಡಜಿಎಸ್‌ಟಿ ಲಾಭದ ವಂಚನೆ: ಜಿಲೆಟ್ ಇಂಡಿಯಾ ಹಾಗೂ P&Gಗೆ 241 ಕೋಟಿ ರೂ. ದಂಡ

ಒಟ್ಟು ನವೆಂಬರ್ ತಿಂಗಳ ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್‌ಟಿ 19,189 ಕೋಟಿ, ಎಸ್‌ಜಿಎಸ್‌ಟಿ 25,540 ಕೋಟಿ, ಐಜಿಎಸ್‌ಟಿ 51,992 ಕೋಟಿ ಮತ್ತು ಸೆಸ್ 8,242 ಕೋಟಿ ರೂಪಾಯಿ ಎಂದು ಹಣಕಾಸು ಸಚಿವಾಲಯವು ಟ್ವೀಟ್‌ನಲ್ಲಿ ತಿಳಿಸಿದೆ.

Rs 104963 crore gross GST revenue collected in November 2020

2020 ರ ನವೆಂಬರ್ 30 ರವರೆಗೆ ನವೆಂಬರ್ ತಿಂಗಳಿಗೆ ಸಲ್ಲಿಸಿದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 82 ಲಕ್ಷಗಳು.

2020 ರ ನವೆಂಬರ್ ತಿಂಗಳಲ್ಲಿ ಇತ್ಯರ್ಥಗೊಂಡ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಸಿಜಿಎಸ್‌ಟಿ 41,482 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 41,826 ಕೋಟಿ ರೂ. ಆಗಿದೆ.

English summary
The GST collections for November grossed Rs 1,04,963 lakh crore, the second highest so far in the financial year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X