ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ದಾಖಲೆಯ ಸಂಗ್ರಹ: ಡಿಸೆಂಬರ್‌ನಲ್ಲಿ 1.15 ಲಕ್ಷ ಕೋಟಿ ರೂಪಾಯಿ

|
Google Oneindia Kannada News

ನವದೆಹಲಿ, ಜನವರಿ 01: ದೇಶದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಕಳೆಗುಂದಿದ್ದ ಕೇಂದ್ರದ ಆದಾಯ ಸಂಗ್ರಹವು ದಿನೇ ದಿನೇ ಏರಿಕೆಯಾಗತೊಡಗಿದೆ. ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ದಾಖಲೆಯ ಏರಿಕೆಗೊಂಡಿದ್ದು, 1.15 ಲಕ್ಷ ಕೋಟಿ ರೂಪಾಯಿ ಸಂಗ್ರಹಗೊಂಡಿದೆ. ಈ ಮೂಲಕ ಕಳೆದ 10 ತಿಂಗಳಲ್ಲಿ ಮೂರನೇ ಬಾರಿಗೆ ಜಿಎಸ್‌ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟಿದೆ.

2020 ರ ಡಿಸೆಂಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,15,174 ಕೋಟಿ ರೂ. ಇದರಲ್ಲಿ ಸಿಜಿಎಸ್‌ಟಿ 21,365 ಕೋಟಿ ರೂ., ಎಸ್‌ಜಿಎಸ್‌ಟಿ 27,804 ಕೋಟಿ ರೂ., ಐಜಿಎಸ್‌ಟಿ 57,426 ಕೋಟಿ ರೂ. ಮತ್ತು ಸೆಸ್ 8,579 ಕೋಟಿ ರೂ.ನಷ್ಟಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.

ನವೆಂಬರ್ ತಿಂಗಳಿನಲ್ಲಿ 1,04,963 ಕೋಟಿ ರೂಪಾಯಿ GST ಸಂಗ್ರಹನವೆಂಬರ್ ತಿಂಗಳಿನಲ್ಲಿ 1,04,963 ಕೋಟಿ ರೂಪಾಯಿ GST ಸಂಗ್ರಹ

ಇನ್ನೊಂದು ವಿಶೇಷ ಏನಂದ್ರೆ ಇದು ಜುಲೈ 2017 ರಲ್ಲಿ ರಾಷ್ಟ್ರವ್ಯಾಪಿ ಜಿಎಸ್‌ಟಿ ಜಾರಿಗೆ ಬಂದ ನಂತರದ ಗರಿಷ್ಠ ಮೊತ್ತವಾಗಿದೆ ಎಂದು ಹಣಕಾಸು ಸಚಿವಾಲಯ ಜನವರಿ 1 ರಂದು ಪ್ರಕಟಣೆಯಲ್ಲಿ ತಿಳಿಸಿದೆ.

Rs 1,15,174 Crore of Gross GST Revenue Collected in December 2020

ಹಿಂದಿನ ದಾಖಲೆಯ ಮಾಸಿಕ ಜಿಎಸ್‌ಟಿ ಸಂಗ್ರಹವು 2019 ರ ಏಪ್ರಿಲ್‌ನಲ್ಲಿ 1.14 ಲಕ್ಷ ಕೋಟಿ ರೂ.ಗಳಾಗಿತ್ತು. ಕಳೆದ ನವೆಂಬರ್ ತಿಂಗಳಿನಲ್ಲಿ 1.05 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಗೊಂಡಿತ್ತು.

English summary
Rs 1,15,174 Crore of Gross GST Revenue Collected in December 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X