ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಗುಜರಿ ನೀತಿ: ಯಾವ ವಾಹನದ ನವೀಕರಣಕ್ಕೆ ಎಷ್ಟು ಶುಲ್ಕ?

|
Google Oneindia Kannada News

ನವದೆಹಲಿ, ಮಾರ್ಚ್ 18: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೂತನ ಗುಜರಿ ನೀತಿಯನ್ನು ಪ್ರಸ್ತಾಪಿಸಿತ್ತು. ಅದರ ಅನ್ವಯ ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ, ಹೊಸ ವಾಹನ ಖರೀದಿ ಮೇಲೆ ಉತ್ತಮ ರಿಯಾಯಿತಿ ಸಿಗಲಿದೆ. ಹಾಗೆಯೇ ಹಳೆಯ ವಾಹನಗಳ ಫಿಟ್ನೆಸ್ ದೃಢೀಕರಣ ಪತ್ರವನ್ನು ನವೀಕರಣ ಮಾಡಲು ಹೆಚ್ಚಿನ ಹಣ ತೆರಬೇಕಾಗಲಿದೆ.

ಈ ಅಕ್ಟೋಬರ್ ತಿಂಗಳಿನಿಂದ ಗುಜರಿ ನೀತಿ ಜಾರಿಗೆ ಬರುವ ಸಾಧ್ಯತೆ ಇದ್ದು, ನಿಮ್ಮ 15 ವರ್ಷಕ್ಕಿಂತ ಹಳೆಯ ಕಾರ್‌ನ ನೋಂದಣಿ ನವೀಕರಣಕ್ಕೆ 5,000 ರೂ. ಪಾವತಿಸಬೇಕಾಗಬಹುದು. ಇದು ನೀವು ಪ್ರಸ್ತುತ ಪಾವತಿಸುತ್ತಿರುವ ಮೊತ್ತಕ್ಕಿಂತ ಸುಮಾರು ಎಂಟು ಪಟ್ಟು ಅಧಿಕ.

ಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆಕೇಂದ್ರದ ಗುಜರಿ ನೀತಿ: ದುಬಾರಿಯಾಗಲಿದೆ ಹಳೆ ವಾಹನಗಳ ಬಳಕೆ, ಜನಸಾಮಾನ್ಯರಿಗೆ ಮತ್ತೊಂದು ಬರೆ

ಇದೇ ರೀತಿ, ಹಳೆಯ ಬೈಕ್‌ಗಳ ನೋಂದಣಿ ನವೀಕರಣಕ್ಕೆ ಪ್ರಸ್ತುತ 300 ರೂ ಶುಲ್ಕವಿದ್ದು, ಅದು 1000 ರೂಪಾಯಿಗೆ ಹೆಚ್ಚಲಿದೆ. 15 ವರ್ಷ ದಾಟಿದ ಬಸ್ ಅಥವಾ ಟ್ರಕ್‌ನಂತಹ ದೊಡ್ಡ ವಾಹನಗಳ ಫಿಟ್ನೆಸ್ ನವೀಕರಣಕ್ಕೆ ತಗುಲುವ ವೆಚ್ಚ 12,500 ರೂಪಾಯಿ. ಅಂದರೆ ಈಗ ಪಾವತಿಸುತ್ತಿರುವ ಹಣಕ್ಕಿಂತ ಸುಮಾರು 21 ಪಟ್ಟು ಹೆಚ್ಚು. ಮುಂದೆ ಓದಿ.

ವಿಳಂಬವಾದರೆ ದಂಡ

ವಿಳಂಬವಾದರೆ ದಂಡ

ಈ ದರ ಏರಿಕೆಯ ಪ್ರಸ್ತಾಪದ ಕರಡು ಅಧಿಸೂಚನೆಯನ್ನು ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿದೆ. ಇದು ಒಟ್ಟಾರೆ ವಾಹನ ಗುಜರಿ ನೀತಿಯನ್ನು ಜಾರಿಗೊಳಿಸುವುದರ ಭಾಗವಾಗಿದೆ. ಈ ಪ್ರಸ್ತಾಪದ ಪ್ರಕಾರ ಖಾಸಗಿ ವಾಹನಗಳ ನೋಂದಣಿ ನವೀಕರಣದಲ್ಲಿನ ವಿಳಂಬವು ತಿಂಗಳಿಗೆ 300 ರಿಂದ 500 ರೂವರೆಗೂ ದಂಡಕ್ಕೆ ಎಡೆ ಮಾಡಿಕೊಡಲಿದೆ. ಹಾಗೆಯೇ ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನವೀಕರಣದಲ್ಲಿ ವಿಳಂಬ, ಪ್ರತಿ ದಿನ 50 ರೂ. ದಂಡಕ್ಕೆ ಆಹ್ವಾನ ನೀಡಲಿದೆ.

ಹಳೆ ವಾಹನ ಗುಜರಿಗೆ ಹಾಕುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರಹಳೆ ವಾಹನ ಗುಜರಿಗೆ ಹಾಕುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ

ಹಳೆಯ ವಾಹನ ನಿಷೇಧ ಪ್ರಸ್ತಾವ

ಹಳೆಯ ವಾಹನ ನಿಷೇಧ ಪ್ರಸ್ತಾವ

ಹಳೆಯ ಮಾಲಿನ್ಯಕಾರಕ ವಾಹನಗಳನ್ನು ಹಂತ ಹಂತವಾಗಿ ಗುಜರಿಗೆ ಹಾಕುವ ನೂತನ ಪ್ರಸ್ತಾವಗಳ ಪ್ರಕಟಣೆಯನ್ನು ಸರ್ಕಾರ ಆರಂಭಿಸಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 10 ಮತ್ತು 15 ವರ್ಷಗಳಷ್ಟು ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ನಿಷೇಧಿಸುವುದನ್ನು ಪರಾಮರ್ಶಿಸಲು ಸರ್ಕಾರವು ಎನ್‌ಜಿಟಿ ಮತ್ತು ಸುಪ್ರೀಂಕೋರ್ಟ್‌ಅನ್ನು ಸಂಪರ್ಕಿಸಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಫಿಟ್ನೆಸ್ ಪ್ರಮಾಣಪತ್ರ

ಫಿಟ್ನೆಸ್ ಪ್ರಮಾಣಪತ್ರ

ಖಾಸಗಿ ವಾಹನಗಳ ವಿಚಾರದಲ್ಲಿ ಮಾಲೀಕರು 15 ವರ್ಷದ ನಂತರದ ವಾಹನಕ್ಕೆ ಪ್ರತಿ ಐದು ವರ್ಷಕ್ಕೆ ಒಮ್ಮೆ ನೋಂದಣಿ ಪ್ರಮಾಣಪತ್ರವನ್ನು ನವೀಕರಣ ಮಾಡಬೇಕಾಗುತ್ತದೆ. ಇದೇ ರೀತಿ ವಾಣಿಜ್ಯ ವಾಹನಗಳಿಗೆ ಎಂಟು ವರ್ಷ ಭರ್ತಿಯಾದ ಬಳಿಕ ಪ್ರತಿ ವರ್ಷ ಫಿಟ್ನೆಸ್ ಪ್ರಮಾಣಪತ್ರ ಪಡೆಯಬೇಕು.

ಗುಜರಿ ಕೇಂದ್ರಗಳ ಸ್ಥಾಪನೆ

ಗುಜರಿ ಕೇಂದ್ರಗಳ ಸ್ಥಾಪನೆ

ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ವಾಹನಗಳನ್ನು ಗುಜರಿಗೆ ಹಾಕಲು ಸೌಲಭ್ಯಗಳನ್ನು ಸೃಷ್ಟಿಸಲು ಸಚಿವಾಲಯವು ನೋಂದಾಯಿತ ವಾಹನ ಗುಜರಿ ಕೇಂದ್ರಗಳನ್ನು ಸ್ಥಾಪಿಸುವ ಕರಡು ನೀತಿ ರೂಪಿಸಿದೆ. ಪ್ರಸ್ತಾವದಂತೆ ವಾಹನ ಮಾಲೀಕರು ತಾವು ಬಯಸುವ ಯಾವುದೇ ಗುಜರಿ ಕೇಂದ್ರಕ್ಕೆ ತೆರಳಿ ವಾಹನವನ್ನು ಬಿಡಲು ಅವಕಾಶವಿದೆ. ಅಲ್ಲಿ ಪಡೆದ ಗುಜರಿ ಪ್ರಮಾಣಪತ್ರವನ್ನು ಯಾವುದೇ ವಾಹನ ಶೋ ರೂಂಗೆ ನೀಡಿ ಹೊಸ ವಾಹನವನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

English summary
Road Transport Ministry has issued a draft notification on Vehicle Scrappage Policy that proposed renewal fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X