ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಕ್ಕೇರಿದ ಟೊಮೆಟೋ ಬೆಲೆ: ತಲೆ ಮೇಲೆ ಕೈ ಹೊತ್ತ ಜನ

|
Google Oneindia Kannada News

ನವದೆಹಲಿ, ಜೂ. 2: ದೆಹಲಿ ಪ್ರದೇಶ ಹೊರತುಪಡಿಸಿ ಪ್ರಮುಖ ಮೆಟ್ರೋ ನಗರಗಳಲ್ಲಿ ಟೊಮೆಟೋ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 77 ರುಪಾಯಿಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸರಕುಗಳ ಮಿತವಾದ ಪೂರೈಕೆಯಿಂದಾಗಿ ಬೆಲೆಗಳು ಒಂದು ತಿಂಗಳ ಹಿಂದಿನ ಅವಧಿಗಿಂತ ಹೆಚ್ಚಾಗಿದ್ದು, ಸಾಮಾನ್ಯ ಜನರು ಖರೀದಿ ಮಾಡಲು ಹಿಂದೇಟು ಹಾಕಿ ತಲೆ ಮೇಲೆ ಕೈಹೊತ್ತಿದ್ದಾರೆ.

ಆದಾಗ್ಯೂ ಎಲ್ಲಾ ಪ್ರಮುಖ ಟೊಮೆಟೋ ಬೆಳೆಯುವ ಪ್ರದೇಶಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಜುಲೈನಲ್ಲಿ ಟೊಮೆಟೋ ಬೆಲೆಗಳು ತೀವ್ರ ಕುಸಿತವನ್ನು ಕಾಣುವ ನಿರೀಕ್ಷೆಯಿದೆ. ಗ್ರಾಹಕ ವ್ಯವಹಾರಗಳ ದತ್ತಾಂಶ ಇಲಾಖೆಯ ವರದಿಗಳ ಪ್ರಕಾರ ಪ್ರಮುಖ ನಗರಗಳಲ್ಲಿ ಟೊಮೆಟೊ ಸರಾಸರಿ ಬೆಲೆಗಳು ಕೆಜಿಗೆ 55 ರಿಂದ 60 ರೂ. ಆಗಿದೆ. ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021-22 ಬೆಳೆ ವರ್ಷದಲ್ಲಿ (ಜುಲೈ-ಜೂನ್) 20.3 ಮಿಲಿಯನ್ ಟನ್‌ಗಳಿಗೆ (ಎಂಟಿ) ಟೊಮೆಟೋ ಉತ್ಪಾದನೆಯು 4% ಕ್ಕಿಂತ ಹೆಚ್ಚು ಕುಸಿಯುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಯಾವ ಹೈಟೆಕ್ ಶಾಲೆಗೂ ಕಡಿಮೆ ಇಲ್ಲ ಕೇರಳದ ಈ ಬಸ್‌ ಸ್ಕೂಲ್!ಯಾವ ಹೈಟೆಕ್ ಶಾಲೆಗೂ ಕಡಿಮೆ ಇಲ್ಲ ಕೇರಳದ ಈ ಬಸ್‌ ಸ್ಕೂಲ್!

ವಿವಿಧ ನಗರಗಳಲ್ಲಿ ಟೊಮೆಟೋ ದರ ಹೀಗಿದೆ:

ಕೋಲ್ಕತ್ತಾ: ಗ್ರಾಹಕ ವ್ಯವಹಾರಗಳ ಸಚಿವಾಲಯವು ನೀಡಿದ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ 30 ರಂದು ಪ್ರತಿ ಕೆಜಿಗೆ 25 ರೂಪಾಯಿ ಇದ್ದ ಟೊಮೆಟೋ ಚಿಲ್ಲರೆ ಬೆಲೆ ಜೂನ್ 1ರಂದು ಕೆಜಿಗೆ 77 ರೂ. ಆಗಿದೆ.

Rising Tomato Prices Shock Common People

ಮುಂಬೈ: ಮುಂಬೈನಲ್ಲಿ ಚಿಲ್ಲರೆ ಟೊಮೆಟೋ ದರವು ಮೇ 1 ರಂದು ಕೆಜಿಗೆ 36 ರೂಪಾಯಿಯಿಂದ ಜೂನ್ 1 ರಂದು 74 ರೂಪಾಯಿಗಳಿಗೆ ಏರಿದೆ.

ಚೆನ್ನೈ: ಚಿಲ್ಲರೆ ಟೊಮೆಟೋ ದರ ಚೆನ್ನೈನಲ್ಲಿ ಪ್ರತಿ ಕೆಜಿಗೆ 47 ರಿಂದ 62 ರೂ.ಗೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಗಮನ ಸೆಳೆದ ಸರಕಾರಿ ಶಾಲಾ ವಿದ್ಯಾರ್ಥಿಗಳ ಹಳ್ಳಿ ಸೊಗಡಿನ ಪ್ರದರ್ಶನಗಮನ ಸೆಳೆದ ಸರಕಾರಿ ಶಾಲಾ ವಿದ್ಯಾರ್ಥಿಗಳ ಹಳ್ಳಿ ಸೊಗಡಿನ ಪ್ರದರ್ಶನ

ದೆಹಲಿ: ಆದಾಗ್ಯೂ ದೆಹಲಿಯಲ್ಲಿ ಚಿಲ್ಲರೆ ಟೊಮೆಟೋ ದರವು ಪ್ರತಿ ಕೆಜಿಗೆ ರೂ. 39 ರಷ್ಟಿದೆ. ಈ ಅವಧಿಯಲ್ಲಿ ಪ್ರತಿ ಕೆಜಿಗೆ ರೂ 30 ರಷ್ಟಿತ್ತು.

ಇತರೆ ನಗರಗಳು: ಪೋರ್ಟ್ ಬ್ಲೇರ್, ಶಿಲ್ಲಾಂಗ್, ಕೊಟ್ಟಾಯಂ, ಪತ್ತನಂತಿಟ್ಟಾ - ನಾಲ್ಕು ನಗರಗಳಲ್ಲಿ ಬುಧವಾರ ಟೊಮೆಟೊ ಚಿಲ್ಲರೆ ಬೆಲೆ ಕೆಜಿಗೆ 100 ರೂ. ಏರಿಕೆ ಕಂಡು ಬಂದಿದೆ.

Rising Tomato Prices Shock Common People

ಹಠಾತ್ ಬೆಲೆ ಏರಿಕೆ ಏಕೆ?: ಪ್ರಮುಖ ಉತ್ಪಾದನಾ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿಲ್ಲರೆ ಬೆಲೆಗಳು ಗಮನಾರ್ಹವಾಗಿ ಏರಿವೆ. ಮಾಹಿತಿ ಪ್ರಕಾರ ವಿವಿಧ ನಗರಗಳಲ್ಲಿ ಕೆಜಿಗೆ 50 ರಿಂದ 100 ರೂ. ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ಪ್ರಮುಖ ಬೆಳೆಯುತ್ತಿರುವ ರಾಜ್ಯಗಳಿಂದ ಪೂರೈಕೆ ಮಿತವಾಗಿರುವುದೇ ಚಿಲ್ಲರೆ ಬೆಲೆಗಳ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಮತ್ತು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಟೊಮೇಟೊದ ಸರಾಸರಿ ಅಖಿಲ ಭಾರತ ಚಿಲ್ಲರೆ ಬೆಲೆಯು ತಿಂಗಳ ಹಿಂದಿನ ಅವಧಿಯಲ್ಲಿ ಪ್ರತಿ ಕೆಜಿಗೆ ರೂ 29.5 ರಿಂದ ಬುಧವಾರದಂದು ಪ್ರತಿ ಕೆಜಿಗೆ ರೂ 52.30 ಕ್ಕೆ 77 ರಷ್ಟು ಹೆಚ್ಚಳ ಕಂಡು ಬಂದಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಲಾರೆನ್ಸ್ ಬಿಶ್ನೋಯ್ ಗೆ ಹೆದರಿ ಪೊಲೀಸ್ ಮೊರೆ ಹೋದ ಸಲ್ಮಾನ್ ಖಾನ್ | OneIndia Kannada

English summary
Tomato retail prices have reached a maximum of 77 rupees per kg in major metro cities other than Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X