ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಡೀಲ್ : ಹಾಥ್ವೇ ಸಂಸ್ಥೆಯನ್ನು ಖರೀದಿಸಲು ಮುಂದಾದ ರಿಲಯನ್ಸ್

|
Google Oneindia Kannada News

ಮುಂಬೈ, ಅಕ್ಟೋಬರ್ 03: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಫೈಬರ್ ಟು ದಿ ಹೋಮ್ (FTTH) ಬ್ರಾಡ್ ಬ್ಯಾಂಡ್ ಸೇವೆ ತರಲು ಮುಂದಾಗಿರುವ ವಿಷಯ ಈಗಾಗಲೇ ತಿಳಿದಿರಬಹುದು.

ದೇಶದ ದೊಡ್ಡ ಕೇಬಲ್ ಆಪರೇಟರ್ ಹಾಥ್ ವೇ ಕೇಬಲ್ ಹಾಗೂ ಡೇಟಾಕಾಮ್ ಅನ್ನು ರಿಲಯನ್ಸ್ ಇಂಡಸ್ಟ್ರಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿವೆ. ಲಭ್ಯ ಮಾಹಿತಿ ಪ್ರಕಾರ, ಸರಿ ಸುಮಾರು 2,500 ಕೋಟಿ ರು ಡೀಲ್ ಇದಾಗಿದೆ ಎಂಬ ಮಾಹಿತಿಯಿದೆ. ಹಾಥ್ ವೇ ಹಾಗೂ ಆರ್.ಐ.ಎಲ್. ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಡಿಜಿಟಲ್ ಇಂಡಿಯಾಗೆ ಹೆದ್ದಾರಿ ರೂಪಿಸಿದ ರಿಲಯನ್ಸ್ ಜಿಯೋಡಿಜಿಟಲ್ ಇಂಡಿಯಾಗೆ ಹೆದ್ದಾರಿ ರೂಪಿಸಿದ ರಿಲಯನ್ಸ್ ಜಿಯೋ

ಫೈಬರ್ ಟು ದಿ ಹೋಮ್ (FTTH) ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಗ್ರಾಹಕರಿಗೆ 100 ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. 100 ಜಿಬಿ ಡೇಟಾ ಮಿತಿ ಮುಗಿದ ಮೇಲೆ ಬಳಕೆದಾರರಿಗೆ ತಿಂಗಳಿಗೆ 25 ಬಾರಿ 40 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.ಈ ಯೋಜನೆ ಅನುಷ್ಠಾನಕ್ಕಾಗಿ ರಿಲಯನ್ಸ್ ಸಂಸ್ಥೆಯು 60 ಸಾವಿರ ಕೋಟಿ ರು ಹೂಡಿಕೆಗೆ ಮುಂದಾಗಿದೆ.

ಹಾಥ್ ವೇ ಮಲ್ಟಿ ಸಿಸ್ಟಂ ಆಪರೇಟರ್ ಆಗಿದ್ದು, ಕೇಬಲ್ ಕಂಪನಿಯಂತೆ ಕಾರ್ಯನಿರ್ವಹಿಸುತ್ತದೆ, ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿದೆ. ಈ ಹಿಂದೆ ರಿಲಯನ್ಸ್, ಡೆಲ್ ನೆಟ್ವರ್ಕ್ ಜೊತೆ ಮಾತುಕತೆ ನಡೆಸಿತ್ತು ಆದರೆ, ಮಾತುಕತೆ ವಿಫಲವಾಗಿತ್ತು.

ಪ್ರಾಯೋಗಿಕವಾಗಿ ಯೋಜನೆ ಜಾರಿಗೆ

ಪ್ರಾಯೋಗಿಕವಾಗಿ ಯೋಜನೆ ಜಾರಿಗೆ

ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಜಿಯೋ ತನ್ನ ಫೈಬರ್ ಸರ್ವೀಸ್ ತನ್ನ ಹೊಸ ಯೋಜನೆ ಆರಂಭಿಸಿದ್ದು, ಟಿವಿ ನೋಡಲು ಗ್ರಾಹಕರಿಗೆ ಒಂದು ಸೆಟ್ ಆಪ್ ಬಾಕ್ಸ್ ಕೂಡ ಜಿಯೋ ನೀಡಲಿದೆ. ಜಿಯೋ ಇಂಟರ್ನೆಟ್ ಫ್ರೋಟೋಕಾಲ್ ಟೆಲಿವಿಜನ್ ಸರ್ವಿಸ್ ನಡಿ ಗ್ರಾಹಕರು ಟಿವಿ ಕೂಡ ನೋಡಬಹುದಾಗಿದೆ.

100 ಜಿಬಿ ಹೈ ಸ್ಪೀಡ್ ಡೇಟಾ ಆಫರ್

100 ಜಿಬಿ ಹೈ ಸ್ಪೀಡ್ ಡೇಟಾ ಆಫರ್

ಫೈಬರ್ ಟು ದಿ ಹೋಮ್ (FTTH) ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಗ್ರಾಹಕರಿಗೆ 100 ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. 100 ಜಿಬಿ ಡೇಟಾ ಮಿತಿ ಮುಗಿದ ಮೇಲೆ ಬಳಕೆದಾರರಿಗೆ ತಿಂಗಳಿಗೆ 25 ಬಾರಿ 40 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.

ತಿಂಗಳಿಗೆ ಒಟ್ಟು 1,100 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಗ್ರಾಹಕರು ಇದಕ್ಕಾಗಿ 4,500 ರೂಪಾಯಿ ಸೆಕ್ಯೂರಿಟಿ ರೂಪದಲ್ಲಿ (ಗಿಗಾ ಹಬ್ ಹೋಮ್ ಗೇಟ್ ವೇ) ನೀಡಬೇಕಾಗುತ್ತದೆ. ಇದು ರೀಫಂಡ್ ಮೊತ್ತವಾಗಿದೆ.

ಡೇಟಾ ಬಳಕೆ 20 ಕೋಟಿ ಜಿಬಿಯಿಂದ 370 ಕೋಟಿ ಜಿಬಿಗೆ

ಡೇಟಾ ಬಳಕೆ 20 ಕೋಟಿ ಜಿಬಿಯಿಂದ 370 ಕೋಟಿ ಜಿಬಿಗೆ

ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ.

ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.

ಪ್ರತಿ ಸೆಕೆಂಡಿಗೆ 7 ಗ್ರಾಹಕರಂತೆ ಕೇವಲ 170 ದಿನಗಳಲ್ಲಿ 100 ಮಿಲಿಯನ್ ಗ್ರಾಹಕರನ್ನು ಸೇರಿಸಿಕೊಂಡ ವಿಕ್ರಮ, ವಿಶ್ವದ ಯಾವುದೇ ಭಾಗದಲ್ಲಿ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ ಸೇವೆ ಎಂಬ ಹೆಗ್ಗಳಿಕೆಯನ್ನು ಜಿಯೋಗೆ ತಂದುಕೊಟ್ಟಿತು. ಜೂನ್ 30, 2018ರ ಅಂಕಿ ಅಂಶಗಳ ಪ್ರಕಾರ 215 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರು ಜಿಯೋ ಜಾಲದಲ್ಲಿ ಡಿಜಿಟಲ್ ಜೀವನವನ್ನು ಆನಂದಿಸುತ್ತಿದ್ದಾರೆ.

ಹಾಥ್ ವೇ ಹಾಗೂ ರಿಲಯನ್ಸ್ ಡೀಲ್ ಮುಖ್ಯಾಂಶ

ಹಾಥ್ ವೇ ಹಾಗೂ ರಿಲಯನ್ಸ್ ಡೀಲ್ ಮುಖ್ಯಾಂಶ

* ಹಾಥ್ ವೇ ಸರಿ ಸುಮಾರು 11 ಮಿಲಿಯನ್ ಡಿಜಿಟಲ್ ಕೇಬಲ್ ಟಿವಿ ಚಂದಾರರನ್ನು ಹೊಂದಿದೆ.
* 8,00,000 ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಹೊಂದಿದೆ. ಎರಡು ಕ್ಷೇತ್ರದಲ್ಲೂ ರಿಲಯನ್ಸ್ ತನ್ನ ಪ್ರಭುತ್ವ ಸಾಧಿಸಬಹುದಾಗಿದೆ.
* ರಹೇಜ ಗ್ರೂಪಿನ 43.48% ಹೊಂದಿರುವ ಹಾಥ್ ವೇ ಮೌಲ್ಯ ಸರಿ ಸುಮಾರು 2,500 ಕೋಟಿ ರು ನಷ್ಟಿದೆ.
* ಸರಾಸರಿ 710 ರು ಪ್ರತಿ ತಿಂಗಳಿನಂತೆ 50 ಎಂಬಿಪಿಎಸ್ ವೇಗದಲ್ಲಿ ಸೇವೆ ಒದಗಿಸುತ್ತಿದೆ.
* ರಿಲಯನ್ಸ್ ಸ್ವತಂತ್ರವಾಗಿ ಈ ಮಾರುಕಟ್ಟೆಯಲ್ಲಿ ಪ್ರವೇಶಿಸಿ ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಪರಿಚಯಿಸಲು ಸ್ಥಳೀಯ ಕೇಬಲ್ ಆಪರೇಟರ್ ಗಳ ವಿರೋಧ ಅಧಿಕವಾಗಿದೆ. ಹೀಗಾಗಿ, ಈ ಡೀಲ್ ಕುದುರುವ ಸಾಧ್ಯತೆ ಅಧಿಕವಾಗಿದೆ.

English summary
Reliance Industries has initiated talks to acquire India's largest able operator Hathway cable and Datacom. Reliance Jio, billionaire Mukesh Ambani's telecom venture, may soon get another Rs 60,000 crore to beef up its war chest as it plans to launch its broadband services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X