• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ: ವಾಟ್ಸಾಪ್ ಚಾಟ್‌ಬಾಟ್ ಕೈ ಜೋಡಿಸಿದ ರಿಲಯನ್ಸ್

|

ನವದೆಹಲಿ, ಮಾರ್ಚ್ 22: ದೇಶದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ಬಳಸುತ್ತಿದೆ. ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಅನ್ನು ಪ್ರಾರಂಭಿಸಿದೆ

ಕೊರೊನಾ ಕುರಿತು ನಿಮಗೆ ಕಾಡುವ ಅನುಮಾನ, ಕುತೂಹಲಗಳಿಗೆ ಈ ಆಪ್ ನಲ್ಲಿ ಉತ್ತರ ಪಡೆಯಬಹುದು. ಕೊರೊನಾ ಕುರಿತಂತೆ ಸಂದೇಶಗಳಿದ್ದರೂ ಈ ವಾಟ್ಸಾಪ್ ಚಾಟ್‌ಬಾಟ್‌ ಮೂಲಕ ಸಿಗುತ್ತದೆ.

ವಾಟ್ಸಾಪ್‌ನಲ್ಲಿ 'MyGov ಕೊರೊನಾ ಸಹಾಯಕೇಂದ್ರ' ಆರಂಭಿಸಿದ ಕೇಂದ್ರ ಸರ್ಕಾರ

ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು, ಅವರ ಅಗತ್ಯ ಸಂದರ್ಭದಲ್ಲಿ ಸಹಾಯ ಮಾಡಲು ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಅನ್ನು ಆರಂಭಿಸಿದೆ. ಈ ಚಾಟ್ ಬಾಟ್ ಅನ್ನು ಇದನ್ನು ವಿಶ್ವದ ಅತಿದೊಡ್ಡ ಸಂವಾದಾತ್ಮಕ ಎಐ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಅಂಗಸಂಸ್ಥೆಯಾದ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯಗತಗೊಳಿಸಿದೆ.

ವಾಟ್ಸಾಪ್ ಸಂದೇಶವನ್ನು ಕಳುಹಿಸಿ

ವಾಟ್ಸಾಪ್ ಸಂದೇಶವನ್ನು ಕಳುಹಿಸಿ

+91 9013151515 ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮೂಲಭೂತ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್ ಮೂಲಕ ಒಂದು ಬಟನ್ ಪ್ರೇಸ್ ಮಾಡಿ ಸರಿಯಾದ ಮಾಹಿತಿಯನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶ.

ಜಿಯೋ ಹ್ಯಾಪ್ಟಿಕ್ ಉಚಿತವಾಗಿ ಲಭ್ಯ

ಜಿಯೋ ಹ್ಯಾಪ್ಟಿಕ್ ಉಚಿತವಾಗಿ ಲಭ್ಯ

ಈ ಚಾಟ್‌ಬಾಟ್ ಅನ್ನು ಜಿಯೋ ಹ್ಯಾಪ್ಟಿಕ್(Jio Haptik) ಉಚಿತವಾಗಿ ಅಭಿವೃದ್ಧಿಪಡಿಸಿದ್ದು ಮತ್ತು ನೆಜಿಡಿ (NeGD) ಮತ್ತು ಮೈಗೋವ್‌(MyGov)ನ ಸೂಚನೆಗಳ ಪ್ರಕಾರ ನೈಜ ಸಮಯದಲ್ಲಿ ನವೀಕರಿಸಲಾಗಿದೆ (ಎರಡೂ MEITY ಅಡಿಯಲ್ಲಿ). ನೈಜ ಸಮಯದ ಆಪ್‌ಡೇಟ್‌ಗಳ ಮೂಲಕ ಪ್ರಸ್ತುತ ಸನ್ನಿವೇಶದ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದು, ಇದರೊಂದಿಗೆ ಸಾಮೂಹಿಕ ಉನ್ಮಾದಕ್ಕೆ ಕಾರಣವಾಗುವ ಸುಳ್ಳು ಮಾಹಿತಿಯ ಪ್ರಸರಣವನ್ನು ತಡೆಯಲು ಸಹಾಯಕಾರಿಯಾಗಲಿದೆ ಈ ಚಾಟ್ ಬಾಟ್.

ವೈರಸ್ ಕುರಿತ ಸಂಬಂಧಿಸಿದ FAQ

ವೈರಸ್ ಕುರಿತ ಸಂಬಂಧಿಸಿದ FAQ

ಆರೋಗ್ಯ ಸಚಿವಾಲಯದಿಂದ ಪರಿಶೀಲಿಸಿದ ಡೇಟಾದೊಂದಿಗೆ, ಚಾಟ್ ಬಾಟ್ ಕೊರೋನ ವೈರಸ್ ಕುರಿತ ಸಂಬಂಧಿಸಿದ FAQ ಗಳನ್ನು ಪರಿಹರಿಸಲಿದೆ. ಇದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ಲಕ್ಷಣಗಳು, ಸರಿಯಾದ ಮತ್ತು ತಪ್ಪಾದ ಸಂಗತಿಗಳು, ಸಹಾಯವಾಣಿ ಸಂಖ್ಯೆಗಳು, ಪ್ರದೇಶದ ಪೀಡಿತ ಪ್ರಕರಣಗಳು, ಸರ್ಕಾರದ ಸಲಹೆಗಳು (ಪ್ರಯಾಣ ಸೇರಿದಂತೆ), ಮಾಹಿತಿ ವೀಡಿಯೊಗಳು ಇತ್ಯಾದಿಗಳನ್ನು ಒಳಗೊಂಡಿರಲಿದೆ.

ಕೇಂದ್ರ ಸಹಾಯವಾಣಿ

ಕೇಂದ್ರ ಸಹಾಯವಾಣಿ

ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್‌ ಚಾಟ್‌ಬಾಟ್‌ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ

ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075

English summary
Govt of India has launched a WhatsApp chatbot called 'MyGov Corona Helpdesk'. Jio's Haptik powers chatbot. People can access the chatbot by sending a WhatsApp message to the number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X