ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ದಾಖಲೆ: 11.5 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿ

|
Google Oneindia Kannada News

ನವದೆಹಲಿ, ಜುಲೈ 6: ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಮತ್ತೊಂದು ಗರಿ ಲಭಿಸಿದೆ. ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರುಕಟ್ಟೆ ಮೌಲ್ಯಮಾಪನವು 11.5 ಲಕ್ಷ ಕೋಟಿಗಳನ್ನು ದಾಟಿದೆ. ಈ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಕಂಪನಿಯಾಗಿದೆ. ಇದು ಯಾವುದೇ ದೇಶೀಯ ಕಂಪನಿಯ ಮೊದಲನೆಯದು.

ಇಂದು ಷೇರು ಮಾರುಕಟ್ಟೆ ಬಿಎಸ್‌ಇಯಲ್ಲಿ(ಸೆನ್ಸೆಕ್ಸ್‌) ಕಂಪನಿಯ ಷೇರುಗಳು ಶೇಕಡಾ 3.57ರಷ್ಟು ಏರಿಕೆ ಕಂಡು 1,851.40 ಕ್ಕೆ ತಲುಪಿದೆ. ಇದು 3.94% ರಷ್ಟು ದಾಖಲೆಯ ಗರಿಷ್ಠ 1,858 ಕ್ಕೆ ತಲುಪಿತ್ತು. ಎನ್‌ಎಸ್‌ಇಯಲ್ಲಿ ಇದು ಶೇಕಡಾ 3.75ರಷ್ಟು ಗಳಿಸಿ 1,855 ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು.

ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ: 11 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಕಂಪನಿರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ: 11 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಕಂಪನಿ

ಬಿಎಸ್‌ಇಯ ವಹಿವಾಟಿನ ಮುಕ್ತಾಯದ ವೇಳೆಗೆ ಕಂಪನಿಯ ಮಾರುಕಟ್ಟೆ ಮೌಲ್ಯಮಾಪನ 40,508.8 ಕೋಟಿ ಏರಿಕೆ ಕಂಡು 11,73,677.35 ಕೋಟಿ ರುಪಾಯಿಗೆ ತಲುಪಿದೆ.

RIL Record:Become First India Firm To Cross 11.5 Trillion Market Cap Mark

ಶೇಕಡವಾರು ಪ್ರಕಾರ, ಕಂಪನಿಯ 9.49 ಲಕ್ಷ ಷೇರುಗಳನ್ನು ಬಿಎಸ್‌ಇಯಲ್ಲಿ ಮತ್ತು ಎನ್‌ಎಸ್‌ಇಯಲ್ಲಿ 2 ಕೋಟಿಗೂ ಹೆಚ್ಚು ವಹಿವಾಟು ನಡೆಸಲಾಯಿತು. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿನ ಲಾಭವು ಬಿಎಸ್ಇ 30-ಷೇರು ಸೂಚ್ಯಂಕವನ್ನು 465.86 ಪಾಯಿಂಟ್ ಅಥವಾ 1.29% ರಷ್ಟು 36,487.28 ಕ್ಕೆ ತಲುಪಲು ಸಹಕಾರಿಯಾಗಿದೆ.

ದೇಶದ ಅತ್ಯಮೂಲ್ಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ತಿಂಗಳು 11 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯಮಾಪನ ದಾಟಿದ ಮೊದಲ ಭಾರತೀಯ ಕಂಪನಿಯಾಗಿದೆ.

English summary
Reliance Industries Limited on Monday added another feather to its cap as its market valuation crossed ₹11.5 lakh crore mark, the first by any domestic company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X