ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ 4ನೇ ತ್ರೈಮಾಸಿಕ ವರದಿ: ಜಿಯೋ ಗ್ರಾಹಕರ ಸಂಖ್ಯೆ 38.75 ಕೋಟಿ

|
Google Oneindia Kannada News

ಬೆಂಗಳೂರು,ಮೇ 1: ಮಾರ್ಚ್ 31, 2020ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2019-20ರ ನಾಲ್ಕನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ 6,546 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 151,209 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 2.5ರಷ್ಟು ಕಡಿಮೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Recommended Video

ಅಂಬಾನಿ ಜೊತೆ 43,574 ಕೋಟಿ ಒಪ್ಪಂದ ಮಾಡಿಕೊಂಡ ಫೇಸ್ ಬುಕ್ | Facebook | Mukesh Ambani

2019-20ರ ಆರ್ಥಿಕ ವರ್ಷದಲ್ಲಿ ಆರ್‌ಐಎಲ್ 659,205 ಕೋಟಿ ರೂ. ಒಟ್ಟಾರೆ ಆದಾಯ ಗಳಿಸಿದ್ದು, ಹಿಂದಿನ ವರ್ಷದ ಹೋಲಿಕೆಯಲ್ಲಿ ಇದು ಶೇ. 5.4ರಷ್ಟು ಹೆಚ್ಚಾಗಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಸಂಸ್ಥೆಯ ವಾರ್ಷಿಕ ಆದಾಯವು (EBITDA) ಇದೇ ಮೊದಲ ಬಾರಿಗೆ 100,000 ಕೋಟಿ ರೂ. ಗಡಿ ದಾಟಿರುವುದು ವಿಶೇಷ.

ಕಿರಾಣಿ ಅಂಗಡಿಗಳನ್ನು ಆನ್ಲೈನ್‌ಗೆ ತರಲಿರುವ ಜಿಯೋ- ಫೇಸ್ಬುಕ್ಕಿರಾಣಿ ಅಂಗಡಿಗಳನ್ನು ಆನ್ಲೈನ್‌ಗೆ ತರಲಿರುವ ಜಿಯೋ- ಫೇಸ್ಬುಕ್

ಈ ಅವಧಿಯಲ್ಲಿ ರಿಲಯನ್ಸ್ ರೀಟೇಲ್ ಕೂಡ ದಾಖಲೆಯ ಸಾಧನೆ ಮಾಡಿದ್ದು, ಈ ವಿಭಾಗದ ವಾರ್ಷಿಕ ಆದಾಯ ಕಳೆದ ವರ್ಷದ ಹೋಲಿಕೆಯಲ್ಲಿ ಶೇ. 24.8ರಷ್ಟು ಏರಿಕೆ ಕಂಡು 162,936 ಕೋಟಿ ರೂ. ತಲುಪಿದೆ. ಒಟ್ಟಾರೆ 11,784 ಸ್ಟೋರ್‌ಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಯು ಡೆಲಾಯಿಟ್‌ನ 'ಗ್ಲೋಬಲ್ ಪವರ್ಸ್ ಆಫ್ ರೀಟೇಲಿಂಗ್ 2020' ವರದಿಯಲ್ಲಿ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಿಲಯನ್ಸ್ ಜಿಯೋ ಇನ್‌ಫೋಕಾಮ್

ರಿಲಯನ್ಸ್ ಜಿಯೋ ಇನ್‌ಫೋಕಾಮ್

ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಆರ್ಥಿಕ ವರ್ಷ 2019-20ರ ನಾಲ್ಕನೇ ತ್ರೈಮಾಸಿಕದಲ್ಲಿ 2,331 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದೊಡನೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 177.5ರಷ್ಟು ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಜಿಯೋ ಚಂದಾದಾರರ ಸಂಖ್ಯೆ ಶೇ. 26.3 ಏರಿಕೆ ಕಂಡು 38.75 ಕೋಟಿಗೆ ತಲುಪಿದೆ.

 ಜಿಯೋ ಮಾರ್ಟ್ ಪ್ರಾಯೋಗಿಕ ಅನುಷ್ಠಾನ

ಜಿಯೋ ಮಾರ್ಟ್ ಪ್ರಾಯೋಗಿಕ ಅನುಷ್ಠಾನ

ಈ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಂದ ದೊರಕಿದ ಸರಾಸರಿ ಆದಾಯ (ARPU) ರೂ. 130.6ರಷ್ಟಿತ್ತು. ಸಂಸ್ಥೆಯ ವಾರ್ಷಿಕ ನಿವ್ವಳ ಲಾಭ 5,562 ಕೋಟಿ ರೂ. ತಲುಪಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಶೇ. 88ರಷ್ಟು ಹೆಚ್ಚಳವಾಗಿದೆ. ಈ ತ್ರೈಮಾಸಿದಕದಲ್ಲಿ ಜಿಯೋ ಮಾರ್ಟ್ ಪರಿಕಲ್ಪನೆಯ ಪ್ರಾಯೋಗಿಕ ಅನುಷ್ಠಾನ ಈಗಾಗಲೇ ಪ್ರಾರಂಭವಾಗಿದ್ದು, ಪ್ರಾಥಮಿಕ ಹಂತದಲ್ಲಿ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ.

 ಜಿಯೋ ಗ್ರಾಹಕರು 1,284 ಕೋಟಿ ಜಿಬಿಯಷ್ಟು ಡೇಟಾ

ಜಿಯೋ ಗ್ರಾಹಕರು 1,284 ಕೋಟಿ ಜಿಬಿಯಷ್ಟು ಡೇಟಾ

ಈ ತ್ರೈಮಾಸಿಕದಲ್ಲಿ ಜಿಯೋ ಗ್ರಾಹಕರು 1,284 ಕೋಟಿ ಜಿಬಿಯಷ್ಟು ಡೇಟಾ ಬಳಸಿದ್ದರೆ, ಜಿಯೋ ಜಾಲ ಒಟ್ಟು 87,634 ಕೋಟಿ ನಿಮಿಷಗಳಷ್ಟು ವಾಯ್ಸ್ ಕರೆಗಳನ್ನು ನಿರ್ವಹಿಸಿದೆ. ಜಿಯೋ ಗ್ರಾಹಕರ ಡೇಟಾ ಬಳಕೆಯ ಸರಾಸರಿ ಪ್ರಮಾಣ ತಿಂಗಳಿಗೆ ತಲಾ 11.3 ಜಿಬಿಯಷ್ಟಿದ್ದರೆ ವಾಯ್ಸ್ ಕರೆಗಳ ಸರಾಸರಿ ಬಳಕೆ ತಿಂಗಳಿಗೆ ತಲಾ 771 ನಿಮಿಷಗಳಷ್ಟಿದೆ. ಜಿಯೋ ಗ್ರಾಹಕರ ಸಂಖ್ಯೆ 38.75 ಕೋಟಿಗೇರಿದೆ.

 ಜಿಯೋ-ಫೇಸ್ಬುಕ್ ಪಾಲುದಾರಿಕೆ

ಜಿಯೋ-ಫೇಸ್ಬುಕ್ ಪಾಲುದಾರಿಕೆ

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನಲ್ಲಿ ಶೇ. 9.99 ಪಾಲುದಾರಿಕೆಗಾಗಿ ಫೇಸ್‌ಬುಕ್ ಜೊತೆಗೆ ರೂ. 43,574 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿಹಾಕಿದ್ದು ಈ ತ್ರೈಮಾಸಿಕದ ವಿಶೇಷ. ಇದಲ್ಲದೆ ಜಿಯೋ ಪ್ಲಾಟ್‌ಫಾರ್ಮ್ಸ್ ಸಂಸ್ಥೆಯು 'ಜಿಯೋಮೀಟ್' ಎಂಬ ರಾಷ್ಟ್ರವ್ಯಾಪಿ ವೀಡಿಯೋ ವೇದಿಕೆಯನ್ನೂ ರೂಪಿಸುವುದಾಗಿ ಘೋಷಿಸಿದೆ.

English summary
RIL quarterly results: Reliance Industries Limited (RIL) has announced that Jio subscriber base has reached 38.75 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X