• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಸಂಸ್ಥೆಗೆ 400 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರು

|

ಮುಂಬೈ, ನ.1: ಸೆಪ್ಟೆಂಬರ್ 30, 2020ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2020-21ರ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 10,602 ರೂ. ನಿವ್ವಳ ಲಾಭವಾಗಿದ್ದು, ಕಳೆದ ತ್ರೈಮಾಸಿಕದ ಹೋಲಿಕೆಯಲ್ಲಿ (ಎಕ್ಸೆಪ್ಷನಲ್ ಐಟಮ್‌ಗೆ ಮೊದಲು) ಇದು ಶೇ. 28ರಷ್ಟು ಏರಿಕೆ ಕಂಡಿದೆ. ಆದರೆ ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ನಿವ್ವಳ ಲಾಭ ಶೇ 15ರಷ್ಟು ಕುಸಿತವಾಗಿದೆ. ಕಳೆದ ವರ್ಷ 11,352 ಕೋಟಿ ರು ಗಳಿಕೆಯಾಗಿತ್ತು.

ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 128,385 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 165,228 ಕೋಟಿ ರು ಆದಾಯ ಬಂದಿತ್ತು. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಈ ತ್ರೈಮಾಸಿಕದಲ್ಲಿ 23,299 ಕೋಟಿ ರೂ.ಗಳಷ್ಟಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಈ ಅವಧಿಯಲ್ಲಿ ಹಲವು ಪ್ರಮುಖ ಜಾಗತಿಕ ಹೂಡಿಕೆದಾರರಿಂದ 152,056 ಕೋಟಿ ರೂ.ಗಳ ಹೊಸ ಬಂಡವಾಳವನ್ನು ಪಡೆದುಕೊಂಡಿದೆ.

1Gbpsಗೂ ಹೆಚ್ಚಿನ ವೇಗದ ಸಾಧಿಸಿದ ಜಿಯೋ ಮತ್ತು ಕ್ವಾಲ್

ಕ್ವಾಲ್‌ಕಾಮ್ ಟೆಕ್ನಾಲಜೀಸ್, ಇಂಕ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜಿಯೋ) ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ಇಂದು ವರ್ಚುವಲೈಸ್ಡ್ RANನೊಂದಿಗೆ ಮುಕ್ತ ಮತ್ತು ಇಂಟರ್‌ಆಪರಬಲ್ ಇಂಟರ್‌ಫೇಸ್ ಕಂಪ್ಲಯಂಟ್ ಆರ್ಕಿಟೆಕ್ಚರ್ ಆಧಾರಿತ 5G ಪರಿಹಾರಗಳನ್ನು ಅಭಿವೃದ್ಧಿಪಡಿಸುವ ವಿಸ್ತೃತ ಪ್ರಯತ್ನಗಳನ್ನು ಪ್ರಕಟಿಸಿದ್ದು, ಭಾರತದಲ್ಲಿ ಸ್ಥಳೀಯ 5G ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೇವೆಗಳ ಅಭಿವೃದ್ಧಿ ಹಾಗೂ ಪ್ರಾರಂಭವನ್ನು ತ್ವರಿತಗೊಳಿಸುವುದು ಈ ಪ್ರಯತ್ನಗಳ ಉದ್ದೇಶವಾಗಿದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್‌ನ ಇನ್ನೊಂದು ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಇದೇ ಅವಧಿಯಲ್ಲಿ 37,710 ಕೋಟಿ ರೂ.ಗಳಷ್ಟು ಹೊಸ ಬಂಡವಾಳ ಪಡೆದಿದೆಯಲ್ಲದೆ ಫ್ಯೂಚರ್ ಗ್ರೂಪ್‌ನ ರೀಟೇಲ್ ಮತ್ತು ಹೋಲ್‌ಸೇಲ್ ಹಾಗೂ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ವ್ಯವಹಾರಗಳನ್ನು 24,713 ಕೋಟಿ ರೂ.ಗಳಿಗೆ ಕೊಳ್ಳುವ ಒಪ್ಪಂದವನ್ನೂ ಮಾಡಿಕೊಂಡಿದೆ. ಪ್ರಮುಖ ಡಿಜಿಟಲ್ ಫಾರ್ಮಾ ಮಾರ್ಕೆಟ್‌ಪ್ಲೇಸ್ ಆದ 'ನೆಟ್‌ಮೆಡ್ಸ್'ನಲ್ಲೂ ಅದು ಸುಮಾರು 620 ಕೋಟಿ ರೂ. ಹೂಡಿಕೆಗೆ ಪ್ರತಿಯಾಗಿ ಅಧಿಕಾಂಶ ಪಾಲುದಾರಿಕೆಯನ್ನು ಪಡೆದುಕೊಂಡಿದೆ.

 30,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ

30,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ

ಜಾಗತಿಕ ಸೋಂಕಿನಿಂದ ಬಾಧಿತವಾದ ಅವಧಿಯಲ್ಲೂ ಅರ್ಥವ್ಯವಸ್ಥೆಯಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯನ್ನು ಬೆಂಬಲಿಸಿದ ಸಂಸ್ಥೆಯು ಏಪ್ರಿಲ್-ಸೆಪ್ಟೆಂಬರ್ 2020ರ ಅವಧಿಯಲ್ಲಿ ಗ್ರಾಹಕ ವ್ಯವಹಾರ ಹಾಗೂ ಕೊನೆಯ ಮೈಲಿ ವಿತರಣೆಯಲ್ಲಿ 30,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ.

ಈ ಅವಧಿಯಲ್ಲಿ ಸಂಸ್ಥೆಯ (O2C )ಓ2ಸಿ - ಪೆಟ್ರೋಕೆಮಿಕಲ್ಸ್, ಓ೨ಸಿ - ರೀಫೈನಿಂಗ್ ಮತ್ತು ಮಾರ್ಕೆಟಿಂಗ್, ಆಯಿಲ್ ಆಂಡ್ ಗ್ಯಾಸ್ (ಎಕ್ಸ್‌ಪ್ಲೊರೇಶನ್ ಆಂಡ್ ಪ್ರೊಡಕ್ಷನ್) ಬಿಸಿನೆಸ್ ಹಾಗೂ ಮೀಡಿಯಾ ವ್ಯವಹಾರಗಳೂ ಉತ್ತಮ ನಿರ್ವಹಣೆ ತೋರಿವೆ.

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್

ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್

ರಿಲಯನ್ಸ್ ಸಮೂಹದ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆರ್ಥಿಕ ವರ್ಷ 2020-21ರ ಎರಡನೇ ತ್ರೈಮಾಸಿಕದಲ್ಲಿ 3,020 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದೇ ವರ್ಷದ ಮೊದಲ ತ್ರೈಮಾಸಿಕದೊಡನೆ ಹೋಲಿಕೆಯಲ್ಲಿ ಇದು ಶೇ. 19.8ರಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಿಯೋ ಚಂದಾದಾರರ ಸಂಖ್ಯೆಯಲ್ಲಿ ಶೇ.1.8ರಷ್ಟು ಹೆಚ್ಚಳ ಕಂಡುಬಂದಿದ್ದು ಸೆಪ್ಟೆಂಬರ್ ಅಂತ್ಯದ ವೇಳೆಗೆ ಅದು 405.6 ದಶಲಕ್ಷಕ್ಕೆ ತಲುಪಿದೆ. ಈ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಂದ ದೊರಕಿದ ಸರಾಸರಿ ಆದಾಯ (ARPU) ರೂ. 145ರಷ್ಟಿತ್ತು. ಕಳೆದ ತ್ರೈಮಾಸಿಕದಲ್ಲಿದ್ದ ರೂ. 140.3ಕ್ಕಿಂತ ಇದು ಹೆಚ್ಚು. ಈ ತ್ರೈಮಾಸಿಕದಲ್ಲಿ ಒಟ್ಟಾರೆ ವೈರ್‌ಲೆಸ್ ಡೇಟಾ ಬಳಕೆಯ ಪ್ರಮಾಣ ಶೇ. 1.5ರಷ್ಟು ಹೆಚ್ಚಳ ಕಂಡು 1,442 ಕೋಟಿ ಜಿಬಿ ತಲುಪಿದೆ. ಈ ಅವಧಿಯ ಒಟ್ಟಾರೆ ವಾಯ್ಸ್ ಟ್ರಾಫಿಕ್ 93,223 ಕೋಟಿ ನಿಮಿಷಗಳಷ್ಟಿತ್ತು. ಒಂದೇ ದೇಶದಲ್ಲಿ 400 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರಿರುವ ಚೀನಾದ ಹೊರಗಿನ ಮೊದಲ ಟೆಲಿಕಾಮ್ ಆಪರೇಟರ್ ಎಂಬ ಹೆಗ್ಗಳಿಕೆಯನ್ನೂ ಜಿಯೋ ಈ ತ್ರೈಮಾಸಿಕದಲ್ಲಿ ಪಡೆದುಕೊಂಡಿದೆ.

ರಿಲಯನ್ಸ್ ರೀಟೇಲ್

ರಿಲಯನ್ಸ್ ರೀಟೇಲ್

ರಿಲಯನ್ಸ್ ರೀಟೇಲ್ ಈ ತ್ರೈಮಾಸಿಕದಲ್ಲಿ 41,100 ಕೋಟಿ ರೂ.ಗಳ ಆದಾಯ ಹಾಗೂ 2,006 ಕೋಟಿ ರೂ.ಗಳ EBITDA ಗಳಿಸಿದೆ. ಈ ಅವಧಿಯ ನಿವ್ವಳ ಲಾಭ 973 ಕೋಟಿ ರೂ.ಗಳಷ್ಟಿತ್ತು. 11,931 ಕಾರ್ಯನಿರತ ಭೌತಿಕ ಮಳಿಗೆಗಳನ್ನು ನಿರ್ವಹಿಸುತ್ತಿರುವ ರಿಲಯನ್ಸ್ ರೀಟೇಲ್‌ನ ಜಾಲಕ್ಕೆ ಈ ತ್ರೈಮಾಸಿಕದಲ್ಲಿ 125 ಹೊಸ ಮಳಿಗೆಗಳು ಸೇರಿವೆ. ಈ ತ್ರೈಮಾಸಿಕದಲ್ಲಿ ಸಂಸ್ಥೆಯು ಫಾರ್ಮಾ ವಿಭಾಗವನ್ನೂ ಪ್ರವೇಶಿಸಿದೆ. ಜಿಯೋಮಾರ್ಟ್ ಕಿರಾಣಾ ಪಾಲುದಾರಿಕೆಗಳನ್ನು ಈ ತ್ರೈಮಾಸಿಕದಲ್ಲಿ 20 ನಗರಗಳಿಗೆ ವಿಸ್ತರಿಸಲಾಗಿದ್ದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಾಗ ಆದೇಶಗಳ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಏರಿಕೆ ಕಂಡುಬಂದಿದೆ.

English summary
RIL Q2 key takeways: Consolidated Value of sales and services for 2Q FY21 increased by 30.0% Q-o-Q to ₹ 41,100 crore, a strong performance given that the full store network was not operational and with footfalls still significantly lower than pre-COVID levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X