ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಲಾಭದಲ್ಲಿ ದಾಖಲೆ ಏರಿಕೆ, 20 ಕೋಟಿ ದಾಟಿದ ಗ್ರಾಹಕರು

By Mahesh
|
Google Oneindia Kannada News

ಬೆಂಗಳೂರು, ಜುಲೈ 29: ಜೂನ್ 30, 2018ಕ್ಕೆ ಅಂತ್ಯವಾದ 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 9,459 ಕೋಟಿ ರೂ. ನಿವ್ವಳ ಲಾಭವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 17.9ರಷ್ಟು ಏರಿಕೆ ಕಂಡಿದೆ.

ಪೆಟ್ರೋಕೆಮಿಕಲ್ಸ್ ವಿಭಾಗದ ದಾಖಲೆ ಆದಾಯ (ಬಡ್ಡಿ ಹಾಗೂ ತೆರಿಗೆಗಳ ಮುನ್ನ 7,857 ಕೋಟಿ ರೂ.) ಈ ಏರಿಕೆಗೆ ಪ್ರಮುಖ ಕೊಡುಗೆ ನೀಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 141,699 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 56.5ರಷ್ಟು ಹೆಚ್ಚು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿಶೇಷ ರೀಚಾರ್ಜ್ : ಜಿಯೋಫೋನ್ ಮಾನ್ಸೂನ್ ಹಂಗಾಮ ಪ್ರಾರಂಭವಿಶೇಷ ರೀಚಾರ್ಜ್ : ಜಿಯೋಫೋನ್ ಮಾನ್ಸೂನ್ ಹಂಗಾಮ ಪ್ರಾರಂಭ

ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಮ್, ಈ ಅವಧಿಯಲ್ಲಿ 612 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದೊಡನೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 19.9ರಷ್ಟು ಹೆಚ್ಚಳವಾಗಿದೆ.

ಜಿಯೋ ಚಂದಾದಾರರ ಸಂಖ್ಯೆ 20 ಕೋಟಿ

ಜಿಯೋ ಚಂದಾದಾರರ ಸಂಖ್ಯೆ 20 ಕೋಟಿ

ಜಿಯೋ ಚಂದಾದಾರರ ಸಂಖ್ಯೆ ಈ ಅವಧಿಯಲ್ಲಿ 20 ಕೋಟಿಯ ಗಡಿ ದಾಟಿ ಒಟ್ಟು 21.53 ಕೋಟಿಗೆ ತಲುಪಿದೆ. ಜಿಯೋ ಗ್ರಾಹಕರು ಈ ತ್ರೈಮಾಸಿಕದಲ್ಲಿ 642 ಕೋಟಿ ಜಿಬಿಯಷ್ಟು ಡೇಟಾ ಬಳಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗ್ರಾಹಕರ ಡೇಟಾ ಬಳಕೆಯ ಮಾಸಿಕ ಪ್ರಮಾಣ ತಲಾ 10.6 ಜಿಬಿ ತಲುಪಿದ್ದು ಈ ಪ್ರಮಾಣ ಕ್ಷಿಪ್ರವಾಗಿ ಹೆಚ್ಚುತ್ತಿದೆ. ಜಿಯೋ ಜಾಲ ಇದೇ ಅವಧಿಯಲ್ಲಿ ಒಟ್ಟು 44,871 ಕೋಟಿ ನಿಮಿಷಗಳಷ್ಟು ವಾಯ್ಸ್ ಕರೆಗಳನ್ನು ನಿರ್ವಹಿಸಿದೆ.

ಶೇ. 100ಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ

ಶೇ. 100ಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ

ಈ ಅವಧಿಯಲ್ಲಿ ರಿಲಯನ್ಸ್ ರೀಟೇಲ್ ಕೂಡ ದಾಖಲೆಯ ಸಾಧನೆ ಮಾಡಿದ್ದು, ಈ ವಿಭಾಗದ ಆದಾಯ ಕಳೆದ ವರ್ಷದ ಹೋಲಿಕೆಯಲ್ಲಿ ಶೇ. 123.7ರಷ್ಟು ಏರಿಕೆ ಕಂಡು 25,890 ಕೋಟಿ ರೂ. ತಲುಪಿದೆ. ಈ ಮೂಲಕ ಈ ವಿಭಾಗವು ಸತತ ಮೂರನೆಯ ತ್ರೈಮಾಸಿಕದಲ್ಲೂ ಹಿಂದಿನ ವರ್ಷದ ಹೋಲಿಕೆಯಲ್ಲಿ ಶೇ. 100ಕ್ಕಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿದ ಸಾಧನೆ ಮಾಡಿದೆ.

ಹಳೆ ಫೀಚರ್ ಫೋನ್‌ ಕೊಟ್ಟು ಜಿಯೋ ಫೋನ್ ಪಡೆಯಿರಿಹಳೆ ಫೀಚರ್ ಫೋನ್‌ ಕೊಟ್ಟು ಜಿಯೋ ಫೋನ್ ಪಡೆಯಿರಿ

ವಿಶ್ವಾಸಾರ್ಹ ದಿನಸಿ ಬ್ರಾಂಡ್

ವಿಶ್ವಾಸಾರ್ಹ ದಿನಸಿ ಬ್ರಾಂಡ್

ರಿಲಯನ್ಸ್ ರೀಟೇಲ್‌ನ ಭಾಗವಾದ ರಿಲಯನ್ಸ್ ಫ್ರೆಶ್ 'ದ ಬ್ರಾಂಡ್ ಟ್ರಸ್ಟ್ ರಿಪೋರ್ಟ್'ನಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ದಿನಸಿ ಬ್ರಾಂಡ್ ಎಂಬ ಗೌರವಕ್ಕೆ ಪಾತ್ರವಾಗಿದ್ದು ಈ ಅವಧಿಯ ವೈಶಿಷ್ಟ್ಯಗಳಲ್ಲೊಂದು. ಇದೇ ರೀತಿ ರಿಲಯನ್ಸ್ ಡಿಜಿಟಲ್ ಕೂಡ ಇದೀಗ ಭಾರತದ ಅತಿದೊಡ್ಡ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಚೈನ್ ಆಗಿ ಹೊರಹೊಮ್ಮಿದೆ.

ರಿಲಯನ್ಸ್ Q1 ವರದಿ ಸಾರಾಂಶ

ರಿಲಯನ್ಸ್ Q1 ವರದಿ ಸಾರಾಂಶ

* ಕಳೆದ ತೈಮಾಸಿಕಕ್ಕೆ ಹೋಲಿಸಿದರೆ ರಿಲಯನ್ಸ್ ಸಂಸ್ಥೆಯ ಆದಾಯ ಶೇ 8.5ರಷ್ಟು ಏರಿಕೆ ಕಂಡು 91,159 ಕೋಟಿ ರು ಆಗಿದೆ. 88, 503 ಕೋಟಿ ರು ಗಳಿಕೆ ನಿರೀಕ್ಷಿಸಲಾಗಿತ್ತು.
* ನಿರ್ವಹಣಾ ಲಾಭ ಪ್ರಗತಿ ಶೇ 12.9ರಷ್ಟು ಏರಿಕೆ ಕಂಡು 15,154 ಕೋಟಿ ರು ಆಗಿದೆ.
* ಸಾಲದ ಮೊತ್ತ 2.18 ಲಕ್ಷ ಕೋಟಿ ರು ನಿಂದ 2.42 ಲಕ್ಷ ಕೋಟಿ ರು ಗಳಿಗೆ ಏರಿಕೆ
* ಆರ್ಥಿಕ ವೆಚ್ಚ ಶೇ 38.3 ರಷ್ಟು ಏರಿಕೆ, 3,550 ಕೋಟಿ ರು

English summary
Reliance Retail achieved record performance in sales and profits for the quarter. Segment Revenues for 1Q FY19 grew by 123.7% Y-o-Y to ₹ 25,890 crore from ₹ 11,571 crore. This is the third consecutive quarter recording over 100% Y-o-Y revenue growth for Reliance Retail. PBDIT for 1Q FY19 grew by 203% Y-o-Y to ₹ 1,206 crore from ₹ 398 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X