ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ 3ನೇ ತ್ರೈಮಾಸಿಕ: ಶೇ 41ಕ್ಕೂ ಅಧಿಕ ಲಾಭ ದಾಖಲು

|
Google Oneindia Kannada News

ಮುಂಬೈ, ಜನವರಿ 23: ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಅಕ್ಟೋಬರ್- ಡಿಸೆಂಬರ್ 2020ರ ತ್ರೈಮಾಸಿಕ ಫಲಿತಾಂಶ ಶುಕ್ರವಾರ ಪ್ರಕಟಿಸಲಾಗಿದ್ದು, ಶೇಕಡಾ 40ಕ್ಕಿಂತ ಹೆಚ್ಚಿನ ಬೆಳವಣಿಗೆ ಪಡೆದುಕೊಂಡಿದೆ.

ಈ ತ್ರೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭ 15,015 ಕೋಟಿ ರುಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 41.6% ಲಾಭ ಹೆಚ್ಚಾಗಿದೆ. ಇನ್ನು ಆದಾಯ 1,37,829 ಕೋಟಿ ರುಪಾಯಿ ಬಂದಿದ್ದು, ಕಳೆದ ತ್ರೈಮಾಸಿಕದಲ್ಲಿ ಬಂದಿದ್ದಕ್ಕಿಂತ 7.4% ಆದಾಯ ಹೆಚ್ಚಾಗಿದೆ.

ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್

ತೈಲದಿಂದ ರಾಸಾಯನಿಕದ ತನಕ (O2C) ವ್ಯವಹಾರ ನಡೆಸುವ ರಿಲಯನ್ಸ್ (RIL) ನಿವ್ವಳ ಲಾಭ 8744 ಕೋಟಿ ರುಪಾಯಿ ಬಂದಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 33.6% ಹೆಚ್ಚಿನ ಲಾಭ ದಾಖಲಿಸಿದೆ. ಇನ್ನು ಆದಾಯ 10.9% ಹೆಚ್ಚಳವಾಗಿ, ರು. 71,454 ಕೋಟಿ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪೆನಿಯ ರಫ್ತು ಪ್ರಮಾಣ ರು. 31,599 ಕೋಟಿ ಆಗಿದ್ದು, 8.5% ಕುಸಿತ ಆಗಿದೆ.

RIL & JIO Q3: Financial and Operational Performance

ಜಿಯೋ ಪ್ಲಾಟ್ ಫಾರ್ಮ್ ಸಮಗ್ರ ಫಲಿತಾಂಶ ಗಮನಿಸುವುದಾದರೆ, ಈ ತ್ರೈಮಾಸಿಕದ ನಿವ್ವಳ ಲಾಭ ರು. 3489 ಕೋಟಿ ಬಂದಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 15.5% ಬೆಳವಣಿಗೆ ದಾಖಲಿಸಿದೆ. ಇನ್ನು ಆದಾಯ ರು. 22,858 ಕೋಟಿ ರುಪಾಯಿ ಬಂದಿದ್ದು, 5.3% ಪ್ರಗತಿ ಕಂಡಿದೆ. ಡಿಸೆಂಬರ್ 31, 2020ಕ್ಕೆ ಗ್ರಾಹಕರ ಸಂಖ್ಯೆ 41.08 ಕೋಟಿ ಆಗಿದ್ದು, ನಿವ್ವಳವಾಗಿ 51.2 ಲಕ್ಷ ಗ್ರಾಹಕರು ಸೇರ್ಪಡೆ ಆಗಿದ್ದಾರೆ.

ಈ ತ್ರೈಮಾಸಿಕದಲ್ಲಿ ಬಳಕೆದಾರರ ಸರಾಸರಿ ತಲಾ ಆದಾಯ (ARPU) ಒಬ್ಬ ಗ್ರಾಹಕರಿಗೆ ತಿಂಗಳಿಗೆ ರು. 151.0 ಇದೆ. ಒಟ್ಟಾರೆ ಡೇಟಾ ಟ್ರಾಫಿಕ್ ಈ ತ್ರೈಮಾಸಿಕದಲ್ಲಿ 1,586 ಕೋಟಿ ಜಿಬಿ ಇದ್ದು, 4% ಬೆಳವಣಿಗೆ ಕಂಡಿದೆ.

ಇನ್ನು ರಿಲಯನ್ಸ್ ರೀಟೇಲ್ ನಿಂದ ರು. 1830 ಕೋಟಿ ಲಾಭ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 88.1% ಹೆಚ್ಚಾಗಿದೆ. ಆದಾಯ ರು. 37,845 ಕೋಟಿ ಬಂದಿದ್ದು, 7.9%ನಷ್ಟು ಆದಾಯದಲ್ಲಿ ಇಳಿಕೆ ಆಗಿದೆ. ಈ ತ್ರೈಮಾಸಿಕದಲ್ಲಿ ಒಟ್ಟು 12,201 ಮಳಿಗೆಗಳು ಕಾರ್ಯ ನಿರ್ವಹಿಸಿವೆ. ಆ ಪೈಕಿ 327 ಮಳಿಗೆಗಳನ್ನು ಇದೇ ಅವಧಿಯಲ್ಲಿ ಆರಂಭಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಮಾತನಾಡಿ, "ಮಾರ್ಚ್ 2020ರಿಂದ ಈಚೆಗೆ ರಿಲಯನ್ಸ್ ನಿಂದ 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ ಎಂಬ ಬಗ್ಗೆ ಹೆಮ್ಮೆ ಆಗುತ್ತದೆ. ಅದರಲ್ಲೂ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಹಂತದಲ್ಲಿ ರಿಲಯನ್ಸ್ ಕೂಡ ಅದ್ಭುತ ಪ್ರದರ್ಶನದ ಮೂಲಕ ಕೊಡುಗೆ ನೀಡುತ್ತಿರುವುದನ್ನು ವಿನಯಪೂರ್ವಕವಾಗಿ ಗಮನಕ್ಕೆ ತರಲು ಬಯಸುತ್ತದೆ" ಎಂದಿದ್ದಾರೆ.

English summary
RIL & JIO Q3: Consolidated revenue from operations, including access revenues, of ₹ 19,475 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X