ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್ ಸ್ಟಾರ್ಟ್‌ಅಪ್‌ಗಳ ಮೇಲೆ ರಿಲಯನ್ಸ್‌ ಕಣ್ಣು

|
Google Oneindia Kannada News

ನವದೆಹಲಿ, ಆಗಸ್ಟ್‌ 17: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಇ-ಕಾಮರ್ಸ್ ವ್ಯವಹಾರವನ್ನು ಬಲಪಡಿಸಲು ಆನ್‌ಲೈನ್ ಪೀಠೋಪಕರಣ ಚಿಲ್ಲರೆ ವ್ಯಾಪಾರಿ ಅರ್ಬನ್ ಲ್ಯಾಡರ್ ಮತ್ತು ಹಾಲು ವಿತರಣಾ ಸಂಸ್ಥೆ ಮಿಲ್ಕ್‌ಬಾಸ್ಕೆಟ್ ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಅರ್ಬನ್ ಲ್ಯಾಡರ್ ಜೊತೆ ಭಾರತದ ಬೃಹತ್ ಕಂಪನಿಗಳಲ್ಲಿ ಒಂದಾದ ಆರ್‌ಐಎಲ್ ಮಾತುಕತೆ ಮುಂದುವರಿದ ಹಂತದಲ್ಲಿದೆ ಎಂದು ಹೆಸರಿಲ್ಲದ ನಾಲ್ಕು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಒಂದು ಒಪ್ಪಂದವನ್ನು ಸುಮಾರು 30 ಮಿಲಿಯನ್‌ ಡಾಲರ್‌ಗೆ ನಿಗದಿಪಡಿಸಬಹುದು ಎಂದು ಹೇಳಲಾಗಿದೆ.

ಜಿಯೋಮಾರ್ಟ್ App ಪ್ಲೇ ಸ್ಟೋರಲ್ಲಿ 10 ಲಕ್ಷ ಡೌನ್ ಲೋಡ್ಜಿಯೋಮಾರ್ಟ್ App ಪ್ಲೇ ಸ್ಟೋರಲ್ಲಿ 10 ಲಕ್ಷ ಡೌನ್ ಲೋಡ್

ಆದರೆ ಈ ಮಾತುಕತೆ ಕುರಿತು ರಿಲಯನ್ಸ್, ಅರ್ಬನ್ ಲ್ಯಾಡರ್ ಮತ್ತು ಮಿಲ್ಕ್‌ಬಾಸ್ಕೆಟ್‌ನ ಪ್ರತಿನಿಧಿಗಳು ಪ್ರತಿಕ್ರಿಯಿಸಲು ರಾಯಿಟರ್ಸ್ ಕೋರಿಕೆಗೆ ನಿರಾಕರಿಸಿದ್ದಾರೆ.

RIL In Talks To Buy Online Furniture Retail, Milk Delivery Startups: Report

ಕೊರೊನಾ ಸಾಂಕ್ರಾಮಿಕದ ಬಳಿಕ ದೇಶದಲ್ಲಿ ಆನ್‌ಲೈನ್‌ ಮಾರುಕಟ್ಟೆಯು ಬಲಿಷ್ಠವಾಗಿ ಬೆಳೆಯಲಾರಂಭಿಸಿದೆ. ಆನ್‌ಲೈನ್‌ ಬೇಡಿಕೆಯು ಹೆಚ್ಚುತ್ತಿರುವ ಹಿನ್ನೆಲೆ ಹೊಸ ರೀತಿಯ ಸ್ಟಾರ್ಟ್‌ಅಪ್‌ಗಳ ಉದಯಕ್ಕೂ ಕಾರಣವಾಗಿದೆ.

ವಿಶ್ವದ ನಾಲ್ಕನೇ ಹಾಗೂ ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಮೇ ತಿಂಗಳಲ್ಲಿ ಆನ್‌ಲೈನ್ ಕಿರಾಣಿ ಸೇವೆ ಜಿಯೋಮಾರ್ಟ್ ಪ್ರಾರಂಭಿಸಿದರು. ಕಳೆದ ಕೆಲವು ತಿಂಗಳುಗಳಲ್ಲಿ ರಿಲಯನ್ಸ್‌ನ ಡಿಜಿಟಲ್ ವಿಭಾಗ ಜಿಯೋ ಪ್ಲಾಟ್‌ಫಾರ್ಮ್‌ಗಳಿಗಾಗಿ ಫೇಸ್‌ಬುಕ್ ಮತ್ತು ಆಲ್ಫಾಬೆಟ್‌ನ ಗೂಗಲ್ ಸೇರಿದಂತೆ 13 ಬೃಹತ್ ಸಂಸ್ಥೆಗಳು 20 ಶತಕೋಟಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ.

English summary
Reliance Industries Ltd is in talks to buy online furniture retailer Urban Ladder and milk delivery firm Milkbasket to strengthen its e-commerce business, the Times of India newspaper reported on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X