ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟಾಪ್ ನಲ್ಲಿದ್ದ ಮುಕೇಶ್ ಅಂಬಾನಿಗೆ ಏನಾಯಿತು? ಟಾಪ್ 10 ನಿಂದ ಔಟ್

|
Google Oneindia Kannada News

ಆಯಿಲ್, ಟೆಲಿಕಾಂ, ರಿಟೇಲ್ ಹೀಗೆ ತನ್ನ ಸಾಮ್ರಾಜ್ಯವನ್ನು ಹೆಚ್ಚಿನ ಕ್ಷೇತ್ರದಲ್ಲಿ ವಿಸ್ತರಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಡೆಯ ಮುಕೇಶ್ ಅಂಬಾನಿ, ವಿಶ್ವದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಲಾಕ್ ಡೌನ್ ಅವಧಿಯಲ್ಲೂ ಬೇರೆ ಬೇರೆ ಕಂಪೆನಿಗಳ ಜೊತೆ ಟೈಅಪ್ ಮಾಡಿಕೊಂಡು ತನ್ನ ವ್ಯಾಪಾರವನ್ನು ವೃದ್ದಿಸಿಕೊಂಡು ಬಂದಿದ್ದ ಅಂಬಾನಿ, ಬ್ಲೂಮ್ ಬರ್ಗ್ ಸಿರಿವಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಈ ವರ್ಷದ ಆದಿಯಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.

20 ವರ್ಷದಲ್ಲಿ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ20 ವರ್ಷದಲ್ಲಿ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ

ಈ ವರ್ಷದಲ್ಲಿ ರಿಲಯನ್ಸ್ ಸಂಸ್ಥೆಯ ಶೇರುಗಳು, ಮಾರುಕಟ್ಟೆ ಮೌಲ್ಯದಲ್ಲಿ ಭಾರೀ ಕುಸಿತಗೊಂಡಿದ್ದರಿಂದ, ಅಂಬಾನಿ ಈಗ ಟಾಪ್ ಟೆನ್ ಪಟ್ಟಿಯಲ್ಲಿಲ್ಲ. ಗೂಗಲ್, ಫೇಸ್ ಬುಕ್ ನಂತಹ ಸಂಸ್ಥೆಗಳು ರಿಲಯನ್ಸ್ ಸಂಸ್ಥೆಯ ಮೇಲೆ ಹೂಡಿಕೆಯನ್ನು ಮಾಡಿದ್ದವು.

 Fact Check: ಮುಕೇಶ್ ಅಂಬಾನಿ ಮೊಮ್ಮಗುವನ್ನು ನೋಡಲು ಮೋದಿ ಆಸ್ಪತ್ರೆಗೆ ಹೋಗಿದ್ದರೇ? Fact Check: ಮುಕೇಶ್ ಅಂಬಾನಿ ಮೊಮ್ಮಗುವನ್ನು ನೋಡಲು ಮೋದಿ ಆಸ್ಪತ್ರೆಗೆ ಹೋಗಿದ್ದರೇ?

ಕೊರೊನಾದಿಂದಾಗಿ ಉದ್ಯೋಗ ನಷ್ಟ, ಕಂಪನಿಗಳಿಗೆ ಆರ್ಥಿಕ ಹೊಡೆತವಾಗಿದ್ದರೂ, ಈ ವರ್ಷದಲ್ಲಿ ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್ ಜಿಯೋ ಕಡೆ ಕೋಟಿ ಕೋಟಿ ಹೂಡಿಕೆ ಸುರಿದು ಬಂದಿತ್ತು. ಬ್ಲೂಮ್ ಬರ್ಗ್ ಬಿಡುಗಡೆ ಮಾಡಿರುವ ಲೇಟೆಸ್ಟ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಎಷ್ಟನೇ ಸ್ಥಾನ?

ಫೇಸ್​ಬುಕ್ ಹೂಡಿಕೆ

ಫೇಸ್​ಬುಕ್ ಹೂಡಿಕೆ

ಲಾಕ್ ಡೌನ್ ಅವಧಿಯಲ್ಲಿ ಮುಕೇಶ್ ಅಂಬಾನಿಯ ಸಂಸ್ಥೆಗಳ ಮೇಲೆ ಒಂದೂವರೆ ಲಕ್ಷ ಕೋಟಿ ಹೂಡಿಕೆಯಾಗಿದ್ದವು. ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ಇಂಟೆಲ್ ಮೊದಲಾದ ಸಂಸ್ಥೆಗಳು ಜಿಯೋ ಮೇಲೆ ಹೂಡಿಕೆ ಮಾಡಿದ್ದವು. ಇದಲ್ಲದೇ, ಗೂಗಲ್‌ ಸಂಸ್ಥೆಯಿಂದ ಹೂಡಿಕೆಯೂ ಸೇರಿ, ಒಟ್ಟಾರೆಯಾಗಿ 1.52ಲಕ್ಷ ಕೋಟಿ ಹೂಡಿಕೆಯಾಗಿತ್ತು.

ಬ್ಲೂಮ್ ಬರ್ಗ್ ಬಿಡುಗಡೆ ಮಾಡಿರುವ ವಿಶ್ವದ ಶ್ರೀಮಂತರ ಪಟ್ಟಿ

ಬ್ಲೂಮ್ ಬರ್ಗ್ ಬಿಡುಗಡೆ ಮಾಡಿರುವ ವಿಶ್ವದ ಶ್ರೀಮಂತರ ಪಟ್ಟಿ

ಬ್ಲೂಮ್ ಬರ್ಗ್ ಬಿಡುಗಡೆ ಮಾಡಿರುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ನಾಲ್ಕನೇ ಸ್ಥಾನದಿಂದ ಹನ್ನೊಂದನೇ ಸ್ಥಾನಕ್ಕೆ ಇಳಿದಿದ್ದಾರೆ. ಇದಕ್ಕೆ ಕಾರಣ, ಅವರ ಸಂಸ್ಥೆಯ ಮಾರುಕಟ್ಟೆ ಮೌಲ್ಯ 6.62 ಲಕ್ಷ ಕೋಟಿ ರೂಪಾಯಿಯಿಂದ 5.63 ಲಕ್ಷ ಕೋಟಿಗೆ ಇಳಿಕೆಯಾಗಿದ್ದು.

ಅಂಬಾನಿ ಹತ್ತನೇ ಸ್ಥಾನದಿಂದ ಹೊರಬಿದ್ದಿದ್ದಾರೆ

ಅಂಬಾನಿ ಹತ್ತನೇ ಸ್ಥಾನದಿಂದ ಹೊರಬಿದ್ದಿದ್ದಾರೆ

ಓರಾಕಲ್ ಸಂಸ್ಥೆಯ ಲ್ಯಾರಿ ಎಲಿಸನ್ ಮತ್ತು ಗೂಗಲ್ ಸಹಸಂಸ್ಥಾಪಕ ಸೆರ್ಜೆ ಬ್ರಿನ್ ನಂತರದ ಸ್ಥಾನದಲ್ಲಿ ಮುಕೇಶ್ ಅಂಬಾನಿಯಿದ್ದಾರೆ. ಇವರಿಬ್ಬರು ಕ್ರಮವಾಗಿ ಹತ್ತು ಮತ್ತು ಒಂಬತ್ತನೇ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಸಂಸ್ಥೆಯ ಶೇರುಗಳಲ್ಲಿ ಶೇ. ಹದಿನಾರು ಕುಸಿತಗೊಂಡಿದ್ದರಿಂದ, ಅಂಬಾನಿ ಹತ್ತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಅಂಬಾನಿ 1995-2020ರ ಅವಧಿಯಲ್ಲಿ ತನ್ನ ಆಸ್ತಿಯನ್ನು 6.3 ಲಕ್ಷ ಕೋಟಿಗೆ ಏರಿಸಿಕೊಂಡಿದ್ದಾರೆ

ಅಂಬಾನಿ 1995-2020ರ ಅವಧಿಯಲ್ಲಿ ತನ್ನ ಆಸ್ತಿಯನ್ನು 6.3 ಲಕ್ಷ ಕೋಟಿಗೆ ಏರಿಸಿಕೊಂಡಿದ್ದಾರೆ

ಬ್ಲೂಮ್ ಬರ್ಗ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿಶ್ವದ ಅತಿ ಶ್ರೀಮಂತ ಯಾರು, ಎರಡನೇ, ಮೂರನೇ ಸ್ಥಾನದಲ್ಲಿ ಯಾರಿದ್ದಾರೆ ಎನ್ನುವುದು ಇನ್ನೂ ಗೊತ್ತಾಗಬೇಕಿದೆ. ಮೋತಿಲಾಲ್ ಓಸ್ವಾಲ್ ಸ್ಟಡಿಯ ಪ್ರಕಾರ, ಮುಕೇಶ್ ಅಂಬಾನಿ 1995-2020ರ ಅವಧಿಯಲ್ಲಿ ತನ್ನ ಆಸ್ತಿಯನ್ನು 6.3 ಲಕ್ಷ ಕೋಟಿಗೆ ಏರಿಸಿಕೊಂಡಿದ್ದಾರೆ.

English summary
RIL Chief Mukesh Ambani No Longer Among The Top 10 Richest Billionaires In The World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X