ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಿಯೋ-ಬಿಪಿ' ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್ ಹಾಗೂ ಬಿಪಿ

|
Google Oneindia Kannada News

ನವದೆಹಲಿ, ಜುಲೈ 10: ಇಂಧನಗಳು ಮತ್ತು ಮೊಬಿಲಿಟಿಗಾಗಿ ತಮ್ಮ ಹೊಸ ಭಾರತೀಯ ಜಂಟಿ ಉದ್ಯಮ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್‌ನ (ಆರ್‌ಬಿಎಂಎಲ್) ಪ್ರಾರಂಭವನ್ನು ಬಿಪಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಇಂದು ಘೋಷಿಸಿವೆ.

Recommended Video

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಕಾಮೇಗೌಡರು | KameGowda | Oneindia Kannada

2019ರ ಆರಂಭಿಕ ಒಪ್ಪಂದಗಳನ್ನು ಅನುಸರಿಸಿ, ಬಿಪಿ ಮತ್ತು ಆರ್‌ಐಎಲ್ ತಂಡಗಳು ಈ ವಹಿವಾಟನ್ನು ಪೂರ್ಣಗೊಳಿಸಲು ಕಳೆದ ಕೆಲವು ತಿಂಗಳುಗಳಿಂದ ಸವಾಲಿನ ವಾತಾವರಣದಲ್ಲಿ ಒಟ್ಟಾಗಿ ಕೆಲಸ ಮಾಡಿವೆ. ಈ ಜಂಟಿ ಉದ್ಯಮದಲ್ಲಿ ಶೇಕಡಾ 49ರಷ್ಟು ಪಾಲಿಗಾಗಿ ಬಿಪಿ 1 ಬಿಲಿಯನ್ ಡಾಲರ್‌ಗಳನ್ನು ಆರ್‌ಐಎಲ್‌ಗೆ ಪಾವತಿಸಿದೆ ಮತ್ತು ಶೇಕಡಾ 51ರಷ್ಟು ಆರ್‌ಐಎಲ್ ವಶದಲ್ಲಿದೆ.

ಇಂಧನಗಳು ಮತ್ತು ಮೊಬಿಲಿಟಿಗಾಗಿ ಹೊಸ ಉದ್ಯಮ ಪ್ರಾರಂಭ

ಇಂಧನಗಳು ಮತ್ತು ಮೊಬಿಲಿಟಿಗಾಗಿ ಹೊಸ ಉದ್ಯಮ ಪ್ರಾರಂಭ

"ಜಿಯೋ-ಬಿಪಿ" ಬ್ರ್ಯಾಂಡ್‌ನ ಅಡಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಜಂಟಿ ಉದ್ಯಮವು ಭಾರತದ ಇಂಧನಗಳು ಮತ್ತು ಮೊಬಿಲಿಟಿ ಮಾರುಕಟ್ಟೆಗಳಲ್ಲಿ ಪ್ರಮುಖ ಸ್ಥಾನ ಪಡೆಯುವ ಗುರಿ ಹೊಂದಿದೆ. ಇದು 21 ರಾಜ್ಯಗಳಲ್ಲಿರುವ ರಿಲಯನ್ಸ್ ಉಪಸ್ಥಿತಿ ಹಾಗೂ ಜಿಯೋ ಡಿಜಿಟಲ್ ವೇದಿಕೆಯ ಮೂಲಕ ಅದರ ಲಕ್ಷಾಂತರ ಗ್ರಾಹಕರ ಪ್ರಯೋಜನವನ್ನು ಪಡೆದುಕೊಳ್ಳಲಿದೆ. ಉತ್ತಮ ಗುಣಮಟ್ಟದ ವಿಭಿನ್ನ ಇಂಧನಗಳು, ಲೂಬ್ರಿಕೆಂಟ್‌ಗಳು, ರೀಟೇಲ್ ಹಾಗೂ ಅತ್ಯಾಧುನಿಕ ಲೋ ಕಾರ್ಬನ್ ಮೊಬಿಲಿಟಿ ಸಲ್ಯೂಶನ್‌ಗಳಲ್ಲಿ ತನ್ನ ವ್ಯಾಪಕ ಜಾಗತಿಕ ಅನುಭವದ ಅನುಕೂಲವನ್ನು ಬಿಪಿ ಒದಗಿಸಲಿದೆ.

ಮುಂದಿನ 20 ವರ್ಷದಲ್ಲಿ ಭಾರತ ವಿಶ್ವದಲ್ಲೇ ಬೃಹತ್ ಇಂಧನ ಮಾರುಕಟ್ಟೆಯಾಗಲಿದೆ..!

ಮುಂದಿನ 20 ವರ್ಷದಲ್ಲಿ ಭಾರತ ವಿಶ್ವದಲ್ಲೇ ಬೃಹತ್ ಇಂಧನ ಮಾರುಕಟ್ಟೆಯಾಗಲಿದೆ..!

ಶಕ್ತಿ ಮತ್ತು ಮೊಬಿಲಿಟಿಗಾಗಿ ವೇಗವಾಗಿ ಬೆಳೆಯುತ್ತಿರುವ ಭಾರತದ ಬೇಡಿಕೆಗಳನ್ನು ಪೂರೈಸಲು ಈ ಉದ್ಯಮದ ಕ್ಷಿಪ್ರ ಬೆಳವಣಿಗೆಯನ್ನು ಎಂದು ಬಿಪಿ ಮತ್ತು ಆರ್‌ಐಎಲ್ ನಿರೀಕ್ಷಿಸುತ್ತಿವೆ. ಮುಂದಿನ 20 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುವ ಇಂಧನ ಮಾರುಕಟ್ಟೆಯಾಗಲಿದೆಯೆಂದು ನಿರೀಕ್ಷಿಸಲಾಗಿದ್ದು, ಈ ಅವಧಿಯಲ್ಲಿ ದೇಶದ ಪ್ರಯಾಣಿಕ ಕಾರುಗಳ ಸಂಖ್ಯೆ ಸುಮಾರು ಆರು ಪಟ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಆರ್‌ಬಿಎಂಎಲ್ ತನ್ನ ಪ್ರಸ್ತುತ 1,400ಕ್ಕೂ ಹೆಚ್ಚು ರೀಟೇಲ್ ಸೈಟ್‌ಗಳ ಇಂಧನದ ಚಿಲ್ಲರೆ ವ್ಯಾಪಾರ ಜಾಲವನ್ನು ಮುಂದಿನ ಐದು ವರ್ಷಗಳಲ್ಲಿ 5,500ರವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಈ ಕ್ಷಿಪ್ರ ಬೆಳವಣಿಗೆಗೆ ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ನಾಲ್ಕು ಪಟ್ಟು ಹೆಚ್ಚಳ ಅಗತ್ಯವಾಗಿದ್ದು, ಆ ಸಂಖ್ಯೆ ಈ ಅವಧಿಯಲ್ಲಿ 20,000ದಿಂದ 80,000ಕ್ಕೆ ಬೆಳೆಯಲಿದೆ. ಈ ಜಂಟಿ ಉದ್ಯಮವು ಮುಂಬರುವ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು 30ರಿಂದ 45 ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನೂ ಇಟ್ಟುಕೊಂಡಿದೆ.

ಹೊಸ ಪಾಲುದಾರಿಕೆ ಕುರಿತು ಮುಖೇಶ್ ಅಂಬಾನಿ ಏನು ಹೇಳಿದ್ದಾರೆ?

ಹೊಸ ಪಾಲುದಾರಿಕೆ ಕುರಿತು ಮುಖೇಶ್ ಅಂಬಾನಿ ಏನು ಹೇಳಿದ್ದಾರೆ?

ಪಾಲುದಾರಿಕೆ ಕುರಿತು ಪ್ರತಿಕ್ರಿಯೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ರೀಟೇಲ್ ಮತ್ತು ವಾಯುಯಾನ ಇಂಧನಗಳಲ್ಲಿ ಭಾರತದಾದ್ಯಂತ ಉಪಸ್ಥಿತಿಯನ್ನು ಸ್ಥಾಪಿಸಲು ಬಿಪಿ ಜೊತೆಗಿನ ಸದೃಢ ಮತ್ತು ಮೌಲ್ಯಯುತ ಪಾಲುದಾರಿಕೆಯನ್ನು ರಿಲಯನ್ಸ್ ವಿಸ್ತರಿಸುತ್ತಿದೆ. ಮೊಬಿಲಿಟಿ ಮತ್ತು ಲೋ ಕಾರ್ಬನ್ ಸಲ್ಯೂಶನ್‌ಗಳಲ್ಲಿ ನಾಯಕತ್ವ ಸ್ಥಾನ ಪಡೆಯುವ ಗುರಿ ಹೊಂದಿರುವ ಆರ್‌ಬಿಎಂಎಲ್, ಡಿಜಿಟಲ್ ಹಾಗೂ ತಂತ್ರಜ್ಞಾನವನ್ನು ನಮ್ಮ ಶಕ್ತಿಯನ್ನಾಗಿಟ್ಟುಕೊಂಡು ಭಾರತೀಯ ಗ್ರಾಹಕರಿಗೆ ಸ್ವಚ್ಛ ಮತ್ತು ಕೈಗೆಟುಕುವ ಆಯ್ಕೆಗಳನ್ನು ತರಲಿದೆ." ಎಂದು ಹೇಳಿದ್ದಾರೆ.

ಕಡಿಮೆ ಹೊರಸೂಸುವಿಕೆ ಅತ್ಯಾಧುನಿಕ ಇಂಧನಗಳು

ಕಡಿಮೆ ಹೊರಸೂಸುವಿಕೆ ಅತ್ಯಾಧುನಿಕ ಇಂಧನಗಳು

ಸಂಸ್ಥೆಗಳ ನಿವ್ವಳ ಶೂನ್ಯ ಮಹತ್ವಾಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಈ ಹೊಸ ಜಂಟಿ ಉದ್ಯಮವು ಭಾರತೀಯ ಗ್ರಾಹಕರಿಗೆ ಕಡಿಮೆ ಹೊರಸೂಸುವಿಕೆಯ ಅತ್ಯಾಧುನಿಕ ಇಂಧನಗಳು, ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮತ್ತು ಇತರ ಲೋ ಕಾರ್ಬನ್ ಸಲ್ಯೂಶನ್‌ಗಳನ್ನು ಕಾಲಕ್ರಮೇಣ ಒದಗಿಸಲು ಬಯಸುತ್ತದೆ. ತನ್ನ ಹಾಗೂ ತನ್ನ ವಿಸ್ತೃತ ಇಕೋಸಿಸ್ಟಂ‌ನ ಕಾರ್ಯಾಚರಣೆಗಳ ಡಿಕಾರ್ಬನೈಸೇಶನ್‌ಗೂ ಆರ್‌ಬಿಎಂಎಲ್ ಬದ್ಧವಾಗಿದೆ.

ನಿಯಂತ್ರಕರ ಮತ್ತು ಶಾಸನಬದ್ಧವಾದ ಅಗತ್ಯ ಅನುಮೋದನೆಗಳ ಪೈಕಿ ಸಾರಿಗೆ ಇಂಧನಗಳಿಗೆ ಮಾರ್ಕೆಟಿಂಗ್ ದೃಢೀಕರಣವನ್ನು ಆರ್‌ಬಿಎಂಎಲ್ ಪಡೆದುಕೊಂಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಜಂಟಿ ಉದ್ಯಮವು ಈಗಾಗಲೇ ಅಸ್ತಿತ್ವದಲ್ಲಿರುವ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನಗಳು ಮತ್ತು ಕ್ಯಾಸ್ಟ್ರಾಲ್ ಲೂಬ್ರಿಕೆಂಟ್‌ಗಳ ಮಾರಾಟವನ್ನು ಪ್ರಾರಂಭಿಸಲಿದ್ದು, ಈ ಮಳಿಗೆಗಳನ್ನು ಇಷ್ಟರಲ್ಲೇ "ಜಿಯೋ-ಬಿಪಿ" ಎಂದು ಮರುನಾಮಕರಣ ಮಾಡಲಾಗುತ್ತದೆ.

English summary
Reliance Industries and BP India today announced the start of their new Indian fuels and mobility joint venture, Reliance BP Mobility Limited (RBML).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X