ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ನಲ್ಲಿ 18 ತಿಂಗಳ ಕನಿಷ್ಠ ಮಟ್ಟ 2.19% ತಲುಪಿದ ಚಿಲ್ಲರೆ ಹಣದುಬ್ಬರ

|
Google Oneindia Kannada News

ಚಿಲ್ಲರೆ ಹಣದುಬ್ಬರ ದರವು 18 ತಿಂಗಳ ಕನಿಷ್ಠ ಮಟ್ಟವಾದ 2.19%ಗೆ ಡಿಸೆಂಬರ್ 2018ರಲ್ಲಿ ತಲುಪಿದೆ. ಅದಕ್ಕೆ ಮುಖ್ಯ ಕಾರಣ ಆಗಿರುವುದು ಹಣ್ಣು, ತರಕಾರಿ ಹಾಗೂ ಇಂಧನ ಬೆಲೆಯಲ್ಲಿನ ಕುಸಿತ. ಹಣದುಬ್ಬರುವು ಗ್ರಾಹಕ ದರ ಸೂಚ್ಯಂಕ (ಸಿಪಿಐ) ನವೆಂಬರ್ ನಲ್ಲಿ 2.33% ಹಾಗೂ ಡಿಸೆಂಬರ್ 2017ರಲ್ಲಿ 5.21% ಮೇಲೆ ಆಧಾರವಾಗಿದೆ.

ಈ ಹಿಂದಿನ ಕನಿಷ್ಠ ಹಣದುಬ್ಬರವು ಜೂನ್ 2017ರಲ್ಲಿ 1.46% ದಾಖಲಾಗಿತ್ತು. ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2.51% ಆಹಾರ ಹಣದುಬ್ಬರವು ನವೆಂಬರ್ ನ (-) 2.61% ಗೆ ಹೋಲಿಸಿದರೆ ನಕಾರಾತ್ಮಕ ವಲಯದಲ್ಲೇ ಇದೆ.

ಹಣದುಬ್ಬರದ ಎರಡು ಅಲುಗಿನ ಕತ್ತಿಗೆ ಸಿಕ್ಕು ಅಧಿಕಾರ ಕಳ್ಕೊಂಡ ಬಿಜೆಪಿಹಣದುಬ್ಬರದ ಎರಡು ಅಲುಗಿನ ಕತ್ತಿಗೆ ಸಿಕ್ಕು ಅಧಿಕಾರ ಕಳ್ಕೊಂಡ ಬಿಜೆಪಿ

ತರಕಾರಿಗಳು, ಹಣ್ಣುಗಳು, ಪ್ರೊಟೀನ್ ಯುಕ್ತ ಮೊಟ್ಟೆಗಳ ಬೆಲೆಯಲ್ಲಿ ಏರಿಕೆ ನಿರಂತರವಾಗಿ ಇಳಿಕೆ ಕಾಣುತ್ತಿದೆ. ಆದರೆ ಮಾಂಸ, ಮೀನು ಹಾಗೂ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ.

Vegetable

ಇಂಧನ ಹಾಗೂ ವಿದ್ಯುಚ್ಛಕ್ತಿ ಹಣದುಬ್ಬರವು ಡಿಸೆಂಬರ್ ನಲ್ಲಿ 4.54% ಆಗಿದೆ. ಅದು ನವೆಂಬರ್ ನಲ್ಲಿ 7.39% ಇತ್ತು. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕಡಿಮೆ ಆಗಿರುವುದರಿಂದ ಅದರ ಪ್ರಭಾವ ಆಗಿದೆ.

ಇದಕ್ಕೂ ಮುನ್ನ ಬಿಡುಗಡೆಯಾದ ಮಾಹಿತಿ ಪ್ರಕಾರ, ಸಗಟು ದರಗಳನ್ನು ಆಧರಿಸಿದ ಹಣದುಬ್ಬರವು ಎಂಟು ತಿಂಗಳ ಕನಿಷ್ಠವಾದ 3.80% ಡಿಸೆಂಬರ್ 2018ರಲ್ಲಿ ತಲುಪಿದೆ. ಇಂಧನ ಹಾಗೂ ಕೆಲ ಆಹಾರ ಪದಾರ್ಥಗಳಲ್ಲಿ ಆದ ಇಳಿಕೆಯಿಂದ ಪ್ರಭಾವ ಬೀರಿದೆ. ಸಗಟು ದರ ಸೂಚ್ಯಂಕವು 2018 ನವೆಂಬರ್ ನಲ್ಲಿ 4.64% ಇದ್ದರೆ, 2017 ಡಿಸೆಂಬರ್ ನಲ್ಲಿ 3.58% ಇತ್ತು.

English summary
Retail inflation declined to an 18-month low of 2.19 percent in December 2018 mainly on account of sliding prices of fruits, vegetables and fuel. The inflation based on the Consumer Price Index (CPI) was 2.33 per cent in November and 5.21 per cent in December 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X