ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 6.93ಕ್ಕೆ ಇಳಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 14: ದೇಶದಲ್ಲಿ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ತುಸು ಇಳಿಕೆ ಸಾಧಿಸಿದೆ. ಆಹಾರ ಉತ್ಪನ್ನಗಳ ಬೆಲೆ ಕೊಂಚ ಕಡಿಮೆ ಆದ ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6.93ಕ್ಕೆ ತಲುಪಿದೆ.

ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಅಕ್ಟೋಬರ್‌ ತಿಂಗಳಲ್ಲಿ ಶೇ 7.61 ರಷ್ಟಿದ್ದ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇ. 6.93ಗೆ ತಲುಪಿದೆ. ಈ ಮೂಲಕ ಸಿಪಿಐ ಹಣದುಬ್ಬರವು ಈ ವರ್ಷದುದ್ದಕ್ಕೂ ಶೇಕಡಾ 6 ಕ್ಕಿಂತಲೂ ಹೆಚ್ಚಿದೆ ಎಂದು ಇತ್ತೀಚಿನ ಅಂಕಿ ಅಂಶಗಳು ತೋರಿಸುತ್ತವೆ.

ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಕೊಂಚ ಇಳಿಕೆ: ಶೇ. 6.69ರಷ್ಟು ದಾಖಲುಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಕೊಂಚ ಇಳಿಕೆ: ಶೇ. 6.69ರಷ್ಟು ದಾಖಲು

ಆಹಾರ ಬೆಲೆಗಳ ಏರಿಕೆಯ ಹಿನ್ನೆಲೆಯಲ್ಲಿ ಸಿಪಿಐ ಹಣದುಬ್ಬರವು ಅಕ್ಟೋಬರ್‌ನಲ್ಲಿ ಆರು ವರ್ಷಗಳ ಗರಿಷ್ಠ 7.61 ಕ್ಕೆ ಏರಿದೆ. ಮೇ 2014 ರಿಂದ ಹಣದುಬ್ಬರ ಮಟ್ಟವು ಶೇಕಡಾ 8.33 ರಷ್ಟಿದ್ದಾಗ ಇದು ಚಿಲ್ಲರೆ ಹಣದುಬ್ಬರದ ಅತ್ಯುನ್ನತ ಮಟ್ಟವಾಗಿದೆ.

Retail Inflation Decreases To 6.93% In November

ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾದ ಕಾರಣ ಪೂರೈಕೆಯ ಕೊರತೆಯಿಂದಾಗಿ ಈರುಳ್ಳಿ ಬೆಲೆ ತಿಂಗಳಲ್ಲಿ ಗಗನಕ್ಕೇರಿರುವುದರಿಂದ ತರಕಾರಿ ಬೆಲೆಯಲ್ಲಿ ಹಣದುಬ್ಬರ ದರವು ತಿಂಗಳಲ್ಲಿ ಹೆಚ್ಚಾಗಿದೆ. ಆಲೂಗಡ್ಡೆ ಮತ್ತು ಟೊಮೆಟೊ ಬೆಲೆಗಳು ಸಹ ಸರಾಸರಿ ಮಟ್ಟಕ್ಕಿಂತ ಹೆಚ್ಚಾಗಿದೆ.

English summary
India’s retail inflation cooled marginally to 6.93% in november Compare to 7.61% In october
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X