ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 4.59ಕ್ಕೆ ಇಳಿಕೆ

|
Google Oneindia Kannada News

ನವದೆಹಲಿ, ಜನವರಿ 13: ಚಿಲ್ಲರೆ ಹಣದುಬ್ಬರವು 2020 ರ ಡಿಸೆಂಬರ್‌ನಲ್ಲಿ 4.59 ಕ್ಕೆ ಇಳಿದಿದ್ದು, ತರಕಾರಿ ಬೆಲೆಗಳು ತೀವ್ರವಾಗಿ ಕುಸಿದಿವೆ ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ.

ನವೆಂಬರ್‌ನಲ್ಲಿ ಚಿಲ್ಲದರೆ ಹಣದುಬ್ಬರವು 6.93 ರಷ್ಟಿತ್ತು. ಡಿಸೆಂಬರ್‌ನ ಚಿಲ್ಲರೆ ಹಣದುಬ್ಬರ ದತ್ತಾಂಶವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇಲಿನ ಶೇಕಡಾ 6 ರಷ್ಟಿದೆ. ಒಂಬತ್ತು ತಿಂಗಳಲ್ಲಿ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇಕಡಾ 2 ರಿಂದ 6ರಷ್ಟು ಆರಾಮ ಶ್ರೇಣಿಗೆ ಮರಳಿದೆ.

ನವೆಂಬರ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 6.93ಕ್ಕೆ ಇಳಿಕೆನವೆಂಬರ್‌ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 6.93ಕ್ಕೆ ಇಳಿಕೆ

ಚಿಲ್ಲರೆ ಹಣದುಬ್ಬರವನ್ನು ಎರಡೂ ಕಡೆಗಳಲ್ಲಿ (ಗರಿಷ್ಠ ಮತ್ತು ಕನಿಷ್ಠ) 4 ಪ್ರತಿಶತದ ವ್ಯಾಪ್ತಿಯಲ್ಲಿ ಶೇಕಡಾ 2 ಅಂತರದೊಂದಿಗೆ ಇರಿಸಿಕೊಳ್ಳಲು ಸರ್ಕಾರ ಆರ್‌ಬಿಐ ಅನ್ನು ಕೇಳಿದೆ. ಅಂದರೆ ಗರಿಷ್ಠ 6 ಪ್ರತಿಶತ ಮತ್ತು ಕನಿಷ್ಠ 2 ಪ್ರತಿಶತ.

Retail Inflation Declines To 4.59% In December

ಆರ್‌ಬಿಐ ತನ್ನ ದ್ವಿ-ಮಾಸಿಕ ವಿತ್ತೀಯ ನೀತಿಯನ್ನು ರೂಪಿಸುವಾಗ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಕಳೆದ ತಿಂಗಳು ತನ್ನ ದ್ವಿ-ಮಾಸಿಕ ಹಣಕಾಸು ನೀತಿ ಸಭೆಯಲ್ಲಿ, ಸೆಂಟ್ರಲ್ ಬ್ಯಾಂಕ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕುಸಿತ ಜೊತೆಗೆ ಆಹಾರ ಹಣದುಬ್ಬರ ಇಳಿಕೆಗೆ ಮುಖ್ಯವಾದ ಕಾರಣ ಆಹಾರದ ಬೆಲೆಗಳು ಕಡಿಮೆಯಾಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್‌ಪಿಐ) ಅಥವಾ ಆಹಾರ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 3.41 ಕ್ಕೆ ಇಳಿದಿದೆ, ಇದು ನವೆಂಬರ್‌ನಲ್ಲಿ ಶೇ 9.50 ರಷ್ಟಿತ್ತು. ಆಹಾರ ಹಣದುಬ್ಬರವು ಶೇಕಡಾ 6 ಕ್ಕಿಂತಲೂ ಕಡಿಮೆಯಾಗಿದೆ. ತರಕಾರಿ ಬೆಲೆಗಳು ಡಿಸೆಂಬರ್‌ನಲ್ಲಿ -10.41 ರಷ್ಟು ಕುಸಿದವು.

ಇನ್ನು ನವೆಂಬರ್ ಕೈಗಾರಿಕಾ ಉತ್ಪಾದನೆಗೆ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೈಗಾರಿಕಾ ಉತ್ಪಾದನೆ (ಐಐಪಿ) 2020 ರ ನವೆಂಬರ್‌ನಲ್ಲಿ ಶೇ. 1.9 ರಷ್ಟು ಕುಸಿದು 126.3 ಕ್ಕೆ ತಲುಪಿದೆ. ಇದು ನವೆಂಬರ್ 2019 ರಲ್ಲಿ ಶೇಕಡಾ 2.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

English summary
Retail inflation, calculated on the basis of Consumer Price Index (CPI), declined to 4.59 per cent in December last year as vegetable prices plunged sharply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X