ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕಂಪನಿಗೆ ಟೈಲ್ಸ್ ವ್ಯವಹಾರದಲ್ಲಿ 300 ಕೋಟಿ ಗಳಿಕೆಯ ಗುರಿ

|
Google Oneindia Kannada News

ಬೆಂಗಳೂರು, ಜನವರಿ 30: ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲರುವ ವೀನೈಲ್ ಟೈಲ್ಸ್ ಉತ್ಪಾದಕ ಕಂಪನಿಯಾದ ರೆಸ್ಪಾನ್ಸಿವ್ ಇಂಡಸ್ಟ್ರೀಸ್ ಇತ್ತೀಚೆಗೆ ಇಂಪ್ಯಾಕ್ಟ್ ಬ್ರಾಂಡ್‍ನಡಿ ಹೊಸ ವಿಲಾಸಿ ವೀನೈಲ್ ಟೈಲ್‍ಗಳನ್ನು ಬಿಡುಗಡೆ ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಈಗಾಗಲೇ 50 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ. ಮುಂದಿನ ಮೂರು ವರ್ಷಗಳ ಒಳಗಾಗಿ ಇದು 300 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸುವ ನಿರೀಕ್ಷೆ ಇದೆ.

ರೆಸ್ಪಾನ್ಸಿವ್ ಇಂಡಸ್ಟ್ರೀಸ್, ಇಂಪ್ಯಾಕ್ಟ್ ಟೈಲ್ಸ್‍ನಲ್ಲಿ, ಭಾರತದ ಎಲ್‍ವಿಟಿ ಮಾರುಕಟ್ಟೆಗೆ ಅಪರಿಚಿತ ಎನಿಸಿದ ಡ್ರಾಪ್ ಕ್ಲಿಕ್ ತಂತ್ರಜ್ಞಾನವನ್ನು ಮೊಟ್ಟಮೊದಲ ಬಾರಿಗೆ ಬಳಸಿದೆ. ಭಾರತ ಹಾಗೂ ವಿದೇಶಗಳಲ್ಲಿ ಎಲ್‍ವಿಟಿ ವಲಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೈಲ್ಸ್ ವಲಯವಾಗಿದೆ. ಇದು ಶೇಕಡ 100ರಷ್ಟು ನೀರು ನಿರೋಧಕವಾಗಿದ್ದು, ಇತರ ಮರದ ಫ್ಲೋರಿಂಗ್‍ನಲ್ಲಿ ಈ ವಿಶೇಷತೆ ಇಲ್ಲ. ಇದರ ಇಂಟರ್‍ಲಾಕ್ (ಡ್ರಾಪ್ ಕ್ಲಿಕ್) ವ್ಯವಸ್ಥೆಯು ಜರ್ಮನ್ ಪೇಟೆಂಟ್ ಹೊಂದಿದೆ. ರೆಸ್ಪಾನ್ಸಿವ್ ಇಂಡಸ್ಟ್ರೀಸ್, ಭಾರತದಲ್ಲಿ ಏಕೈಕ ಎಲ್‍ವಿಟಿ ಉತ್ಪಾದಕ ಕಂಪನಿಯಾಗಿದ್ದು, ಭಾರತದಲ್ಲಿ ಕೆಲ ಪುಟ್ಟ ಕಂಪನಿಗಳು ಇದನ್ನು ಆಮದು ಮಾಡಿಕೊಂಡು ದೇಶದಲ್ಲಿ ಮಾರಾಟ ಮಾಡುತ್ತಿವೆ.

ನಾಲ್ಕು ಶ್ರೇಣಿಗಳಲ್ಲಿ ಟೈಲ್ಸ್ ಲಭ್ಯ

ನಾಲ್ಕು ಶ್ರೇಣಿಗಳಲ್ಲಿ ಟೈಲ್ಸ್ ಲಭ್ಯ

ಎಲ್‍ವಿಟಿ ಫ್ಲೋರಿಂಗ್ ಸಾಮಾನ್ಯವಾಗಿ ಜಾಗತಿಕವಾಗಿ ಮರ ಹಾಗೂ ಶಿಲೆಯಲ್ಲಿ ಕಂಡುಬರುವ ಎರಡು ಮಾದರಿಗಳಾಗಿವೆ. ರೆಸ್ಪಾನ್ಸಿವ್ ಇಂಡಸ್ಟ್ರಿಸ್, ನಾಲ್ಕು ಶ್ರೇಣಿಗಳನ್ನು ಆರಂಭಿಸಿದ್ದು, ಮರ, ಕಾರ್ಪೆಟ್, ಶಿಲೆ ಮತ್ತು ಅಮೃತಶಿಲೆ ಎಲ್‍ವಿಟಿಗಳನ್ನು ಭಾರತ ಹಾಗೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಎಲ್‍ವಿಟಿ ಜಾಗತಿಕವಾಗಿ ಒಟ್ಟು ಮಾರಾಟವಾಗುವ ಫ್ಲೋರಿಂಗ್ ವಹಿವಾಟಿನಲ್ಲಿ ಶೇಕಡ 52ರಷ್ಟು ಪಾಲು ಹೊಂದಿದ್ದು, ಭಾರತದಲ್ಲಿ ಈ ಪ್ರಮಾಣ ಶೇಕಡ 11ರಷ್ಟು ಮಾತ್ರ ಇದೆ.

ವೀನೈಲ್ ಫ್ಲೋರಿಂಗ್‍ಗೆ ಬೇಡಿಕೆ ಹೆಚ್ಚಾಗಿದೆ

ವೀನೈಲ್ ಫ್ಲೋರಿಂಗ್‍ಗೆ ಬೇಡಿಕೆ ಹೆಚ್ಚಾಗಿದೆ

ವೀನೈಲ್ ಫ್ಲೋರಿಂಗ್‍ಗೆ ಬೇಡಿಕೆ ಹೆಚ್ಚಲು ಪ್ರಮುಖವಾದ ಚಾಲನಾ ಅಂಶಗಳೆಂದರೆ ಅದರ ಅಸಂಖ್ಯಾತ ಪ್ರಯೋಜನಗಳು. ಇದರಲ್ಲಿ ಅಳವಡಿಕೆ ಮತ್ತು ನಿರ್ವಹಣೆ, ಮಿತವೆಚ್ಚದಾಯಕ, ತೇವಾಂಶ ನಿರೋಧಕ ಮತ್ತಿತರ ಲಕ್ಷಣಗಳು ಪ್ರಮುಖವಾಗಿವೆ. ಇಷ್ಟು ಮಾತ್ರವಲ್ಲದೇ, ಉತ್ಪಾದನಾ ವಿಧಾನದಲ್ಲಿ ಆಗಿರುವ ತಾಂತ್ರಿಕ ಸುಧಾರಣೆಗಳ ಕಾರಣದಿಂದ, ವೀನೈಲ್ ಫ್ಲೋರಿಂಗ್ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸುಧಾರಣೆಗಳಾಗಿವೆ.

ಮುಖ್ಯವಾಗಿ ಇದರ ಕ್ಷಮತೆ, ಅಳವಡಿಕೆ ಹಾಗೂ ವಿನ್ಯಾಸ ವಿಧಾನ ಎಲ್‍ವಿಟಿಗೆ ಹೆಚ್ಚು ಒತ್ತು ನೀಡಲು ಕಾರಣವಾಗಿದೆ. ಇದರ ಜತೆಗೆ ಹೆಚ್ಚುತ್ತಿರುವ ತಲಾದಾಯ ಮತ್ತು ಜೀವನ ಗುಣಮಟ್ಟದ ಹಿನ್ನೆಲೆಯಲ್ಲಿ ಗ್ರಾಹಕರು, ವಿನೂತನ ಶೈಲಿಯ ಹಾಗೂ ಅನುಶೋಧಕ ನೆಲಹಾಸು ಉತ್ಪನ್ನಗಳತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ವೀನೈಲ್ ನೆಲಹಾಸು ಉತ್ಪನ್ನಗಳಿಗೆ ಬೇಡಿಕೆ ಅಗಾಧವಾಗಿ ಹೆಚ್ಚುತ್ತಿದೆ

ಅಗ್ರಗಣ್ಯ ಮಾರುಕಟ್ಟೆ ಸಂಶೋಧನೆ ಸಂಸ್ಥೆ

ಅಗ್ರಗಣ್ಯ ಮಾರುಕಟ್ಟೆ ಸಂಶೋಧನೆ ಸಂಸ್ಥೆ

ಅಗ್ರಗಣ್ಯ ಮಾರುಕಟ್ಟೆ ಸಂಶೋಧನೆ ಸಂಸ್ಥೆ ಮತ್ತು ಮಾರುಕಟ್ಟೆ ಹಾಗೂ ಜಾಗತಿಕ ಮಟ್ಟದಲ್ಲಿ ವಹಿವಾಟು ಸಂಶೋಧನಾ ಗುಪ್ತಚರ ಮಾಹಿತಿಯನ್ನು ಒದಗಿಸುವ ಕಂಪನಿಯಾದ ಐಎಂಎಆರ್‍ಸಿ ಇತ್ತೀಚೆಗೆ ಪ್ರಕಟಿಸಿದ ತನ್ನ ಸಂಶೋಧನಾ ವರದಿಯಲ್ಲಿ ಅಂದಾಜಿಸಿದಂತೆ, 2024ರ ಒಳಗಾಗಿ ಜಾಗತಿಕವಾಗಿ ವೀನೈಲ್ ನೆಲಹಾಸು ಒಟ್ಟು ಮಾರಾಟ ಪ್ರಮಾಣ 1441 ದಶಲಕ್ಷ ಚದರ ಮೀಟರ್ ಗೆ ಹೆಚ್ಚುವ ನಿರೀಕ್ಷೆ ಇದೆ. ಮೌಲ್ಯದ ಮಾನದಂಡದಂತೆ ಇದು 2024ರ ಒಳಗಾಗಿ 66.8 ಶತಕೋಟಿ ಡಾಲರ್ ಆಗುವ ನಿರೀಕ್ಷೆ ಇದೆ. ಸಿಎಜಿಆರ್ ಪ್ರಗತಿ ಪ್ರಮಾಣ 2019-24ರ ಅವಧಿಯಲ್ಲಿ 10.1% ಆಗಲಿದೆ.

ರೆಸ್ಪಾನ್ಸಿವ್ ಇಂಡಸ್ಟ್ರೀಸ್ ಅಧ್ಯಕ್ಷ ರಿಷಭ್

ರೆಸ್ಪಾನ್ಸಿವ್ ಇಂಡಸ್ಟ್ರೀಸ್ ಅಧ್ಯಕ್ಷ ರಿಷಭ್

ಈ ಬಗ್ಗೆ ಪ್ರತಿಕ್ರಿಯಿಸಿದ ರೆಸ್ಪಾನ್ಸಿವ್ ಇಂಡಸ್ಟ್ರೀಸ್ ಅಧ್ಯಕ್ಷ ರಿಷಭ್ ಅಗರ್‍ವಾಲ್, "ವೀನೈಲ್ ನೆಲಹಾಸು ಉತ್ಪನ್ನಗಳ ಮೌಲ್ಯ ಸರಣಿಯನ್ನು ಬೆಳೆಸುವ ನಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿ ನಾವು ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. ಹೆಚ್ಚು ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳು ಕಳೆದ ಕೆಲ ವರ್ಷಗಳಲ್ಲಿ ನಮ್ಮ ತೆಕ್ಕೆಗೆ ಸೇರಿವೆ. ಇಂಪ್ಯಾಕ್ಟ್ ಬ್ರಾಂಡ್‍ನ ಪ್ರಿಮಿಯರ್ ವೀನೈಲ್ ಟೈಲ್ಸ್‍ಗಳನ್ನು ನಾವು ಬಿಡುಗಡೆ ಮಾಡಿದ್ದು, ಇದು ಮರದ ನೆಲಹಾಸು ಹಾಗೂ ವಿಟ್ರಿಫೈಡ್ ನೆಲಹಾಸುಗಳಿಗೆ ಪರ್ಯಾಯವಾಗಿದೆ. ಶೇಕಡ 50ಷ್ಟು ಅಗ್ಗದ ವೆಚ್ಚದಲ್ಲಿ ಇದರ ಅಳವಡಿಕೆ ಸಾಧ್ಯವಿರುವುದು ಇದನ್ನು ಮನೆಗಳಲ್ಲಿ, ಕಚೇರಿಗಳಲ್ಲಿ, ವ್ಯಾಪಾರ ಮಳಿಗೆಗಳಲ್ಲಿ ಅಳವಡಿಸುವುದು ಸುಲಭ ಮತ್ತಿತರ ಪ್ರಯೋಜನಗಳನ್ನು ಕೂಡಾ ಇದು ಒಳಗೊಂಡಿದೆ. ಇಂಪ್ಯಾಕ್ಟ್ ನೀವೇ ಸ್ವತಃ ಮಾಡುವ ಉತ್ಪನ್ನವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು ದೊಡ್ಡ ಪ್ರಯೋಜನ ಎನಿಸಲಿದೆ.

"ನಮ್ಮ ಇತರ ಪ್ರಮುಖ ಉತ್ಪನ್ನ ವಲಯದಲ್ಲಿ, ವೀನೈಲ್ ನೆಲಹಾಸನ್ನು ಪ್ರಮುಖವಾಗಿ ಸಾಂಸ್ಥಿಕ ವಹಿವಾಟಿನಲ್ಲಿ ಭಾರತ ಹಾಗೂ ಹೊರಗೆ ಬಿಂಬಿಸುತ್ತಿದ್ದೇವೆ. ಆರೋಗ್ಯ, ಆತಿಥ್ಯ, ಸಾರಿಗೆ, ಚಿಲ್ಲರೆ, ಕ್ರೀಡಾ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ವಲಯದಿಂದ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ" ಎಂದಿದ್ದಾರೆ.

English summary
Responsive Industries, a leading global vinyl flooring player, has launched Luxury Vinyl Tiles under the brand ‘Impact’, is expected to grow to Rs. 300 crores worth of business within the next three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X