ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ 20 ರೂ ಮುಖಬೆಲೆಯ ಹೊಸ ನೋಟು

|
Google Oneindia Kannada News

ನವದೆಹಲಿ, ಏಪ್ರಿಲ್ 27: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೊಟುಗಳನ್ನು ಬಿಡುಗಡೆ ಮಾಡಲಿದೆ.

ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇರುವ ಹೊಸ ಸರಣಿಯ ನೋಟುಗಳು ಚಲಾವಣೆಗೆ ಬರಲಿದ್ದು, ಆರ್‌fಬಿಐನ ಹೊಸ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿ ಇರಲಿದೆ.

ಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆ ಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆ

'ಹೊಸ ಮಾದರಿಯ 20 ರೂ. ಮುಖಬೆಲೆಯ ನೋಟುಗಳು ಹಸಿರು-ಹಳದಿ ವರ್ಣದ್ದಾಗಿರುತ್ತವೆ. ಒಂದು ಬದಿಯಲ್ಲಿ ಗಾಂಧೀಜಿ ಭಾವಚಿತ್ರ, ಆರ್‌ಬಿಐ ಚಿಹ್ನೆ, ಅಶೋಕ ಸ್ತಂಭ ಮತ್ತು ಆರ್‌ಬಿಐ ಗವರ್ನರ್ ಸಹಿ ಇರುತ್ತದೆ. ಇನ್ನೊಂದು ಬದಿಯಲ್ಲಿ ಭಾರತದ ಹದಿನಾಲ್ಕು ಭಾಷೆಗಳಲ್ಲಿ ರೂಪಾಯಿ ಮೌಲ್ಯ ಬರೆದಿರುವುದರ ಜತೆಗೆ, ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಎಲ್ಲೋರಾದ ಕಲ್ಲಿನ ಗುಹೆಗಳ ಚಿತ್ರ ಇರಲಿದೆ' ಎಂದು ಆರ್‌ಬಿಐನ ಹೇಳಿಕೆ ತಿಳಿಸಿದೆ.

Reserve Bank of India to issue Rs 20 denomination banknotes soon

ಹೊಸ ನೋಟುಗಳು ಚಲಾವಣೆಗೆ ಬಂದರೂ, 20 ರೂ. ಮುಖಬೆಲೆಯ ಹಳೆಯ ನೋಟುಗಳು ಎಂದಿನಂತೆ ಚಲಾವಣೆಯಲ್ಲಿ ಮುಂದುವರಿಯಲಿವೆ ಎಂದು ಅದು ಸ್ಪಷ್ಟಪಡಿಸಿದೆ.

ಎಟಿಎಂ ಮೇಲೆ 100 ಕೋಟಿ ಹೊರೆ ಹೊರಿಸಲಿದೆ 100ರ ಹೊಸ ನೋಟು ಎಟಿಎಂ ಮೇಲೆ 100 ಕೋಟಿ ಹೊರೆ ಹೊರಿಸಲಿದೆ 100ರ ಹೊಸ ನೋಟು

ಈ ನೋಟುಗಳಲ್ಲಿ ಬೇರೆ ವಿಭಿನ್ನ ವಿನ್ಯಾಸಗಳೂ ಇರಲಿದ್ದು, ಎರಡೂ ಬದಿಗಳಲ್ಲಿ ವರ್ಣಮಯವಾಗಿರಲಿವೆ. ಹೊಸ ನೋಟುಗಳು 63*129 ಮಿ.ಮೀ. ಗಾತ್ರ ಹೊಂದಿರುತ್ತವೆ. ಮುಂಬದಿಯಲ್ಲಿ ಸಂಖ್ಯೆಯ ಚಿತ್ರವಿದ್ದು, ದೇವನಾಗರಿಯಲ್ಲಿ ಬರೆದ ಸಂಖ್ಯೆಯೂ ಇರಲಿದೆ. ಜತೆಗೆ ವಾಟರ್‌ಮಾರ್ಕ್‌ನಲ್ಲಿ ಬರೆದ ಸಂಕೇತಾಕ್ಷರಗಳನ್ನು ಒಳಗೊಂಡಿರಲಿದೆ.

English summary
The Reserve Bank of India (RBI) has announced that it will issue Rs 20 denomination banknotes soon. The new note will be Greenish-Yellow in color.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X