ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RBI ಮಹತ್ವದ ನಿರ್ಧಾರ: ಕರೆನ್ಸಿ ನೋಟಿನಲ್ಲಿ ಗಾಂಧಿ ಜೊತೆ ಮತ್ತಿಬ್ಬರ ಚಿತ್ರ?

|
Google Oneindia Kannada News

ನವದೆಹಲಿ/ಮುಂಬೈ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಚಿತ್ರದ ಜೊತೆಗೆ, ಮತ್ತಿಬ್ಬರು ದೇಶದ ಗಣ್ಯರ ಚಿತ್ರವನ್ನೂ ಹಾಕಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಕರೆನ್ಸಿ ನೋಟುಗಳಲ್ಲಿ ಬಹು ಅಂಕಿಗಳ ವಾಟರ್‌ ಮಾರ್ಕ್‌ ಬಳಸುವ ಉದ್ದೇಶದಿಂದ ಗಾಂಧೀಜಿ ಜೊತೆಗೆ ರವೀಂದ್ರನಾಥ ಟ್ಯಾಗೋರ್ ಮತ್ತು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಚಿತ್ರವೂ ಮುಂದಿನ ದಿನಗಳಲ್ಲಿ ಕರೆನ್ಸಿ ನೋಟಿನಲ್ಲಿ ಬರುವ ಸಾಧ್ಯತೆಯಿದೆ.

ಭಾರತದಲ್ಲಿ ಮುಂದಿನ ವಾರ ಮತ್ತೆ ರೆಪೋ ದರ ಹೆಚ್ಚಿಸುತ್ತಾ ಆರ್‌ಬಿಐ? ಭಾರತದಲ್ಲಿ ಮುಂದಿನ ವಾರ ಮತ್ತೆ ರೆಪೋ ದರ ಹೆಚ್ಚಿಸುತ್ತಾ ಆರ್‌ಬಿಐ?

ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI ) ಕೆಲವು ಮುಖಬೆಲೆಯ ಹೊಸ ಸರಣಿಯ ಬ್ಯಾಂಕ್‌ ನೋಟುಗಳಲ್ಲಿ ಟ್ಯಾಗೋರ್ ಮತ್ತು ಅಬ್ದುಲ್ ಕಲಾಂ ಅವರ ವಾಟರ್‌ ಮಾರ್ಕ್ ಚಿತ್ರವನ್ನು ಬಳಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

Reserve Bank Of India May Add Two More Images In Currency Notes

ಕೇಂದ್ರ ವಿತ್ತ ಖಾತೆಯ ಅಧೀನದಲ್ಲಿರುವ ಸೆಕ್ಯೂರಿಟಿ ಪ್ರಿಂಟಿಂಗ್ ಆಂಡ್ ಮಿಂಟಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ, ಮೂವರು ಮಹನೀಯರ ಚಿತ್ರವಿರುವ ಎರಡು ಸೆಟ್ ಕರೆನ್ಸಿ ನೋಟನ್ನು ದೆಹಲಿಯ ಐಐಟಿ ಪ್ರಾಧ್ಯಾಪಕ ದಿಲೀಪ್ ಶಹಾನಿ ಅವರಿಗೆ ಪರಿಶೀಲನೆಗಾಗಿ ಕಳುಹಿಸಿಕೊಟ್ಟಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಎರಡು ವಿಭಿನ್ನ ಸೆಟ್ ಕರೆನ್ಸಿ ನೋಟುಗಳ ಪೈಕಿ ಒಂದನ್ನು ಅಂತಿಮಗೊಳಿಸಿ ಕೇಂದ್ರ ವಿತ್ತ ಸಚಿವಾಲಯಕ್ಕೆ ಕಳುಹಿಸಿಕೊಡುವಂತೆ ಐಐಟಿ ಪ್ರಾಧ್ಯಾಪಕ ಶಹಾನಿ ಅವರಿಗೆ ಸೂಚಿಸಲಾಗಿದೆ. ಉನ್ನತ ಮಟ್ಟದ ಸಭೆಯ ನಂತರ ಈ ಬಗ್ಗೆ ಅಂತಿಮ ನಿರ್ಧಾರವನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳಲಾಗುವುದು.

Reserve Bank Of India May Add Two More Images In Currency Notes

ರಿಸರ್ವ್ ಬ್ಯಾಂಕಿನ ಆಂತರಿಕ ಸಮಿತಿಯು ಎರಡು ವರ್ಷದ ಕೆಳಗೆಯೇ ಗಾಂಧಿ ಜೊತೆ ಟ್ಯಾಗೋರ್ ಮತ್ತು ಕಲಾಂ ಅವರ ಚಿತ್ರವನ್ನು ಸೇರಿಸುವಂತೆ ಪ್ರಸ್ತಾವಿಸಿತ್ತು. ಈ ಹಿನ್ನಲೆಯಲ್ಲಿ ವಿನ್ಯಾಸವನ್ನು ಸಿದ್ದ ಪಡಿಸುವಂತೆ ಮೈಸೂರು ಮತ್ತು ಹೊಶಂಗಾಬಾದ್ ನಲ್ಲಿರುವ ಕರೆನ್ಸಿ ನೋಟ್ ಮುದ್ರಣಾಲಯಕ್ಕೆ ಸೂಚನೆ ನೀಡಲಾಗಿತ್ತು.

English summary
Reserve Bank Of India May Add Two More Images In Currency Notes. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X