ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್ ನಲ್ಲಿ 13,341 ಕೋಟಿ ರೂ. ಹೂಡಿಕೆಗೆ ಮುಂದಾದ ಅಮೆಜಾನ್

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 2: ದೈತ್ಯ ಆನ್ ಲೈನ್ ಮಾರಾಟ ತಾಣಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ನಡುವೆ ಹೂಡಿಕೆ ಮಾತುಕತೆಯೊಂದು ಚಾಲ್ತಿಯಲ್ಲಿದೆ.

ಫ್ಲಿಪ್ ಕಾರ್ಟ್ ನಲ್ಲಿ ಶೇಕಡಾ 60 ಶೇರುಗಳನ್ನು ಪಡೆದುಕೊಳ್ಳುವ ಆಫರ್ ನ್ನು ಅಮೆಜಾನ್ ಮುಂದಿಟ್ಟಿದೆ ಎಂಬುದಾಗಿ ಇಂಗ್ಲೀಷ್ ವಾಣಿಜ್ಯ ವಾಹಿನಿಗಳು ವರದಿ ಮಾಡಿವೆ. 2 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 13,341 ಕೋಟಿ ರೂಪಾಯಿಯ ಆಫರ್ ಇದಾಗಿದೆ. ಈ ಹಿಂದೆ ವಾಲ್ ಮಾರ್ಟ್ ಕೂಡ ಫ್ಲಿಪ್ ಕಾರ್ಟ್ ನಲ್ಲಿ ದೊಡ್ಡ ಮೊತ್ತದ ಹೂಡಿಕೆಯ ಆಫರ್ ಮುಂದಿಟ್ಟಿತ್ತು.

ಹಾಗೆ ನೋಡಿದರೆ ವಾಲ್ ಮಾರ್ಟ್ ಜೊತೆಗಿನ ಡೀಲ್ ಗೆ ಫ್ಲಿಪ್ ಕಾರ್ಟ್ ಸಂಸ್ಥಾಪಕರು ಮತ್ತು ಹೂಡಿಕೆದಾರರು ಆಸಕ್ತರಾಗಿದ್ದರು ಮತ್ತು ಸಂಸ್ಥಾಪಕ ಸಚಿನ್ ಬನ್ಸಾಲ್ ಕೊಡು ಕೊಳ್ಳುವಿಕೆ ಸಂಬಂಧ ವಾಲ್ ಮಾರ್ಟ್ ಜೊತೆಗೆ ಚರ್ಚೆ ನಡೆಸುತ್ತಿದ್ದರು ಎಂದು ವಾಹಿನಿಗಳು ಹೇಳಿವೆ.

Report: Amazon Offers To Buy 60% Stake In Flipkart

ಜೂನ್ ನಲ್ಲಿ ವಾಲ್ ಮಾರ್ಟ್ ಜೊತೆಗಿನ ಒಪ್ಪಂದ ಅಂತಿಮಗೊಳ್ಳಬಹುದು ಎಂದು ಈ ಹಿಂದೆ ರಾಯಟರ್ಸ್ ವರದಿ ಮಾಡಿತ್ತು.

ಇದೀಗ ಅಮೆಜಾನ್ ಹೂಡಿಕೆಗೆ ಮುಂದಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ದೊಡ್ಡ ಪ್ರಮಾಣದ ಶೇರನ್ನು ವಶಕ್ಕೆ ಪಡೆಯಲು ಅಮೆಜಾನ್ ಮತ್ತು ವಾಲ್ ಮಾರ್ಟ್ ಹಣಾಹಣಿಗೆ ಇಳಿದಿದ್ದು ಇದರಿಂದ ಫ್ಲಿಪ್ ಕಾರ್ಟ್ ಮೌಲ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

English summary
Online retailer Amazon has made a offer to buy a 60 per cent stake in another Bengaluru based online retailer Flipkart at the cost of 13,341 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X