ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ರೆನಾಲ್ಟ್‌ ಕಿಗರ್ ಎಸ್‌ಯುವಿ ಬಿಡುಗಡೆ: ವೈಶಿಷ್ಟತೆ ಏನು?

|
Google Oneindia Kannada News

ನವದೆಹಲಿ, ಜನವರಿ 28: ರೆನಾಲ್ಟ್‌ ಕಂಪನಿಯು ತನ್ನ ಬಹುನಿರೀಕ್ಷಿತ ರೆನಾಲ್ಟ್‌ ಕಿಗರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ, ಸಾಕಷ್ಟು ಹೊಸ ವೈಶಿಷ್ಟ್ಯಗಳು, ಉಪಕರಣಗಳು ಮತ್ತು ತಂತ್ರಜ್ಞಾನ ಮತ್ತು ಅನೇಕ ಎಂಜಿನ್ ಆಯ್ಕೆಗಳೊಂದಿಗೆ ಪರಿಚಯಿಸಲಾಗಿರುವ ರೆನಾಲ್ಟ್ ಕಿಗರ್‌ ಗ್ರಾಹಕರನ್ನು ಆಕರ್ಷಿಸಲು ಮಾರುಕಟ್ಟೆ ಪ್ರವೇಶಿಸಿದೆ.

ರೆನಾಲ್ಟ್ ಕಿಗರ್ ಆಲ್-ಎಲ್ಇಡಿ ಹೆಡ್ಲೈಟ್ ಸೆಟಪ್, ಕ್ರೋಮ್ ಮಾದರಿಯೊಂದಿಗೆ ಫ್ರಂಟ್ ಗ್ರಿಲ್, ಫ್ಲಾಟ್ ಬಾನೆಟ್ ಹೊಂದಿದೆ. ಇದಕ್ಕೆ ಎಸ್‌ಯುವಿ-ಕೂಪ್ ತರಹದ ವಿನ್ಯಾಸವನ್ನು ನೀಡಲಾಗಿದ್ದು, ಸ್ಲೈಡಿಂಗ್ ರೂಫ್‌ಲೈನ್‌ನೊಂದಿಗೆ ಕಪ್ಪು ಹೊರ ಭಾಗವನ್ನು ಹೊಂದಿದೆ.

 ಟಾಟಾ ಸಫಾರಿ ಹೊಸ ಎಸ್‌ಯುವಿ ಬಿಡುಗಡೆ: ಬೆಲೆ, ವೈಶಿಷ್ಟತೆ ಏನು? ಟಾಟಾ ಸಫಾರಿ ಹೊಸ ಎಸ್‌ಯುವಿ ಬಿಡುಗಡೆ: ಬೆಲೆ, ವೈಶಿಷ್ಟತೆ ಏನು?

ರೆನಾಲ್ಟ್ ಹೊಸ ಕಿಗರ್ ಕಾರು ಮಾದರಿಯು ವಿಭಿನ್ನವಾದ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ನಾಲ್ಕು ಮೀಟರ್‌ಗಿಂತಲೂ ಕಡಿಮೆ ಉದ್ದಳತೆಯೊಂದಿಗೆ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

Renault Kiger compact SUV officially unveiled in India

ಹಾಗೆಯೇ ಹೊಸ ಕಿಗರ್ ಕಾರಿನಲ್ಲಿ ಬ್ಲ್ಯಾಕ್ ಔಟ್ ಹೊಂದಿರುವ ಸಿ ಪಿಲ್ಲರ್, ಸ್ಪೋಟಿಯಾಗಿರುವ ಸ್ಪಾಯ್ಲರ್, ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಕಿಗರ್‌ನ ಎಲ್ಲಾ ರೂಪಾಂತರಗಳು ಮಾರುತಿ ಸುಜುಕಿ ವಿಟಾರಾ ಬ್ರೀಜಾ, ಟೊಯೋಟಾ ಅರ್ಬನ್ ಕ್ರೂಸರ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಫೋರ್ಡ್ ಇಕೋಸ್ಪೋರ್ಟ್, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಗಳ ಪ್ರತಿಸ್ಪರ್ಧಿಗಳಾಗಿವೆ.

English summary
Renault India has just unveiled their first sub-4 meter compact SUV – the Kiger. Designed specifically for India and other emerging markets across the globe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X