ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿ ಆ್ಯಪ್ ಗಳನ್ನು ಕೊಲ್ಲುವ ಈ ಆ್ಯಪ್ ಹೆಚ್ಚು ಡೌನ್‌ಲೋಡ್ ಆಗ್ತಿದೆ

|
Google Oneindia Kannada News

ಸದ್ಯ ಭಾರತ-ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕೊರೊನಾವೈರಸ್ ಹರಡುವುದಕ್ಕೆ ಚೀನಾ ಮುಖ್ಯ ಕಾರಣ ಎಂದು ಜನರು ಕಿಡಿ ಕಾರುತ್ತಿದ್ದಾರೆ. ಚೀನಾ ವಸ್ತುಗಳನ್ನು ಬಳಸಬೇಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಪ್ರಚಾರವೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಚೀನಾ ಆ್ಯಪ್‌ಗಳನ್ನೆಲ್ಲಾ ಡಿಲೀಟ್ ಮಾಡಿ ಹಾಕುತ್ತೆ ಈ ಒಂದು ಆ್ಯಪ್.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಈ ಅಪ್ಲಿಕೇಶನ್ ಹೆಸರು "Remove China Apps". ಮೇ 17 ರಂದು ಬಿಡುಗಡೆಯಾಗಿರುವ ಈ ಆ್ಯಪ್ ಸದ್ಯ ಗೂಗಲ್ ಪ್ಲೇ ಸ್ಟೋರ್ ನ ಟಾಪ್ ಫ್ರೀ ಆ್ಯಪ್‌ಗಳ ಪಟ್ಟಿಗೆ ಸೇರಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆ್ಯಪ್ 1 ಮಿಲಿಯನ್ ಅಂದರೆ 10 ಲಕ್ಷ ಬಳಕೆದಾರರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದೆ.

70 ಲಕ್ಷ BHIM ಆ್ಯಪ್ ಬಳಕೆದಾರರ ದಾಖಲೆಗಳು ಲೀಕ್70 ಲಕ್ಷ BHIM ಆ್ಯಪ್ ಬಳಕೆದಾರರ ದಾಖಲೆಗಳು ಲೀಕ್

Remove China Apps Has Gone Viral In India

Remove China Apps ಪ್ರಸ್ತುತ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. 3.5 MB ಗಾತ್ರದ ಈ ಅಪ್ಲಿಕೇಶನ್ ಇಂಟರ್ಫೆಸ್ ತುಂಬಾ ಸುಲಭವಾಗಿದೆ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಒಮ್ಮೆ ಸ್ಕ್ಯಾನ್ ಬಟನ್ ಅನ್ನು ಕ್ಲಿಕ್ಕಿಸಬೇಕು. ನಂತರ ಈ ಆಪ್ ನಿಮ್ಮ ಮೊಬೈಲ್ ಅನ್ನು ಸ್ಕ್ಯಾನ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಯಾವ ಯಾವ ಚೈನೀಸ್ ಆ್ಯಪ್ಗಳಿವೆ ಎಂಬುದನ್ನು ನಿಮಗೆ ತಿಳಿಸಲಿದೆ. ಒಂದು ವೇಳೆ ಆ ಎಲ್ಲ ಆ್ಯಪ್‌ಗಳನ್ನು ಡಿಲೀಟ್ ಮಾಡಲು ನೀವು ಅನುಮತಿ ನೀಡಿದರೆ, ಅದು ನಿಮ್ಮ ಮೊಬೈಲ್ ನಿಂದ ಎಲ್ಲಾ ಚೈನೀಸ್ ಆಪ್ ಗಳನ್ನು ತೆಗೆದುಹಾಕಲಿದೆ.

Remove China Apps ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.8 ಬಳಕೆದಾರರ ರೇಟಿಂಗ್ ಪಡೆದಿದೆ.

English summary
Remove China Apps, an Android app that claims to identify China-made apps on your Android phone has gone viral in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X