ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಪ್ಲೇ ಸ್ಟೋರ್‌ನಿಂದ ಹೆಚ್ಚು ಡೌನ್‌ಲೋಡ್‌ ಆಗ್ತಿದ್ದ 'Remove china apps' ಡಿಲೀಟ್

|
Google Oneindia Kannada News

ದೆಹಲಿ, ಜೂನ್ 2: ಗೂಗಲ್ ಪ್ಲೇ ಸ್ಟೋರ್‌ನಿಂದ ಚೀನಾ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ ಹಾಕುವ 'Remove china apps' ಅನ್ನು ತೆಗೆದುಹಾಕಲಾಗಿದೆ. ಈ ಹಿಂದೆ ಟಿಕ್‌ಟ್ಯಾಕ್ ಪ್ರತಿಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಮಿಟ್ರಾನ್ ಅಪ್ಲಿಕೇಶನ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಇದೀಗ ಅದರ ಜೊತೆಗೆ 'Remove china apps' ಕೂಡ ಬಳಕೆದಾರರಿಗೆ ಸಿಗುತ್ತಿಲ್ಲ.

ನಿಮ್ಮ ಮೊಬೈಲ್‌ನಲ್ಲಿ ಚೀನಾ ಅಪ್ಲಿಕೇಶನ್‌ಗಳನ್ನು ಗುರುತಿಸಿ ಡಿಲೀಟ್ ಮಾಡಲು ಅನುಮತಿ ಕೇಳುತ್ತಿದ್ದ 'Remove china apps' ಅನ್ನು ಏಕೆ ತೆಗೆದುಹಾಕಲಾಗಿದೆ ಅಥವಾ ಅದು ಮತ್ತೆ ಲಭ್ಯವಾಗುತ್ತದೆಯೋ ಇಲ್ಲವೋ ಎಂಬುದನ್ನು ಟೆಕ್ ದೈತ್ಯ ದೃಢಪಡಿಸಿಲ್ಲ.

ಆ್ಯಪ್ ಡಿಲೀಟ್ ಕುರಿತು ಟ್ವಿಟರ್‌ನಲ್ಲಿ ಘೋಷಣೆ

ಆ್ಯಪ್ ಡಿಲೀಟ್ ಕುರಿತು ಟ್ವಿಟರ್‌ನಲ್ಲಿ ಘೋಷಣೆ

ಅಪ್ಲಿಕೇಶನ್‌ನ ಡೆವಲಪರ್ ಜೈಪುರ ಮೂಲದ OneTouchAppLabs ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ನಲ್ಲಿ ಘೋಷಿಸಿದೆ. ಆದರೆ ಅಪ್ಲಿಕೇಶನ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ಸಂಸ್ಥೆಯು ಖಚಿತಪಡಿಸಿಲ್ಲ.

ಟಿಕ್‌ಟಾಕ್‌ಗೆ ಸೆಡ್ಡು ಹೊಡೆದಿದ್ದ 'ಮಿತ್ರೋ'ಗೆ ಗೇಟ್‌ಪಾಸ್ ನೀಡಿದ ಗೂಗಲ್ಟಿಕ್‌ಟಾಕ್‌ಗೆ ಸೆಡ್ಡು ಹೊಡೆದಿದ್ದ 'ಮಿತ್ರೋ'ಗೆ ಗೇಟ್‌ಪಾಸ್ ನೀಡಿದ ಗೂಗಲ್

ಪ್ಲೇ ಸ್ಟೋರ್‌ ನಿಯಮ ಉಲ್ಲಂಘಿಸಿದರೆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ

ಪ್ಲೇ ಸ್ಟೋರ್‌ ನಿಯಮ ಉಲ್ಲಂಘಿಸಿದರೆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ

ಗೂಗಲ್ ಪ್ಲೇ ಸ್ಟೋರ್‌ ಸಾಮಾನ್ಯವಾಗಿ ತನ್ನ ನೀತಿಗಳನ್ನು ಉಲ್ಲಂಘಿಸುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುತ್ತದೆ. ಈ ಹಿಂದೆ ಟಿಕ್‌ಟಾಕ್‌ ಪ್ರತಿಸ್ಫರ್ಧಿಯಾಗಿ ಹುಟ್ಟಿಕೊಂಡಿದ್ದ ಮಿಟ್ರಾನ್‌ ಆ್ಯಪ್‌ಗೂ ಇದೇ ಆಯಿತು. ಸಿಎನ್‌ಬಿಸಿಟಿವಿ 18 ವರದಿಯು ಟೆಕ್ ದೈತ್ಯ ಅಪ್ಲಿಕೇಶನ್ ಅನ್ನು ರೆಡ್ ಫ್ಲ್ಯಾಗ್ ಮಾಡಿದೆ ಮತ್ತು ಅದರ ಸ್ಪ್ಯಾಮ್ ಮತ್ತು ಕನಿಷ್ಠ ಕ್ರಿಯಾತ್ಮಕತೆ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ಅಮಾನತುಗೊಳಿಸಲು ನಿರ್ಧರಿಸಿದೆ.

ಏನಿದು 'Remove china apps'

ಏನಿದು 'Remove china apps'

ಹೆಸರೇ ಸೂಚಿಸುವಂತೆ, ಚೀನಾ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದೇ ಇದರ ಕೆಲಸ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದ ಈ ಅಪ್ಲಿಕೇಶನ್ ಹೆಸರು "Remove China Apps". ಮೇ 17 ರಂದು ಬಿಡುಗಡೆಯಾಗಿರುವ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನ ಟಾಪ್ ಫ್ರೀ ಆ್ಯಪ್‌ಗಳ ಪಟ್ಟಿಗೆ ಸೇರಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಆ್ಯಪ್ 1 ಮಿಲಿಯನ್ ಅಂದರೆ 10 ಲಕ್ಷ ಬಳಕೆದಾರರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿತ್ತು.

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಒಮ್ಮೆ ಸ್ಕ್ಯಾನ್ ಬಟನ್ ಅನ್ನು ಕ್ಲಿಕ್ಕಿಸಬೇಕಿತ್ತು. ನಂತರ ಈ ಆ್ಯಪ್ ನಿಮ್ಮ ಮೊಬೈಲ್ ಅನ್ನು ಸ್ಕ್ಯಾನ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಯಾವ ಯಾವ ಚೈನೀಸ್ ಆ್ಯಪ್‌ಳಿವೆ ಎಂಬುದನ್ನು ನಿಮಗೆ ತಿಳಿಸಲಿದೆ. ಒಂದು ವೇಳೆ ಆ ಎಲ್ಲ ಆ್ಯಪ್‌ಗಳನ್ನು ಡಿಲೀಟ್ ಮಾಡಲು ನೀವು ಅನುಮತಿ ನೀಡಿದರೆ, ಅದು ನಿಮ್ಮ ಮೊಬೈಲ್ ನಿಂದ ಎಲ್ಲಾ ಚೈನೀಸ್ ಆಪ್ ಗಳನ್ನು ತೆಗೆದುಹಾಕಲಿದೆ. ಹೀಗಾಗಿ ಪ್ಲೇ ಸ್ಟೋರ್ ನಲ್ಲಿ 4.8 ಬಳಕೆದಾರರ ರೇಟಿಂಗ್ ಪಡೆದಿತ್ತು.

ಆದರೆ ಈ ಆ್ಯಪ್ ಸದ್ಯ ತನ್ನ ನೀತಿಗಳನ್ನು ಉಲ್ಲಂಘಿಸಿದೆ ಎಂದು ಗೂಗಲ್ ಪ್ಲೇ ಸ್ಟೋರ್ ತೆಗೆದುಹಾಕಿದೆ. ಆದರೆ ಈಗಾಗಲೇ ಡೌನ್‌ಲೋಡ್ ಮಾಡಿಕೊಂಡಿರುವವರಿಗೆ ಈ ಆ್ಯಪ್‌ ಕಾರ್ಯ ನಿರ್ವಹಿಸಲಿದೆ.

ಟಿಕ್‌ಟ್ಯಾಕ್‌ ಪ್ರತಿಸ್ಪರ್ಧಿಯಾಗಲು ಹೊರಟ್ಟಿದ್ದ ಮಿಟ್ರಾನ್‌ಗೂ ಅದೇ ಗತಿ

ಟಿಕ್‌ಟ್ಯಾಕ್‌ ಪ್ರತಿಸ್ಪರ್ಧಿಯಾಗಲು ಹೊರಟ್ಟಿದ್ದ ಮಿಟ್ರಾನ್‌ಗೂ ಅದೇ ಗತಿ

ಚೀನಾ ಮೂಲದ ಆ್ಯಪ್ ಟಿಕ್‌ಟಾಕ್‌ ಬಳಕೆ ಕಮ್ಮಿ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಚಾರ ನಡೆದಿದೆ. ಇದರ ನಡುವೆ ದೇಸಿ ಕಿರು ವೀಡಿಯೊ ತಯಾರಿಕೆ ಅಪ್ಲಿಕೇಶನ್ ಒಂದು ಹುಟ್ಟಿಕೊಂಡಿತು. ಐಐಟಿ ರೂರ್ಕಿ ವಿದ್ಯಾರ್ಥಿ ಶಿವಂಕ್ ಅಗರ್ವಾಲ್ ಅವರು ಟಿಕ್‌ಟಾಕ್‌ನ ಭಾರತೀಯ ಆವೃತ್ತಿಯನ್ನು ಮಿಟ್ರಾನ್ ಎಂದು ಅಭಿವೃದ್ಧಿಪಡಿಸಿದ್ದರು. ಟಿಕ್‌ಟಾಕ್‌ಗೆ ಟಕ್ಕರ್ ನೀಡುತ್ತಿದ್ದ ಈ ಆ್ಯಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ಗಳೊಂದಿಗೆ ಭಾರತೀಯ ಬಳಕೆದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಗೂಗಲ್ ಪ್ಲೇ ಸ್ಟೋರ್‌ನಿಂದ ಇದನ್ನು ತೆಗೆದುಹಾಕಲಾಗಿತ್ತು.

English summary
After Mitron app Remove china Apps now taken down from google Play Store. However, even the firm didn’t confirm why the app has been removed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X