• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್‌ ನಿಂದ ಸ್ಕೈಟ್ರಾನ್ ಇಂಕ್‌ನಲ್ಲಿ ಅಧಿಕಾಂಶ ಈಕ್ವಿಟಿ ಪಾಲುದಾರಿಕೆ ಖರೀದಿ

|

ಮುಂಬೈ, ಮಾರ್ಚ್1: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ರಿಲಯನ್ಸ್ ಸ್ಟ್ರಾಟೆಜಿಕ್ ಬಿಸಿನೆಸ್ ವೆಂಚರ್ಸ್ ಲಿಮಿಟೆಡ್ (ಆರ್‌ಎಸ್‌ಬಿವಿಎಲ್) , ಸ್ಕೈಟ್ರಾನ್ ಇಂಕ್‌ನಲ್ಲಿ (ಸ್ಕೈಟ್ರಾನ್) 26.76 ಮಿಲಿಯನ್ ಅಮೆರಿಕನ್ ಡಾಲರುಗಳ ಮೊತ್ತದ ಹೆಚ್ಚುವರಿ ಷೇರುಗಳನ್ನು ಖರೀದಿಸಿದೆ. ಇದರಿಂದಾಗಿ ರಿಲಯನ್ಸ್ ಸಂಸ್ಥೆಯು ಹೊಂದಿರುವ ಷೇರುಗಳ ಪ್ರಮಾಣ ಫುಲ್ಲಿ ಡೈಲ್ಯೂಟೆಡ್ ಆಧಾರದ ಮೇಲೆ ಶೇ.54.46ಕ್ಕೆ ಏರಿಕೆಯಾಗಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ (ಯುಎಸ್‌ಎ) ಡೆಲಾವೇರ್‌ನ ಕಾನೂನುಗಳಡಿ 2011 ರಲ್ಲಿ ಸ್ಥಾಪಿತವಾದ ಸ್ಕೈಟ್ರಾನ್ ಒಂದು ತಂತ್ರಜ್ಞಾನ ಸಂಸ್ಥೆಯಾಗಿದೆ. ಜಾಗತಿಕವಾಗಿ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸುವ ಗುರಿಯೊಂದಿಗೆ ವೈಯಕ್ತಿಕ ಸಾರಿಗೆ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಆವಿಷ್ಕಾರಿಯಾದ ಪ್ಯಾಸಿವ್ ಮ್ಯಾಗ್ನೆಟಿಕ್ ಲೆವಿಟೇಶನ್ ಮತ್ತು ಪ್ರೊಪಲ್ಷನ್ ತಂತ್ರಜ್ಞಾನವನ್ನು ಸ್ಕೈಟ್ರಾನ್ ಅಭಿವೃದ್ಧಿಪಡಿಸಿದೆ.

2021ರ ಹೊಸ ಜಿಯೋಫೋನ್‌ನಿಂದ ಏನೆಲ್ಲ ಕೊಡುಗೆ ಸಿಗಲಿದೆ? 2021ರ ಹೊಸ ಜಿಯೋಫೋನ್‌ನಿಂದ ಏನೆಲ್ಲ ಕೊಡುಗೆ ಸಿಗಲಿದೆ?

ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ರೂಪಿಸಲು ಸ್ಕೈಟ್ರಾನ್ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತಾವಿತ ಸ್ಕೈಟ್ರಾನ್ ಸಾರಿಗೆ ವ್ಯವಸ್ಥೆಗಳು ಅದರ ಅತ್ಯಾಧುನಿಕ, ಪೇಟೆಂಟ್ ಪಡೆದ ಪ್ಯಾಸಿವ್ ಮ್ಯಾಗ್ನೆಟಿಕ್ ಲೆವಿಟೇಶನ್ ತಂತ್ರಜ್ಞಾನ ಬಳಸುವ ಕಂಪ್ಯೂಟರ್-ನಿಯಂತ್ರಿತ ಪ್ರಯಾಣಿಕರ ಪಾಡ್‌ಗಳನ್ನು ಒಳಗೊಂಡಿರುತ್ತವೆ ಹಾಗೂ ವೇಗವಾಗಿ, ಸುರಕ್ಷಿತವಾಗಿ, ಪರಿಸರ ಸ್ನೇಹಿಯಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅತ್ಯಾಧುನಿಕ ಐಟಿ, ಟೆಲಿಕಾಂ, ಐಒಟಿ ಮತ್ತು ಸುಧಾರಿತ ಮೆಟೀರಿಯಲ್ಸ್ ತಂತ್ರಜ್ಞಾನಗಳನ್ನು ಬಳಸುತ್ತವೆ. ಇನ್ನೋವೇಶನ್ ಎಂಡೀವರ್ಸ್‌ನಂತಹ ಗಮನಾರ್ಹ ಜಾಗತಿಕ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರಿಂದಲೂ ಇದಕ್ಕೆ ಬೆಂಬಲ ವ್ಯಕ್ತವಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ಸ್ಕೈಟ್ರಾನ್‌ನಲ್ಲಿ ಅಧಿಕಾಂಶ ಈಕ್ವಿಟಿ ಪಾಲುದಾರಿಕೆ ಪಡೆದುಕೊಂಡಿರುವುದು, ಜಗತ್ತನ್ನು ಪರಿವರ್ತಿಸುವ ಭವಿಷ್ಯದ ತಂತ್ರಜ್ಞಾನಗಳನ್ನು ನಿರ್ಮಿಸುವುದಕ್ಕಾಗಿ ಹೂಡಿಕೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತಿವೇಗದ ಅಂತರ್ ಮತ್ತು ಅಂತರ-ನಗರ ಸಂಪರ್ಕದ ಮೇಲೆ ಹೆಚ್ಚಿನ ಪ್ರಭಾವ ಬೀರಬಲ್ಲ ಸ್ಕೈಟ್ರಾನ್ ಸಾಮರ್ಥ್ಯ ಹಾಗೂ ಭಾರತ ಮತ್ತು ಪ್ರಪಂಚದ ಉಳಿದ ಭಾಗಗಳಿಗೆ ಹೆಚ್ಚಿನ ವೇಗದ, ಹೆಚ್ಚು ಪರಿಣಾಮಕಾರಿಯಾದ ಮತ್ತು ಕಡಿಮೆ ವೆಚ್ಚದ 'ಟ್ರಾನ್ಸ್‌ಪೋರ್ಟೇಶನ್-ಆಸ್-ಎ-ಸರ್ವಿಸ್' ವೇದಿಕೆಯನ್ನು ಒದಗಿಸುವ ಅದರ ಕೌಶಲದಿಂದ ನಾವು ಉತ್ಸುಕರಾಗಿದ್ದೇವೆ. ಮಾಲಿನ್ಯರಹಿತ, ಹೆಚ್ಚಿನ ವೇಗದ ವೈಯಕ್ತಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯು ಪರ್ಯಾಯ ಶಕ್ತಿಯನ್ನು ಸಮರ್ಥವಾಗಿ ಬಳಸುವುದರ ಮೂಲಕ ಪರಿಸರ ಸುಸ್ಥಿರತೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ಗಾಳಿ ಮತ್ತು ಶಬ್ದ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ'' ಎಂದು ಹೇಳಿದ್ದಾರೆ.

ಜಿಯೋ ಈಗ ವಿಶ್ವದ 5ನೇ ಅತ್ಯಂತ ಪ್ರಬಲ ಬ್ರ್ಯಾಂಡ್ಜಿಯೋ ಈಗ ವಿಶ್ವದ 5ನೇ ಅತ್ಯಂತ ಪ್ರಬಲ ಬ್ರ್ಯಾಂಡ್

ಕಾನೂನು ಸಂಸ್ಥೆಗಳಾದ ಕೋವಿಂಗ್ಟನ್ ಆಂಡ್ ಬರ್ಲಿಂಗ್ ಎಲ್ಎಲ್‌ಪಿ ಹಾಗೂ ಫ್ರೆಶ್‌ಫೀಲ್ಡ್ಸ್ ಬ್ರುಕ್‌ಹೌಸ್ ಡೆರಿಂಜರ್ ಯುಎಸ್ ಎಲ್‌ಎಲ್‌ಪಿ, ರಿಲಯನ್ಸ್ ಇಂಡಸ್ಟ್ರೀಸ್‌ಗೆ ಕ್ರಮವಾಗಿ ಕಾನೂನು ಸಲಹೆಗಾರ ಮತ್ತು ಐಪಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿವೆ.

English summary
Reliance Strategic Business Ventures Limited has acquired additional equity stake in its investee company skyTran Inc. (“skyTran”) for a consideration of USD 26.76 million increasing its shareholding to 54.46% on a fully diluted basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X