ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಮಹಾಲಕ್ಷ್ಮಿ ಹಬ್ಬದಂದು ಗ್ರಾಹಕರಿಗೆ ಟ್ರೆಂಡ್ಸ್ ವಿಶಿಷ್ಟ ಸ್ಪರ್ಧೆ

|
Google Oneindia Kannada News

ಬೆಂಗಳೂರು ಆಗಸ್ಟ್ 08: ಭಾರತದ ಅತಿ ದೊಡ್ಡ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ರಿಲಯನ್ಸ್ ರೀಟೇಲ್‌ನ ಉಡುಪು ಹಾಗೂ ಇತರೆ ಸಾಮಗ್ರಿಗಳ ಮಾರಾಟ ಮಳಿಗೆ ಟ್ರೆಂಡ್ಸ್, ವರಮಹಾಲಕ್ಷ್ಮಿ ಹಬ್ಬದ ಸುಸಂದರ್ಭದಲ್ಲಿ ಆಸಕ್ತಿಕರ ಸ್ಪರ್ಧೆಯೊಂದರ ಮೂಲಕ ಕರ್ನಾಟಕದಲ್ಲಿನ ತನ್ನ ಗ್ರಾಹಕರೊಂದಿಗಿನ ನಂಟನ್ನು ಬಲಪಡಿಸಿಕೊಳ್ಳುತ್ತಿದೆ.

ವರಮಹಾಲಕ್ಷ್ಮಿ ವ್ರತವು ಸಂಪತ್ತು ಮತ್ತು ಸಮೃದ್ಧಿ ದೇವತೆ, ಲಕ್ಷ್ಮಿಯನ್ನು ಆರಾಧಿಸುವ ಹಬ್ಬ. ಕರ್ನಾಟಕದಲ್ಲಿ ಮಹಿಳೆಯರು ಇದನ್ನು ಅಪಾರ ಭಕ್ತಿ, ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿನ ತನ್ನ ಅಸ್ತಿತ್ವ ಹಾಗೂ ವಿಭಿನ್ನ ನಗರಗಳನ್ನು ತಲುಪುವ ಮೂಲಕ ಟ್ರೆಂಡ್ಸ್, ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಆಸಕ್ತಿಕರ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಟ್ರೆಂಡ್ಸ್ ವರಮಹಾಲಕ್ಷ್ಮಿ ಅಲಂಕಾರ ಸ್ಪರ್ಧೆ:

ವರಮಹಾಲಕ್ಷ್ಮಿ ಹಬ್ಬವು ಲಕ್ಷ್ಮಿ ದೇವಿಯ ಆರಾಧನೆಗೆ ಸಂಬಂಧಿಸಿದ್ದು. ಇಲ್ಲಿ ದೇವಿಯ ವಿಗ್ರಹವನ್ನು ಸೀರೆ, ಆಭರಣಗಳು, ಹೂವುಗಳು ಮತ್ತು ಇತರೆ ಪೂಜಾ ಪರಿಕರಗಳು ಹಾಗೂ ಸಾಮಗ್ರಿಗಳಿಂದ ಅಲಂಕರಿಸುವ ಹಾಗೂ ಸಿಂಗರಿಸುವ ಮೂಲಕ ಭಕ್ತಿಯ ಉತ್ಕೃಷ್ಟತೆಯನ್ನು ಪ್ರದರ್ಶಿಸಲಾಗುತ್ತದೆ.

ಈ ಮಂಗಳಕರ ಹಬ್ಬದ ವೇಳೆ ಟ್ರೆಂಡ್ಸ್ ಈ ವರ್ಷ ಕೂಡ ತನ್ನ ಗ್ರಾಹಕರೊಂದಿಗೆ ಬೆಸೆದುಕೊಳ್ಳಲು ಮುಂದಾಗಿದೆ. ತಾವು ಶೃಂಗಾರ ಮಾಡಿದ ವಿಗ್ರಹ ಅಥವಾ ಲಕ್ಷ್ಮಿ ದೇವಿಯ ಪೂಜೆಯ ಸಂದರ್ಭದಲ್ಲಿ ತೆಗೆದುಕೊಂಡ ಸೆಲ್ಫಿ/ಚಿತ್ರವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ #TrendsVaramahalakshmi ಎಂಬ ಹ್ಯಾಷ್‌ಟ್ಯಾಗ್ ಬಳಸಿ ಹಂಚಿಕೊಳ್ಳುವಂತೆ ಗೃಹಿಣಿಯರಿಗೆ ವಿಶೇಷ ಸ್ಪರ್ಧೆಯ ಆಹ್ವಾನವನ್ನು ನೀಡುತ್ತಿದೆ.

Reliance Trends announces Varamahalakshmi Contest

''ಅತ್ಯುತ್ತಮ ಅಲಂಕೃತ ದೇವಿ/ಲಕ್ಷ್ಮಿ ದೇವತೆ'' (ಅದ್ದೂರಿ ಪೂಜಾ ಅಲಂಕಾರ) ಎಂದು ಗುರುತಿಸಲಾಗುವ ಚಿತ್ರಕ್ಕೆ ಮೊದಲ ಬಹುಮಾನವಾಗಿ 1,500 ರೂಪಾಯಿ ಮೌಲ್ಯದ ಸೀರೆಯನ್ನು ನೀಡಲಾಗುವುದು. ಮಾತ್ರವಲ್ಲ, ಪ್ರತಿ ಸ್ಪರ್ಧಿಗೂ ಟ್ರೆಂಡ್ಸ್ ವಿನಾಯಿತಿ ಕೂಪನ್ ಸಿಗಲಿದ್ದು, ಅದನ್ನು ಅವರು ಸಮೀಪದ ಟ್ರೆಂಡ್ಸ್ ಮಳಿಗೆಯಿಂದ ಪಡೆದುಕೊಳ್ಳಬಹುದಾಗಿದೆ.

ವಾಟ್ಸಾಪ್, ಎಸ್‌ಎಂಎಸ್ ಮತ್ತು ಮನೆಯಿಂದ ಮನೆಗೆ ಹಂಚಿಕೆಯಿಂದ ಗ್ರಾಹಕರನ್ನು ತಲುಪುವ ಟ್ರೆಂಡ್ಸ್ ಲೀಫ್ಲೆಟ್‌ಗಳ ಮೂಲಕ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು.

ಆಯಾ ಪಟ್ಟಣದಲ್ಲಿನ ಕಲಾ ಶಿಕ್ಷಕರು ಪ್ರವೇಶಕ್ಕೆ ಬಂದ ಚಿತ್ರಗಳನ್ನು ಪರಿಶೀಲಿಸಿ ತೀರ್ಪು ನೀಡಲಿದ್ದಾರೆ. ಮೊದಲ ಬಹುಮಾನದ ವಿಜೇತರನ್ನು ಆಯಾ ಪಟ್ಟಣದ ಟ್ರೆಂಡ್ಸ್ ಮಳಿಗೆಗೆ ಆಹ್ವಾನಿಸಲಾಗುವುದು. ವಿಜೇತೆಗೆ ರೂ. 1500/- ಮೌಲ್ಯದ ಸೀರೆಯನ್ನು ಅಲ್ಲಿನ ಖ್ಯಾತ ಮಹಿಳಾ ವೈದ್ಯರು ಅಥವಾ ಪಾಲಿಕೆ/ಪೊಲೀಸ್ ಇಲಾಖೆಯಂತಹ ಸರಕಾರಿ ಕಚೇರಿಯೊಂದರ ಹಿರಿಯ ಮಹಿಳಾ ಅಧಿಕಾರಿ ನೀಡಲಿದ್ದಾರೆ.

ಮಹಿಳೆಯರೇ, ಲಕ್ಷ್ಮಿ ದೇವತೆಯೆಡೆಗಿನ ನಿಮ್ಮ ಭಕ್ತಿ ಮತ್ತು ವರಮಹಾಲಕ್ಷ್ಮಿ ಹಬ್ಬದ ನಿಮ್ಮ ಅತ್ಯುತ್ಸಾಹವು ನಿಮಗೆ ರೂ. 1500/- ಮೌಲ್ಯದ ಸೀರೆಯನ್ನು ಗೆದ್ದುಕೊಡಬಲ್ಲದು. ಮತ್ತೇಕೆ ತಡ, ಟ್ರೆಂಡ್ಸ್ ವರಮಹಾಲಕ್ಷ್ಮಿ ಸ್ಪರ್ಧೆಯಲ್ಲಿ ಭಾಗವಹಿಸಿ, ದೇವಿಯ ಆಕರ್ಷಕ ಅಲಂಕಾರದ ಮೂಲಕ ಗಮನ ಸೆಳೆಯಿರಿ! ಈ ಸ್ಪರ್ಧೆ ಆಗಸ್ಟ್ 22ರಂದು ಅಂತ್ಯಗೊಳ್ಳಲಿದೆ.

ಹೆಚ್ಚಿನ ವಿವರಗಳಿಗೆ, ದಯವಿಟ್ಟು ನಿಮ್ಮ ಪಟ್ಟಣದ ಸಮೀಪದಲ್ಲಿನ ಟ್ರೆಂಡ್ಸ್ ಮಳಿಗೆಯನ್ನು ಸಂಪರ್ಕಿಸಿ.

ಟ್ರೆಂಡ್ಸ್ ಬಗ್ಗೆ: 858 ನಗರಗಳಾದ್ಯಂತ 1,500ಕ್ಕೂ ಅಧಿಕ ಮಳಿಗೆಗಳ ಪ್ರಬಲ ನೆಟ್‌ವರ್ಕ್ ಹೊಂದಿರುವ ಟ್ರೆಂಡ್ಸ್, ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ನೆಲೆಯಾಗಿದೆ. ಇದು ನೂರಕ್ಕೂ ಹೆಚ್ಚು ದೇಶೀ ಹಾಗೂ ಅಂತಾರಾಷ್ಟ್ರೀಯ ಉಡುಪುಗಳು ಮತ್ತು ಸಾಮಗ್ರಿ ಬ್ರ್ಯಾಂಡ್‌ಗಳನ್ನು ಹೊಂದಿದ್ದು, ಪ್ರತಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ ತನ್ನದೇ ಆದ 20 ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.

ರಿಲಯನ್ಸ್ ಟ್ರೆಂಡ್ಸ್‌ನ ಸ್ವಂತ ಬ್ರ್ಯಾಂಡ್‌ಗಳಲ್ಲಿ ಕೆಲವವು, ಆವಾಸ- ಮಹಿಳೆಯರಿಗಾಗಿ ವಿವಿಧ ಶ್ರೇಣಿಯ ಭಾರತೀಯ ದಿರಿಸುಗಳಾದ ಸಲ್ವಾರ್ ಕುರ್ತಾ, ಚೂಡಿದಾರ್ ಹಾಗೂ ಮಿಕ್ಸ್- ಎನ್-ಮ್ಯಾಚ್‌ ಶ್ರೇಣಿಯ ಉಡುಪುಗಳ ಅತ್ಯುತ್ತಮ ಸಂಗ್ರಹಗಳನ್ನು ಇದು ಹೊಂದಿದೆ. ರಿಯೋ- ಯುವ ಮಹಿಳೆಯರಿಗಾಗಿ ಆಕರ್ಷಕ ರೋಮಾಂಚನಕಾರಿ ಶ್ರೇಣಿಯ ಉಡುಪುಗಳು. ಫಿಗ್- ಸೂಕ್ಷ್ಮ, ಸ್ವತಂತ್ರ ಮತ್ತು ವೃತ್ತಿಪರ ಮಹಿಳೆಯರಿಗಾಗಿ ಫ್ಯಾಷನ್ ಉಡುಪು. ಫ್ಯೂಷನ್- ಪೂರ್ವ ಮತ್ತು ಪಶ್ಚಿಮದ ಬೆಸುಗೆ ಹಾಗೂ ಹಿತಕರ ಮತ್ತು ಆಕರ್ಷಕ ಶೈಲಿಯ ಮಹಿಳಾ ಫ್ಯೂಷನ್ ಉಡುಪುಗಳ ಶ್ರೇಣಿ. ನೆಟ್‌ವರ್ಕ್- ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಶ್ರೇಣಿಯ ಫಾರ್ಮಲ್ ಆಫೀಸ್ ಉಡುಗೆಗಳನ್ನು ಒಳಗೊಂಡಿದೆ.

English summary
India’s largest and fastest growing apparel and accessories specialty chain from Reliance Retail, is strengthening connect with its consumers through an interesting contest during the auspicious festival of Varamahalakshmi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X