• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಪಾಲಾದ ಬೆಂಗಳೂರು ಮೂಲದ ಅರ್ಬನ್ ಲ್ಯಾಡರ್

|

ನವದೆಹಲಿ, ನ.15: ಗೃಹಬಳಕೆ ಉತ್ಪನ್ನಗಳ ಆನ್ ಲೈನ್ ಸಗಟು ಮಾರಾಟ ತಾಣ ಅರ್ಬನ್ ಲ್ಯಾಡರ್ ಈಗ ರಿಲಯನ್ಸ್ ರೀಟೇಲ್ ಪಾಲಾಗಿದೆ.

ಅರ್ಬಲ್ ಲ್ಯಾಡರ್ ಸಂಸ್ಥೆಯ ಶೇ 96ರಷ್ಟು ಪಾಲನ್ನು 182 ಕೋಟಿ ರು ಮೊತ್ತಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಖರೀದಿಸಿದೆ ಎಂದು ಷೇರುಪೇಟೆಗೆ ತಿಳಿಸಲಾಗಿದೆ. ಡಿಸೆಂಬರ್ 2023ರೊಳಗೆ ಪೀಠೋಪಕರಣ ಮಾರಾಟ ಸಂಸ್ಥೆ ಅರ್ಬನ್ ಲ್ಯಾಡರ್ ಮೇಲೆ 75 ಕೋಟಿ ರು ಹೂಡಿಕೆ ಮಾಡುವುದಾಗಿ ಆರ್ ಐಎಲ್ ಹೇಳಿದೆ.

ಸೌದಿಯ PIFನಿಂದ ರಿಲಯನ್ಸ್‌ನಲ್ಲಿ 9,555 ಕೋಟಿ ಹೂಡಿಕೆ

2012ರಲ್ಲಿ ಬೆಂಗಳೂರು ಮೂಲದ ಅರ್ಬನ್ ಲ್ಯಾಡರ್ ಸ್ಥಾಪನೆಯಾಯಿತು. ಆಶೀಶ್ ಗೊಯೆಲ್ ಹಾಗೂ ರಾಜೀವ್ ಶ್ರೀವಾಸ್ತವ ಅವರ ಕನಸಿನ ಸಂಸ್ಥೆ ಇದಾಗಿದ್ದು, ಆರ್ ಐಎಲ್ ಗೂ ಮುನ್ನ ಅನೇಕ ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆದುಕೊಂಡಿತ್ತು. ಕಲಾರಿ ಕ್ಯಾಪಿಟಲ್ಸ್, ಸೈಫ್ ಪಾರ್ಟ್ನರ್ಸ್, ಸಿಕ್ಯೂಯಾ ಕ್ಯಾಪಿಟಲ್ಸ್, ಸ್ಟೀಡ್ ವ್ಯೂ ಕ್ಯಾಪಿಟಲ್ ಮುಂತಾದ ಸಂಸ್ಥೆಗಳು ಹೂಡಿಕೆ ಮಾಡಿದ್ದವು. ರಿಲಯನ್ಸ್ ಜೊತೆ ಹಲವು ತಿಂಗಳ ಮಾತುಕತೆ ನಂತರ ಕೊನೆಗೂ ಒಪ್ಪಂದವಾಗಿದೆ.

ಅರ್ಬನ್ ಲ್ಯಾಡರ್ ಕಳೆದ ವರ್ಷ ಸುಮಾರು 434 ಕೋಟಿ ರು ವಾರ್ಷಿಕ ಟರ್ನ್ ಓವರ್ ಜೊತೆಗೆ 49.41 ಕೋಟಿ ರು ನಷ್ಟ ಅನುಭವಿಸಿದೆ.

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ RRVLಗೆ ಇದೆ.

ಸೆಪ್ಟೆಂಬರ್ 30, 2020ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2020-21ರ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 10,602 ರೂ. ನಿವ್ವಳ ಲಾಭವಾಗಿದ್ದು, ಕಳೆದ ತ್ರೈಮಾಸಿಕದ ಹೋಲಿಕೆಯಲ್ಲಿ (ಎಕ್ಸೆಪ್ಷನಲ್ ಐಟಮ್‌ಗೆ ಮೊದಲು) ಇದು ಶೇ. 28ರಷ್ಟು ಏರಿಕೆ ಕಂಡಿದೆ. ಆದರೆ ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ನಿವ್ವಳ ಲಾಭ ಶೇ 15ರಷ್ಟು ಕುಸಿತವಾಗಿದೆ.

English summary
Reliance Retail has acquired home-products online retailer Urban Ladder, capping months of talks between the two companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X